ಮುಂಡಗೋಡ: ತಾಲೂಕಿನ ಪಾಳಾದ ಆಪೂಸ್ ಮಾವಿನ ಹಣ್ಣು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದೆ. ಆದ್ರೆ ಪ್ರಸಕ್ತ ವರ್ಷದ ನಿರಂತರ ಮಳೆಯಿಂದ ಮಾವಿನ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ಮಳೆಯಿಂದ ಮಾವು ಕೊಳೆತು ಹೋಗುತ್ತಿದೆ. ಹೀಗಾಗಿ ಇಲ್ಲಿನ ಮಾವು ಬೆಳೆಗಾರರು ಒಗ್ಗಟ್ಟಾಗಿ ಮಾವು ಬೆಳೆಗಾರರೇ ಖುದ್ದಾಗಿ ಸಂಘವೊಂದನ್ನ ಕಟ್ಟಿಕೊಂಡಿದ್ದಾರೆ.
ಈ ಮೂಲಕ ತಾವು ಬೆಳೆದ ಮಾವುಗಳನ್ನು ಯಾವುದೇ ರಾಸಾಯನಿಕ ಬಳಸದೇ ಹಣ್ಣುಗಳನ್ನು ದಾಸ್ತಾನು ಮಾಡಿ, ಅದಕ್ಕಾಗೇ ರಕ್ಷಣಾ ವಿಧಾನಗಳನ್ನು ಅನುಸರಿಸಿ, ತಮ್ಮ ಮಾವುಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ದಲ್ಲಾಳಿಗಳು ಹಾಗೂ ಮದ್ಯವರ್ತಿಗಳ ಹಾವಳಿಯಿಂದ ತಮಗೆ ಆಗುತ್ತಿದ್ದ ನಷ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಯಶಸ್ಸು ಕಾಣುತ್ತಿದ್ದಾರೆ.