ಕಲಬುರಗಿ: ಸಿನೀಮಯ ರೀತಿಯಲ್ಲಿ ಚೇಸ್ ಮಾಡಿ ಲಂಚ ಸ್ವೀಕರಿಸುತ್ತಿರುವ ಇಬ್ಬರು ಪೇದೆಗಳನ್ನ ಲೋಕಾಯುಕ್ತ ತಂಡ ಹಿಡಿದಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ..

ಅಕ್ರಮ ಮರಳು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೇವರ್ಗಿ ಠಾಣೆ ಅವಣ್ಣ ಮತ್ತು ಶಿವರಾಯ ಈ ಇಬ್ಬರೂ ಪೇದೆಗಳು ಲೋಕಾ ತಂಡಕ್ಕೆ ಲಾಕ್ ಆಗಿದ್ದಾರೆ. ಶಹಪುರದ ಅಖಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಫೀಲ್ಡಿಗಿಳಿದ ಲೋಕಾ ಟೀಂ ದಾಳಿ ಮಾಡಿದೆ.

ಹೈವೇ ರೋಡಲ್ಲಿ ವೆಹಿಕಲ್ ಅಡ್ಡಗಟ್ಟಿ ಟ್ರಾಪ್ ಮಾಡಿದ ಹಣದ ಸಮೇತ ಒಬ್ಬ ಹೆಡ್ ಕಾನ್ಟೇಬಲ್ ಮತ್ತೊಬ್ಬ ಪೋಲೀಸ್ ಜೀಪ್ ಚಾಲಕ ಒಟ್ಟು ಇಬ್ಬರನ್ನ ಬಂಧಿಸಿ ಎಫ್ಐಆರ್ ಮಾಡಿದ್ದಾರೆ.

ಮರಳು ವ್ಯವಹಾರದಲ್ಲಿ ಲಂಚವಾಗಿ 30 ಸಾವಿರ ಸ್ವೀಕರಿಸುತ್ತಿರುವಾಗ ಜೇವರ್ಗಿಯಲ್ಲಿ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ತಂಡ ದಾಳಿ ನಡೆಸಿ ಪೊಲೀಸ್‌ ಪೇದೆ ಶಿವರಾಯ, ಜೇವರ್ಗಿ ಸಿಪಿಐ ವಾಹನ ಚಾಲಕ ಅವ್ವಣ್ಣ ಇವರನ್ನು ತಕ್ಷಣ ಸ್ಥಳದಲ್ಲೇ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಿಪಿಐ ಅವರ ಹೆಸರು ಬಂಧಿತರಿಬ್ಬರೂ ಪ್ರಸ್ತಾಪಿಸಿದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಜೇವರ್ಗಿ ಸಿಪಿಐ ಶಿವಪ್ರಸಾದ್‌ ಇವರನ್ನೂ ವಿಚಾರಣೆಗೆ ಕರೆದೊಯ್ದಿದ್ದಾರೆ.

error: Content is protected !!