ಮುಂಡಗೋಡ: ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಬೆಳೆದ ಗೋವಿನಜೋಳ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರೋ ಕಾರಣಕ್ಕೆ ಮೊಳಕೆಯೊಡೆದು ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಮೌಲ್ಯದ ಗೋವಿನ ಜೋಳದ ಬೆಳೆ ನೀರಲ್ಲಿ ಹಾಕಿದಂತಾಗಿದೆ.
ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.. ಹೀಗಾಗಿ ರಸ್ತೆ ಮೇಲೇಲ್ಲ ಗೊವಿನಜೋಳ ಹರಡಿಕೊಂಡು ಒಣಹಾಕಲು ಹರಸಾಹಸ ಪಡ್ತಿದಾನೆ ರೈತ. ಅಲ್ಲದೇ ಸ್ವಲ್ಪ ಹೊತ್ತು ಬಿಡುವು ಕೊಟ್ಟ ಮಳೆ ಮತ್ತೆ ಕೆಲವೇ ಹೊತ್ತಲ್ಲಿ ಸುರಿಯಲು ಪ್ರಾರಂಭವಾಗತ್ತದೆ. ಹೀಗಾಗಿ ಇಡೀ ರೈತನ ಕುಟುಂಬಗಳು ಈಗ ಗೋವಿನಜೋಳದ ಒಣ ಹಾಕುವ ಕೆಲಸ ಹಾಗು ಮತ್ತೆ ಕೂಡಿಡುವ ಕೆಲಸದಲ್ಲೇ ಕಾಲ ಕಳೆಯುವಂತಾಗಿದೆ.