ಮುಂಡಗೋಡ: ಪ್ರಿಯ ವೀಕ್ಷಕರೇ, ನಿನ್ನೆ ನಿಮಗೆ ಮುಂಡಗೋಡ ತಾಲೂಕಿನಲ್ಲಿ ಬಡವ್ರಿಗೆ ಹಂಚಿಕೆಯಾಗೋ ಮನೆಗಳಲ್ಲಿ ನಡೆಯುತ್ತಿರೋ ಎತ್ತುವಳಿ ಪುರಾಣದ ಬಗ್ಗೆ ಹೇಳಿದ್ವಿ. ನೊಂದ ಸಂತ್ರಸ್ಥ ಕುಟುಂಬಗಳ ಆರ್ತನಾದ ಕೇಳಿಸಿದ್ವಿ. ಇವತ್ತೂ ಕೂಡ ಅದರದ್ದೇ ಮುಂದುವರಿದ ಭಾಗವಾಗಿ ಅದೊಂದು ಮನಕಲುಕುವ ಹಕೀಕತ್ತು ತಮ್ಮ ಮುಂದೆ ಇಡ್ತಿದಿವಿ. ರೊಕ್ಕ ಗಳಿಸಲೆಂದೇ ಬಾಯ್ತೆರೆದು ಕೂತಿರೋ, ಮನುಷ್ಯತ್ವವನ್ನೇ ಮರೆತಿರೋ ಕೆಲವು ಸರ್ಕಾರಿ ಸಿಬ್ಬಂದಿಗಳು ಹೇಗೇಲ್ಲ ಅಮಾನುಷವಾಗಿ ನಡೆದುಕೊಳ್ತಾರೆ ಅನ್ನೋದನ್ನ ಇವತ್ತು ಹೇಳ್ತಿವಿ.


ವೇದಿಕೆಯಷ್ಟೇ..!
ಯಸ್, ನಾವೀಗ ಮುಂಡಗೋಡಿನ ತಹಶೀಲ್ದಾರ್ ಕಚೇರಿಯ ಅವನೊಬ್ಬನ ಗತ್ತು, ಗಮ್ಮತ್ತುಗಳು ಅದೇಷ್ಟು ಬಡವರಿಗೆ ಮಾರಕವಾಗಿದೆ ಅನ್ನೋದನ್ನ ಹೇಳೋಕೆ ಹೊರಟಿದ್ದಿವಿ. ಅಸಲು, ಇಲ್ಲಿ ನಾವು ಏನನ್ನೂ ಹೇಳ್ತಿಲ್ಲ. ಬದಲಾಗಿ ನೊಂದವರೇ ಅಸಲೀ ಹಕೀಕತ್ತುಗಳನ್ನು ಹೇಳಿಕೊಂಡಿದ್ದಾರೆ. ಇಲ್ಲಿ ನಮ್ಮದೇನೂ ಇಲ್ಲ. ನೊಂದವರು ಆಡಿರೋ ನೋವಿನ ಕಹಾನಿಗಳನ್ನೇಲ್ಲ ತಮ್ಮ ಮುಂದೆ ಯಥಾವತ್ತಾಗಿ ತೆರೆದಿಡಲು ನಾವು ಜಸ್ಟ್ ವೇದಿಕೆಯನ್ನಷ್ಟೇ ಒದಗಿಸಿದ್ದಿವಿ.

ಕಳಕಳಿ..!
ನಮ್ಮ ಹೆಮ್ಮೆಯ ದಕ್ಷ ತಹಶೀಲ್ದಾರ್ ಶಂಕರ್ ಗೌಡಿಯವರೇ, ಇದನ್ನೇಲ್ಲ ನೋಡಿದ ಮೇಲೆ ತಾವು ತಮ್ಮ ಸಿಬ್ಬಂದಿಗಳ ಮೇಲೆ ಅದೇನು ಕ್ರಮ ಕೈಗೊಳ್ತಿರೋ, ಬಿಡ್ತಿರೋ ಅದು ನಮಗೆ ಬೇಕಿಲ್ಲ.. ಆದ್ರೆ ಈ ಬಡ ವೃದ್ದೆಗೆ ಸಾಧ್ಯವಾದ್ರೆ ಒಂದು‌ನ್ಯಾಯ ಒದಗಿಸಿ ಕೊಡಿ.. ಅದೇ ನಮ್ಮ ಕಳಕಳಿ..

