ಯಲ್ಲಾಪುರ ಕ್ಷೇತ್ರದಲ್ಲಿ ಇವಾಗ ಬಿಜೆಪಿ ಪಕ್ಷ ಸಂಘಟನೆಗಾಗಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಮೈದಡವಿ ಮಾತಾಡ್ತಿದಾರೆ. ಈಗಾಗಲೇ ಸಾಕಷ್ಟು ಕಡೆ ಇಂತಹ ಹತ್ತಾರು ಸಭೆ ಆಗಿ ಹೋಗಿದೆ. ಆದ್ರೆ ಅದೇಲ್ಲದರ ಪರಿಣಾಮ ಏನಾಗಿದೆ..? ಎಲ್ಲೇಲ್ಲಿ ಒಳಗುದಿಯ ಹೊಗೆ ಆಡ್ತಿದೆ ಅನ್ನೋದು ಖುದ್ದು ಹೆಬ್ಬಾರ್ ಸಾಹೇಬ್ರಿಗೆ ಅರ್ಥವಾಗಿದೆಯಾ.?
ಹುನಗುಂದದ ಕತೆ ಏನು..?
ನಿನ್ನೆ ಶುಕ್ರವಾರ ಹುನಗುಂದದ ವಿರಕ್ತ ಮಠದಲ್ಲಿ ಇದೇ ಹೆಬ್ಬಾರ್ ಸಾಹೇಬ್ರು ತಮ್ಮ ಅಜೆಂಡಾದಂತೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಮಾಡಿದ್ರು. ಅಲ್ಲಿ ಹುನಗುಂದ, ಅಗಡಿ, ಅತ್ತಿವೇರಿಯ ಕಾರ್ಯಕರ್ತರು ಭಾಗಿಯಾಗಿದ್ರು. ಆದ್ರೆ, ಅಲ್ಲಿನ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರಲ್ಲಿ ಮುಖ್ಯವಾಗಿ ಭಾಗಿಯಾಗಬೇಕಿದ್ದ ಹುನಗುಂದ, ಅಗಡಿ, ಅತ್ತಿವೇರಿಯ ಬಹುತೇಕ ಬೂತ್ ಅಧ್ಯಕ್ಷರುಗಳೇ ಕಾಣಲಿಲ್ಲ. ಪದಾಧಿಕಾರಿಗಳೇ ಕಂಡು ಬರಲಿಲ್ಲ. ನಿಜ ಅಂದ್ರೆ ಅಲ್ಲಿ ಬಂದಿದ್ದು ಕೇವಲ ಕೆಲವೇ ಕೆಲವು ಮುಖಂಡರುಗಳು ಮಾತ್ರ.
ಬೂತ್ ಅದ್ಯಕ್ಷರು ಯಾಕೆ ಬರಲಿಲ್ಲ..?
ನೀವೇ ಯೋಚನೆ ಮಾಡಿ, ಖುದ್ದು ಸಚಿವ ಹೆಬ್ಬಾರ್ ಸಾಹೇಬ್ರು ತಮ್ಮ ಬಿಡುವಿಲ್ಲದ ಸಮಯದಲ್ಲಿ ಅಂತಹದ್ದೊಂದು ಕಾರ್ಯಕರ್ತರ ಅಳಲು ಕೇಳಲೆಂದೇ ತಮ್ಮ ಗ್ರಾಮಕ್ಕೆ ಬಂದಾಗಲೂ ಅವ್ರೇಲ್ಲ ಬರಲಿಲ್ಲ ಅಂದ್ರೆ ಅದ್ರಲ್ಲಿ ಏನೋ ಇದೆ ಅಂತಲೇ ಅರ್ಥ ಅಲ್ವಾ..? ಅದ್ರಲ್ಲೂ ಬೂತ್ ಮಟ್ಟದ ಅಷ್ಟೂ ಜವಾಬ್ದಾರಿಗಳನ್ನ ಹೊತ್ತು, ಸಭೆಯಲ್ಲಿ ಭಾಗವಹಿಸಬೇಕಿದ್ದ ಬೂತ್ ಅಧ್ಯಕ್ಷರುಗಳೇ ಅಲ್ಲಿ ಭಾಗಿಯಾಗಲಿಲ್ಲ ಅಂದ್ರೆ ಏನರ್ಥ..? ಕುಚ್ ತೋ ಕುಚ್ ಗಡಬಡ್ ಹೈ ಅಂತಾನೇ ಅರ್ಥ ಅಲ್ವಾ..? ಇದೇಲ್ಲ ಹೆಬ್ಬಾರ್ ಸಾಹೇಬ್ರಿಗೆ ಅರ್ಥವಾಗಿದೆಯಾ..?
