ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ಇಬ್ಬರ ಮೃತ ದೇಹ ಪತ್ತೆ..!


ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಪತ್ತೆಯಾಗಿದೆ.

ಮನೆಯಲ್ಲಿ ಮಲುಗಿದ್ದಾಗ ಗುಡ್ಡ ಕುಸಿದು ನಾಲ್ವರು ಮನೆಯ ಅಡಿಯಲ್ಲ ಸಿಲುಕಿದ್ದರು, ಹೀಗಾಗಿ, ಸದ್ಯ ಇಬ್ಬರ ಶವವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆಗಿದ್ದಾರೆ. ಲಕ್ಷ್ಮಿ ನಾಯ್ಕ ಎನ್ನುವವರ ಮನೆಯ ಮೇಲೆ ಗುಡ್ಡ ಕುಸಿತ ವಾಗಿತ್ತು. ಲಕ್ಷ್ಮೀ ನಾಯ್ಕ, ಆಕೆಯ ಪುತ್ರಿ ಲಕ್ಷ್ಮೀ ನಾಯ್ಕ, ಪುತ್ರ ಅನಂತ ನಾಯ್ಕ (32) ಹಾಗೂ ಸಹೋದರಿಯ ಮಗ ಪ್ರವೀಣ್ ನಾಯ್ಕ (20) ಗುಡ್ಡ ಕುಸಿತದಿಂದ ಸಿಲುಕಿಕೊಂಡಿದ್ದರು. ಅವರಲ್ಲಿ ಓರ್ವ ಮಹಿಳೆ, ಓರ್ವ ಪುರುಷನ ಶವ ಹೊರತೆಗೆಯಲಾಗಿದೆ.

error: Content is protected !!