ಚುನಾವಣೆಗೆ “ಕಣಕಹಳೆ” ಮೊಳಗಿಸಿದ್ರಾ ಹೆಬ್ಬಾರ್..? “ಸಾಂತ್ವನ”ದ ಸಚಿವ ಮತದಾರನ ಮನೆ ಮಾತಾಗಿದ್ದಾದ್ರೂ ಹೇಗೆ..?

ಸಚಿವ ಶಿವರಾಮ್ ಹೆಬ್ಬಾರ್ ಮತ್ತೆ ಮೈ ಕೊಡವಿ ಎದ್ದಿದ್ದಾರೆ. ಚುನಾವಣೆ ವರ್ಷದಲ್ಲಿ ಬಿಜೆಪಿ ಜಯಭೇರಿ ಬಾರಿಸಲು ನಿನ್ನೆಯಿಂದಲೇ “ಪವರ್ ಫುಲ್” ರಣಕಹಳೆ ಮೊಳಗಿಸಿದ್ದಾರೆ. ಕ್ಷೇತ್ರದ ಪ್ರತೀ ಭಾಗದಲ್ಲಿ ಖುದ್ದು ಬೂತ್ ಮಟ್ಟದ ಕಾರ್ಯಕರ್ತರ ಮೈದಡವಿ ಮಾತಾಡಿಸುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ತುಂಬ ಮತ್ತೊಮ್ಮೆ ತಮ್ಮದೇ ಆದ ಕಾರ್ಯಪಡೆ ರಚಿಸಿ ಹುರುಪು ತುಂಬಿಸುತ್ತಿದ್ದಾರೆ.

ಮಳಗಿ ಭಾಗ..!
ನಿನ್ನೆ ಮಂಗಳವಾರದಿಂದಲೇ ಸಚಿವ ಹೆಬ್ಬಾರ್, ಮಳಗಿ ಭಾಗದಿಂದ ತಮ್ಮ ಗೆಲುವಿನ ಕೇಕೆ ಹಾಕಲು ಬೇಕಾದ ರಹದಾರಿಗೆ ಹಸಿರು ನಿಶಾನೆ ತೋರಿದ್ದಾರೆ. ಅಂದಹಾಗೆ ಈ ಮಳಗಿ ಭಾಗದಲ್ಲಿ ಬಿಜೆಪಿಗೆ ಬದ್ರ ನೆಲೆ ಒದಗಿಸುವ ಅವಶ್ಯಕತೆ ಇದೆ. ಇಲ್ಲಿ ಬಿಜೆಪಿ ಅಂದುಕೊಳ್ಳುವಷ್ಟು ಪೂರಕ ವಾತಾವರಣ ಇಲ್ಲ. ಅದು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲೇ ಬಿಜೆಪಿಗೆ ಅರ್ಥವಾಗಿದೆ. ಮಳಗಿ ಗ್ರಾಮ ಪಂಚಾಯತಿಯಲ್ಲಿ ಅನಾಯಾಸವಾಗಿ ದಕ್ಕಬೇಕಿದ್ದ ಚುಕ್ಕಾಣಿ, ಒಳಗೊಳಗಿನ ತಿಕ್ಕಾಟಗಳಿಂದ ಕೈ ತಪ್ಪಿ ಹೋಗಿತ್ತು. ಮಳಗಿ ಗ್ರಾಮ ಪಂಚಾಯತಿಯ ಒಟ್ಟೂ 19 ಸ್ಥಾನಗಳ ಪೈಕಿ, 9 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದು ಬಂದಿದ್ರು. ಹೀಗಾಗಿ, ಇಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ಅಧಿಕಾರ ನಡೆಸ್ತಿದಾರೆ. ಇಲ್ಲಿ ಇದು ಕಾಂಗ್ರೆಸ್ ಗೆಲುವಲ್ಲ, ಆದ್ರೆ ಬಿಜೆಪಿಯೊಳಗಿನ ಆಂತರಿಕ ಕಲಹದ ಗೆಲುವು ಅನ್ನೋದು ಬಿಜೆಪಿಗರಿಗೆ ಮನದಟ್ಟಾಗಿತ್ತು. ಹೀಗಾಗಿ ಹೆಬ್ಬಾರ್ ಸಾಹೇಬ್ರು ಇನ್ಮುಂದೆ ಅದು ಹಾಗೆ ಆಗದಂತೆ ಎಚ್ಚರಿಕೆ ವಹಿಸ್ತಿದಾರೆ. ನಿನ್ನೆ ಈ ಭಾಗದ ಪ್ರತೀ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ತಮ್ಮದೇ ಶೈಲಿಯಲ್ಲಿ ಹುರುದುಂಬಿಸಿದ್ದಾರೆ.

