ಗೌರವಧನ ಹೆಚ್ಚಳ ಸೇರಿ, ವಿವಿಧ ಬೇಡಿಕೆ ಈಡೇರಿಸುವಂತೆ ಅತಿಥಿ ಶಿಕ್ಷಕರಿಂದ ಸರ್ಕಾರಕ್ಕೆ ಮನವಿ..!

ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಂದು ಅತಿಥಿ ಶಿಕ್ಷಕರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು.

ಶಿಕ್ಷಣ ಇಲಾಖೆಯ ಗುರಿ ಸಾಧನೆಗಾಗಿ ಹಾಗೂ ಮಕ್ಕಳ ಕಲಿಕಾ ಹಿತ ದೃಷ್ಠಿಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಸದ್ಯ, ಸರ್ಕಾರವು ನಿಗಧಿಪಡಿಸಿದ ಗೌರವಧನದಿಂದ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ, ಕನಿಷ್ಠ 25 ಸಾವಿರ ರೂ. ಗೌರವಧನ ನಿಗಧಿ ಮಾಡಬೇಕು. ಅಲ್ಲದೆ, ಸರ್ಕಾರ ನೀಡುತ್ತಿರೋ ಗೌರವಧನ, ನೇಮಕಗೊಂಡು 2 ತಿಂಗಳು ಕಳೆಯುತ್ತಿದ್ದರೂ ಇದುವರೆಗೂ ಕೈ ಸೇರಿಲ್ಲ. ಹೀಗಾಗಿ ನಾವು ಬದುಕು ನಡೆಸುವುದೇ ದುಸ್ತರವಾಗಿದೆ‌.

ಈ ಕಾರಣಕ್ಕಾಗಿ, ಕಷ್ಟದಲ್ಲಿರುವ ನಮಗೆ ಗೌರವಧನ ಹೆಚ್ಚಳದೊಂದಿಗೆ ಗೌರವಧನ ಶೀಘ್ರ ಬಿಡುಗಡೆ ಮಾಡಬೇಕು. ಗೌರವಧನ ಬಿಡುಗಡೆಯ ನಂತರ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ಅಲ್ಲದೇ, ತಿಂಗಳಿಗೆ ಒಂದು ರಜೆ ಪಡೆಯಲು ಅವಕಾಶ ನೀಡಬೇಕು. ಅತಿಥಿ ಶಿಕ್ಷಕರಿಗೂ ಗುರುತಿನ ಚೀಟಿ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಅಂತಾ ಅತಿಥಿ ಶಿಕ್ಷಕರು ಸರ್ಕಾರಕ್ಕೆ ಮನವಿ ಮೂಲಕ ಆಗ್ರಹಿಸಿದ್ದಾರೆ.

error: Content is protected !!