ಮುಂಡಗೋಡ: ತಾಲೂಕಿನಲ್ಲಿ ಇದುವರೆಗೂ ಬಸ್ ಮುಖವನ್ನೇ ಕಾಣದ ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಇಂದು ಪ್ರತಿಭಟನೆಗಿಳಿದಿದ್ದಾರೆ. ನಮಗೆ ಬಸ್ ಬೇಕೇ ಬೇಕು ಅಂತಾ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದ್ದಾರೆ.
ಅಂದಹಾಗೆ, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳಿಗೆ ಇದುವರೆಗೂ ಬಸ್ ಸೌಲಭ್ಯ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿ ನಿತ್ಯವೂ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕು ಅಂದ್ರೆ ಏನಿಲ್ಲವೆಂದರೂ ನಾಲ್ಕೈದು ಕೀ.ಮಿ ನಡೆದುಕೊಂಡೇ ಬರಬೇಕು. ಅಲ್ದೆ ಗ್ರಾಮಸ್ಥರು ಕೂಡ ನಿತ್ಯವೂ ಹುನಗುಂದ ಗ್ರಾಮಕ್ಕೆ ಬಂದು ಬಸ್ ಹಿಡಿಯಬೇಕು.
ಇನ್ನು ಮಳೆಗಾಲದಲ್ಲಂತೂ ಈ ಭಾಗದ ಜನ್ರು, ಗ್ರಾಮದಿಂದ ತಾಲೂಕಾ ಕೇಂದ್ರಕ್ಕೆ ಬರಲು ಪರದಾಡುವಂತಾಗುತ್ತದೆ. ಹೀಗಾಗಿ ತಕ್ಷಣವೇ ನಮಗೆ ಬಸ್ ವ್ಯವಸ್ಥೆ ಮಾಡಿ ಅಂತಾ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.
ವಿ.ಎಸ್.ಪಾಟೀಲ್ ಭೇಟಿ..!
ಇನ್ನು ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ, ಮಾಜಿ NWKSRTC ಅಧ್ಯಕ್ಷ ವಿ.ಎಸ್.ಪಾಟೀಲ್ ಭೇಟಿ ನೀಡಿದ್ರು. ಪ್ರತಿಭಟನಾ ನಿರತರ ಜೊತೆ ಮಾತನಾಡಿದ್ರು. ಅಲ್ದೇ ತಕ್ಷಣವೇ NWKSRTC ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ್ರು. ಹೀಗಾಗಿ, ಪ್ರತಿಭಟನಾ ನಿರತರು ಪ್ರತಿಭಟನೆಯಿಂದ ಕೈ ಬಿಟ್ರು. ಒಂದು ವೇಳೆ ಬಸ್ ವ್ಯವಸ್ಥೆ ಆಗದೇ ಹೋದಲ್ಲಿ ಮತ್ತೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ರು.