ಏನದು ಸಮಸ್ಯೆ..?
ನಿಜ, ಮುಂಡಗೋಡ ತಾಲೂಕಿನಲ್ಲಿ ಒಳಗೊಳಗೆ ಬಿಜೆಪಿಯ ಜಂಘಾಬಲವನ್ನೇ ವೀಕು ಮಾಡ್ತಿರೋ ಮೂಲ ಹಾಗೂ ಹಳಬರ ಜಟಾಪಟಿ ಹುನಗುಂದದಲ್ಲೂ ಬಹಿರಂಗವಾಗೇ ಸೆಡ್ಡು ಹೊಡೆಯುವ ಮಟ್ಟಕ್ಕೆ ಬಂದು ನಿಂತಿದೆ. ಇಲ್ಲಿ, ಯಾರ್ಯಾರದ್ದೋ ಒಳ ಮಸಲತ್ತುಗಳ ಆಟಕ್ಕೆ ಇಡೀ ಪಕ್ಷವೇ ಹಳ್ಳದತ್ತ ವಾಲುತ್ತಿದೆ ಅನ್ನೋದು ಖುದ್ದು ಅದೇ ಪಕ್ಷದ ನಿಷ್ಟಾವಂತರ ಅಂಬೋಣ. ಆದ್ರೆ, ಇದನ್ನೇಲ್ಲ ಕುಳಿತು ಸರಿ ಪಡಿಸಬೇಕಾದ ಹೆಬ್ಬಾರ್ ಸಾಹೇಬ್ರು ಮೌನ ವಹಿಸಿರೋದಾದ್ರೂ ಯಾಕೆ ಅಂತಿದಾರೆ ಕೆಲವು ಕಾರ್ಯಕರ್ತರು.
ಮೀಟಿಂಗಿನಲ್ಲಿ ಮಿಸ್ ಆದೋರು..!
ಅಷ್ಟಕ್ಕೂ, ಹುನಗುಂದದ ಸಂತೆ ದಿನ ಶುಕ್ರವಾರದಂದೇ ಮೀಟಿಂಗು ನಡೆದಿದೆ. ನಿಜ ಅಂದ್ರೆ ಅವತ್ತು ಗ್ರಾಮದ ಬಹುತೇಕರು ಅದೇನೇ ಕೆಲಸವಿದ್ರೂ ಬಹುತೇಕ ಸಂತೆಯ ಕಾರಣಕ್ಕಾಗಿ ಬಿಡುವು ಮಾಡ್ಕೊಂಡಿರ್ತಾರೆ. ಆದ್ರೆ, ನಿನ್ನೆಯ ದಿನದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಸಂತೆಯ ದಿನವೇ ನಡೆದ್ರೂ ಯಾಕೆ ಆ ಮಟ್ಟಿಗಿನ ಜನ ಸೇರಲಿಲ್ಲ..? ಖುದ್ದು ತಮ್ಮ ನಾಯಕ, ಶಾಸಕ, ಸಚಿವರೇ ಖುದ್ದಾಗಿ ಬಂದ್ರೂ ಅದ್ಯಾಕೆ ಜನ ಸೇರಲಿಲ್ಲ..? ಹುನಗುಂದ, ಅತ್ತಿವೇರಿ, ಅಗಡಿ ಸೇರಿ ಮೂರು ಗ್ರಾಮಗಳಲ್ಲಿ ಕೇವಲ 50 ರಿಂದ 60 ಕಾರ್ಯಕರ್ತರಷ್ಟೇ ಇರೋದಾ..? ಅಸಲು, ಆ ಎಲ್ಲಾ ಬೂತ್ ಗಳ ಅಧ್ಯಕ್ಷರುಗಳು ಅದ್ಯಾಕೆ ಸಭೆಯಲ್ಲಿ ಭಾಗಿಯಾಗಲಿಲ್ಲ..? ಇಲ್ಲಿ ಯಾರ ಒಳಮಸಲತ್ತುಗಳಿಗೆ ಪಕ್ಷ ಬಲಿಯಾಗ್ತಿದೆ..? ಯಾರ ವಿರೋಧ ಇಲ್ಲಿ ಕೆಲಸ ಮಾಡ್ತಿದೆ..? ಇದನ್ನೇಲ್ಲ ಸಚಿವ್ರು ಗಮನಿಸ್ತಿಲ್ವಾ..? ಅಥವಾ ಅದೇಲ್ಲ ಉಸಾಬರಿಯಾದ್ರೂ ಯಾಕೆ ಬೇಕು ಅಂತ ಸುಮ್ನಿದ್ದಾರಾ..? ಅವ್ರೇ ಹೇಳಬೇಕಿದೆ.
ಅಧ್ಯಕ್ಷರುಗಳು ಹೊರತಾಗಿ..!
ಇಲ್ಲಿ ಬೂತ್ ಅಧ್ಯಕ್ಷರುಗಳ ಹೊರತಾಗಿ ಸಾಕಷ್ಟು ಮೂಲ ಬಿಜೆಪಿಗರು ಸಭೆಯತ್ತ ಮುಖ ಮಾಡಲೇ ಇಲ್ಲ. ಅದ್ರಲ್ಲಿ, ಸಂತೋಷ ಬಿಸನಳ್ಳಿ ಸೇರಿದಂತೆ ಹಲವರು ಆ ಕಡೆ ಸುಳಿಯಲೇ ಇಲ್ಲ. ಸಿದ್ದು ಹಡಪದ ನಿನ್ನೆ ಊರಲ್ಲಿ ಇರಲಿಲ್ಲ ಆದ್ರೆ ಅವ್ರ ಬೆಂಬಲಿಗರಾದ್ರೂ ಸಭೆಗೆ ಬರಬೇಕಿತ್ತಲ್ಲವೇ..? ಹಾಗಾದ್ರೆ ಯಾಕೆ ಬರಲಿಲ್ಲ..? ಅದಕ್ಕೆ ಕಾರಣವಾದ್ರೂ ಏನಿರಬಹುದು..? ಇದನ್ನೇಲ್ಲ ಹೆಬ್ಬಾರ್ ಸಾಹೇಬ್ರು ಗಮನಿಸಬೇಕಿದೆ. ಇಲ್ಲಿ ಯಾರ್ಯಾರದ್ದೋ ಒಳಗುದಿಗಳಿಗೆ ಇಡೀ ಪಕ್ಷವೇ ಕಳಾಹೀನವಾಗ್ತಿದೆ. ಇದೇಲ್ಲ ಬೇಕಾ..? ಸಚಿವ ಶಿವರಾಮ್ ಹೆಬ್ಬಾರ್ ಸಾಹೆಬ್ರು ಒಂದಿಷ್ಟು ಯೋಚಿಸಲಿ.. ಇಂತಹ ಸಮಸ್ಯೆಗಳ ಮೂಲ ಕಾರಣವೇನು ಅನ್ನೋದರ ಬಗ್ಗೆ ಗಮನಿಸಬೇಕಿದೆ. ಅಂದಾಗ ಮಾತ್ರ ಹುನಗುಂದ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಸಿಗಬಹುದೆನೋ..