ಚೌಡಳ್ಳಿ ಗ್ರಾಪಂ “ಅವಿಶ್ವಾಸ” ಸಭೆ ರದ್ದು, ಅಧ್ಯಕ್ಷರ ರಾಜೀನಾಮೆ ಹಿನ್ನೆಲೆ ರದ್ದುಪಡಿಸಿದ ಎಸಿ..!

ಮುಂಡಗೋಡ: ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ನಡೆಯಬೇಕಿದ್ದ, ಅವಿಶ್ವಾಸ ಗೊತ್ತುವಳಿ ಮಂಡನಾ ಸಭೆ ರದ್ದಾಗಿದೆ. ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇವತ್ತಿಗೆ ಹತ್ತು ದಿನವಾದ ಹಿನ್ನೆಲೆ ರಾಜೀನಾಮೆ ಅಂಗೀಕಾರವಾಗಿದೆ.

ಈ ಹಿನ್ನೆಲೆಯಲ್ಲಿ ಶಿರಸಿ ಉಪ ವಿಭಾಗಾಧಿಕಾರಿ ದೇವರಾಜು, ಚೌಡಳ್ಳಿ ಗ್ರಾಪಂ ಸದಸ್ಯರಿಗೆ ತಿಳುವಳಿಕೆ ಪತ್ರ ನೀಡಿದ್ದಾರೆ. ಅಧ್ಯಕ್ಷರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ಈಗಾಗಲೇ ರಾಜೀನಾಮೆ ಅಂಗೀಕಾರವಾಗಿದ್ದು, ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಸಭೆ ನಡೆಸುವ ಅವಶ್ಯಕತೆ ಇಲ್ಲ. ಹೀಗಾಗಿ, ಸಭೆಯನ್ನು ರದ್ದುಗೊಳಿಸಲಾಗಿದೆ ಅಂತಾ ತಿಳುವಳಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಂದಹಾಗೆ, ಇಂದು ನಿಗದಿಯಾಗಿದ್ದ “ಅವಿಶ್ವಾಸ” ಸಭೆಗೆ ಬಿಜೆಪಿ ಬೆಂಬಲಿತ 9 ಜನ ಸದಸ್ಯರು ಹಾಜರಾಗಿದ್ದರು. ಚೌಡಳ್ಳಿ ಗ್ರಾಮ ಪಂಚಾಯತಿಯಲ್ಲಿ ಸೇರಿದ್ದ ಸದಸ್ಯರಿಗೆ ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ಎಸಿ ಯವರ ತಿಳುವಳಿಕೆ ಪತ್ರ ತಂದ ಹಿನ್ನೆಲೆಯಲ್ಲಿ ಸಭೆ ರದ್ದು ಪಡಿಸಿದ್ರು.
ಈ ವೇಳೆ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವಾಯ್. ಪಿ. ಪಾಟೀಲ್, ಯುವ ಮೋರ್ಚಾ ಸದಸ್ಯ ವೈ ಪಿ ಭುಜಂಗಿ , ಪಿ ಜಿ ಪಾಟೀಲ್, ಅರ್ಜುನಪ್ಪ ಸಿಂಗನಹಳ್ಳಿ, ಆರ್. ಆರ್. ವಾಲ್ಮೀಕಿ, ರವಿ ವಾಲ್ಮೀಕಿ , ಪರಶುರಾಮ್ ತಹಶೀಲ್ದಾರ್, ಮುನೀರ್ ಖಾನ್ ಪಠಾಣ್, ವಿಟ್ಟು ಗಾವಡೆ ಸೇರಿ ಹಲವರು ಉಪಸ್ಥಿತರಿದ್ದರು.

error: Content is protected !!