ಅವಳು ನಾಗವೇಣಿ..!
ಅದು ಮುಂಡಗೋಡ ತಾಲೂಕಿನ ಗಡಿಯ ಭಾಗ, ಮುಂಡಗೋಡಿನಿಂದ ಏನಿಲ್ಲವೆಂದ್ರೂ 40 ಕೀಮಿ ದೂರದಲ್ಲಿರೋ ಹಳ್ಳಿ, ನೀವು ಮಳಗಿಯಿಂದ ಕೂರ್ಲಿ ಮಾರ್ಗವಾಗಿ ಬೆಡಸಗಾಂವ್ ಸಮೀಪ ಹೋದ್ರೆ, ದಟ್ಟ ಕಾನನದ ಕಡುಕಷ್ಟ ದಾರಿಯಲ್ಲಿ ಸಾಗಿದಾಗ ಕೇವಲ ನಾಲ್ಕೇ ನಾಲ್ಕು ಮನೆಯಿರೋ ಅದೊಂದು ಪುಟ್ಟ ಹಳ್ಳಿ ಸಿಗತ್ತೆ. ಆ ಹಳ್ಳಿಯ ಹೆಸರೇ “ಕೇದಿಗೆ ಸರ”. ಅಸಲು, ಈ ಹಳ್ಳಿಗೆ ಹೋಗಬೇಕು ಅಂದ್ರೆ ನೀವು ಅಕ್ಷರಶಃ ಪರದಾಡ ಬೇಕಾಗತ್ತೆ. ಮಳೆಗಾಲದಲ್ಲಂತೂ ಜೀವ ಅಂಗೈಯಲ್ಲೇ ಹಿಡಿದು ಸಾಗಬೇಕು. ಹೀಗಿರೋ ಈ ಹಳ್ಳಿಯ ನಾಲ್ಕು ಮನೆಗಳ ಪೈಕಿ ಅದೊಂದು ಪುಟ್ಟ ಗುಡಿಸಲು ನಿಮಗೆ ಕಾಣತ್ತೆ. ಆ ಗುಡಿಸಲಿನಲ್ಲಿ ಕಣ್ಣೀರಲ್ಲೇ ಕೈ ತೊಳೆಯುತ್ತ ದಿನ ಕಳೆಯುತ್ತಿರೋ ಅದೊಂದು ವೃದ್ದ ಬಡ ಜೀವ ನಿತ್ಯವೂ ತಹಶೀಲ್ದಾರ ಕಚೇರಿಯ ಅವನೊಬ್ಬನಿಗೆ ಹಿಡಿಶಾಪ ಹಾಕತ್ತೆ. ಯಾಕಂದ್ರೆ ಅವಳು ಅನುಭವಿಸ್ತಿರೋ ನರಕ ಯಾತನೆಗೆ ನೇರವಾಗಿ ಅವನೇ ಕಾರಣ ಅಂತಾ ಆ ವೃದ್ದೆ ಆಕ್ರೋಶದಲ್ಲೇ ಕಣ್ಣೀರಾಗಿ ಶಾಪ ಹಾಕ್ತಾಳೆ. ಅಂದಹಾಗೆ ಆಕೆಯ ಹೆಸರೇ ನಾಗವೇಣಿ ಅಕ್ಕಾ..!

