ನಂದಿಪುರ ಬಳಿ ಬೊಲೆರೋ ವಾಹನ ತಪ್ಪಿಸಲು ಹೋಗಿ ರಸ್ತೆ ಬದಿಗೆ ಜಾರಿದ KSRTC ಬಸ್..!


ಮುಂಡಗೋಡ: ತಾಲೂಕಿನ ನಂದಿಪುರ ಸಮೀಪ KSRTC ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದೆ. ಪರಿಣಾಮ ಮೂರ್ನಾಲು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.

ಎದುರಿಗೆ ಬಂದ ಬುಲೆರೋ ತಪ್ಪಿಸಲು ಹೋಗಿ ಬಸ್ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಗೆ ತಾಗಿ ನಿಂತಿದೆ. ರಸ್ತೆ ಬದಿಯಲ್ಲಿದ್ದ ಮರಕ್ಕೆ ತಾಗಿ ನಿಂತ ಪರಿಣಾಮ ಬಸ್ ಮುಂಬದಿಯ ಗ್ಲಾಸ್ ಜಖಂ ಗೊಂಡಿದೆ. ಇನ್ನು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಎಮರ್ಜೆನ್ಸಿ ಬಾಗಿಲು ತೆರೆದು ಹೊರ ಬಂದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!