ಬನವಾಸಿ: ಪಂಪಸೆಟ್ ಗೆ ಅಳವಡಿಸಿದ್ದ ವಿದ್ಯುತ್ ಕೇಬಲ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬನವಾಸಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ
ಮತ್ತಿಹಳ್ಳಿಯ ಸೋಮಪ್ಪ ನೀಲಪ್ಪ ಒಡೆಯನಪುರ(28), ಬೆಟಕೆರೂರು ಗ್ರಾಮದ ಶಿವರಾಜ್ ಗುತ್ಯಪ್ಪ ಮಂತಿಕೊಪ್ಪ(22) ಎಂಬುವ ಆರೋಪಿಗಳನ್ನು ಬಂಧಿಸಲಾಗಿದೆ.
ದಿನಾಂಕ: 16-06-2022 ರಂದು ಶಿರಸಿ ತಾಲೂಕ ಮೊಗವಳ್ಳಿ ಗ್ರಾಮದ ಸದಾನಂದ ಮಾದೇವ ಹಳ್ಳಕೊಪ್ಪ
ಎಂಬುವವರ ಜಮೀನಿನ ಪಕ್ಕದಲ್ಲಿರುವ ವರದಾ ನದಿಯಿಂದ ಮೋಟಾರ ಮಶೀನ್ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲು ಸುಮಾರು 250 ಅಡಿ ಉದ್ದದ ಮೋಟಾರ ಕೇಬಲ್ ಜೋಡಿಸಿದ್ದನ್ನು ಕಳ್ಳರು ಎಗರಿಸಿಕಿಂಡು ಹೋಗಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.