ಅದು 2019..!
ನಿಮಗೆ ನೆನಪಿರಬಹುದು, 2019 ರಲ್ಲಿ ಈ ವರ್ಷದಂತೆ ಮಹಾಮಳೆಗೆ ಇಡೀ ಉತ್ತರ ಕನ್ನಡ ಜಿಲ್ಲೆ ಬಸವಳಿದು ಹೋಗಿತ್ತು. ಅದೇಷ್ಟೋ ಅನಾಹುತಗಳು ಜಿಲ್ಲೆಯ ಮಂದಿಗೆ ಜೀವ ಹಿಂಡಿತ್ತು. ಆ ಹೊತ್ತಲ್ಲೇ ಮಹಾಮಳೆಯಿಂದ ತನಗಿದ್ದ ಮನೆಯನ್ನು ಕಳೆದುಕೊಂಡಿದ್ದವಳು ಈ ನಾಗವೇಣಿ ಅಕ್ಕ‌. ಇವಳ ಇನ್ನೊಂದು ಕರುಣಾಜನಕ ಕತೆಯೆಂದ್ರೆ ವಯಸ್ಸು 60 ರ ಆಸುಪಾಸಿನಲ್ಲಿದ್ರೂ ಇವತ್ತಿಗೂ ಮದುವೆಯಾಗಿಲ್ಲ. ತಂದೆ ಇಲ್ಲ, ತಾಯಿ ಇಲ್ಲ. ದಟ್ಟ ಕಾಡಿನ ಮದ್ಯೆ ಅದೊಂದು ಪುಟ್ಟ ಗುಡಿಸಲಿನಲ್ಲಿ ಬದುಕು ನಡೆಸಿದ್ದಳು. ಆದ್ರೆ, ಮಳೆಯನ್ನೋ ರಾಕ್ಷಸ ಆವಗುಡಿಸಲನ್ನೂ ಅಪೋಶನ ತೆಗೆದುಕೊಂಡಿದ್ದ. ಹೀಗಾಗಿ, ಈ ವೃದ್ದೆ ತನಗೂ ಒಂದು ಬದುಕಲು ಅವಕಾಶ ಕೊಡಿ, ನಂಗೊಂದು ಮನೆ ಕೊಡಿ ಅಂತಾ ತಹಶೀಲ್ದಾರ ಕಚೇರಿಗೆ ಅಂಗಲಾಚಿದ್ದಳು. ಪರಿಣಾಮ ಆಕೆಗೊಂದು 5 ಲಕ್ಷ ಮೊತ್ತದ ಮನೆಯೂ ಮಂಜೂರಿಯಾಗಿತ್ತು. ಹಾಗೆ ಮಂಜೂರಿಯಾದ ಮನೆ ಕಟ್ಟಿಕೊಳ್ಳಲು ಆ ಬಡ ಜೀವ ಸಾಕಷ್ಟು ಪರದಾಡಿತ್ತು. ಮನೆಯ ಅಡಿಪಾಯ ಹಾಕಿ ಮೊದಲ ಹಂತ ಬಿಲ್ ಕುಇಡ ಪಡೆದಿದ್ದ ವೃದ್ದೆಗೆ ಅವತ್ತು ಇದೇ ತಹಶೀಲ್ದಾರ್ ಕಚೇರಿಯ ಕೆಲವರು ಹಣ ಪೀಕಿದ್ರಂತೆ.

ಅಂದಹಾಗೆ, ಮುಂದಿನ ಕಹಾನಿ ಏನು ಅಂತಾ ಆ ವೃದ್ದೆಯ ಬಾಯಿಂದಲೇ ಕೇಳಿ, ಅವತ್ತು ಅದೇನೆಲ್ಲ ಆಗಿದೆ..? ಅದರ ಸಂಪೂರ್ಣ ವೃತ್ತಾಂತವಾದ್ರೂ ಏನು ಅಂತಾ ಖುದ್ದು ಆ ಬಡ ವೃದ್ದೆಯೇ ಹಂಚಿಕೊಂಡಿದ್ದಾಳೆ. ಅದರ ಸಂಪೂರ್ಣ ಹಕೀಕತ್ತು ನಿಮ್ಮ ಮುಂದೆ ಇಡಲಾಗಿದೆ. ದಯವಿಟ್ಟು ವೀಕ್ಷಿಸಿ.

error: Content is protected !!