“ವಿವೇಕ್” ಪಡೆ..!
ಅಂದಹಾಗೆ, ಸಚಿವ ಹೆಬ್ಬಾರ್ ಕ್ಷೇತ್ರದಲ್ಲಿ ಅದೇಷ್ಟು ಗಟ್ಟಿ ಕಾರ್ಯಪಡೆ ಹೊಂದಿದ್ದಾರೋ ಅದರ ಜೊತೆ ಅವರ ಪುತ್ರ ವಿವೇಕ್ ಹೆಬ್ಬಾರದ್ದೇ ಮತ್ತೊಂದು ಗಟ್ಟಿ ಪಡೆ ಅಲರ್ಟ್ ಆಗಿದೆ. ಪ್ರತೀ ಬೂತ್ ಮಟ್ಟದಲ್ಲಿ ವಿವೇಕ್ ಹೆಬ್ಬಾರ್ ತಮ್ಮದೇ ಆದ ಯುವ ಪಡೆಗೆ “ಬಾಸ್” ಆಗಿ, ಪಕ್ಷದ ಸಂಘಟನೆ ನಡೆಸ್ತಿದಾರಂತೆ‌. ಪ್ರತೀ ಗ್ರಾಮ ಮಟ್ಟದಲ್ಲೂ “ವಿವೇಕ್” ಇಂಟರ್ನಲ್ ಟೀಂ ಇದೆ. ಆ ಮೂಲಕ ಪಕ್ಷದ ಸ್ಥಿತಿಗತಿಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ತಾರೆ ವಿವೇಕ್. ಹೀಗಾಗಿ, ತಳಮಟ್ಟದ ಕಾರ್ಯಕರ್ತರ ದುಃಖ ದುಮ್ಮಾನಗಳ ಬಗ್ಗೆ ಕಾಳಜಿ ತೋರಿಸ್ತಿದಾರಂತೆ. ಹಾಗಂತ, ಅವ್ರ ಜೊತೆಗಿರೋ ಯುವಕರು ಮನತುಂಬಿ ಹೇಳ್ತಿದಾರೆ. ಇದು ಒಂದರ್ಥದಲ್ಲಿ ಇದುವರೆಗೂ ಮುಂಡಗೋಡಿನಲ್ಲಿ “ಹೆಬ್ಬಾರ್ ಬಲ” ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿದೆಯಂತೆ.

ಸಾಂತ್ವನದ “ಸಚಿವ”
ಇಲ್ಲಿ ನಾನು ಈ ಮಾತು ಹೇಳ್ತಿರೋದು ಖಂಡಿತ ಅತಿಶಯೋಕ್ತಿ ಅಲ್ಲ‌. ಅಸಲು ನಂಗೆ ಹೊಗಳುವ ಅಭ್ಯಾಸವೂ ಇಲ್ಲ.. ಅಷ್ಟಕ್ಕೂ ಶಿವರಾಮ್ ಹೆಬ್ಬಾರ್ ರರನ್ನ ರಾಜಕೀಯವಾಗಿ ನೋಡುವ ದೃಷ್ಟಿಕೋನಗಳ ಬಗ್ಗೆ ಖಂಡಿತವಾಗಿ ನಾನು ಇಲ್ಲಿ ಮಾತನಾಡಲ್ಲ. ಆದ್ರೆ ಅವ್ರ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಲೇ ಬೇಕಾಗತ್ತೆ. ಅವ್ರ ಎದುರು ನಿಂತಾಗ ಅವ್ರೊಬ್ಬ ಕರ್ನಾಟಕ ಸರ್ಕಾರದ ಸಚಿವರು ಅನ್ನೋ ಫೀಲಿಂಗೇ ಬರಲ್ಲ. ಯಾಕಂದ್ರೆ ಅಂತಹ ದೌಲತ್ತು ಅವ್ರ ಮುಖದಲ್ಲಿ ಯಾವತ್ತೂ ಕಂಡಿಲ್ಲ. ಅದಕ್ಕಾಗೇ ರಾಜಕೀಯದ ಹೊರತಾಗಿಯೂ ಹೆಬ್ಬಾರ್ ಇಷ್ಟವಾಗ್ತಾರೆ. ಎದುರು ಹೋಗಿ ನಿಂತ್ರೆ ಸಾಕು “ಏನೋ ಹೇಗಿದಿಯಾ..?” ಅಂತಾ ಮೈದಡವಿ ಮಾತನಾಡೋ ಪರಿ ಇದೆಯಲ್ಲ, ಅದು ನಿಜಕ್ಕೂ ರೋಮಾಂಚಕ..!

ಕಟ್ಟಕಡೆಯ ಗುಡಿಸಲಿಗೂ..!
ಕ್ಷೇತ್ರದ ಅದ್ಯಾವುದೇ ಮೂಲೆಯಲ್ಲಿ, ತಮ್ಮ ಕಾರ್ಯಕರ್ತ ನೋವಿನಲ್ಲಿ ಅಥವಾ ಅದೇನೇ ಸಮಸ್ಯೆಯಲ್ಲಿ ಸಿಲುಕಿದ್ರೂ ಅಂತವರ ಮನೆಗೆ ಖುದ್ದು ಸಚಿವ ಹೆಬ್ಬಾರ್ ಭೇಟಿ ನೀಡಿ ಸಾಂತ್ವನ ಹೇಳುತ್ತಾರೆ. ಕುಟುಂಬದವರೊಂದಿಗೆ ನಾನು ನಿಮ್ಮ ಜೊತೆ ಇದ್ದಿನಿ ಭಯ ಪಡಬೇಡಿ ಅನ್ನೋ ದೈರ್ಯ ತುಂಬುತ್ತಾರೆ. ಇದು ಮುಂಡಗೋಡ ತಾಲೂಕಿನ ಕಟ್ಟಕಡೆಯ ಅಗಡಿ ಗ್ರಾಮದಿಂದ ಹಿಡಿದು, ಬಡ್ಡಿಗೇರಿಯಂತ ಕಾಡು ಮದ್ಯದ ಕಟ್ಟಕಡೆಯ ಗ್ರಾಮದ ಗುಡಿಸಲಿನವರೆಗೂ ಅವರ ಸಾಂತ್ವನದ ನುಡಿಗಳು ಪ್ರತಿಧ್ವನಿಸುತ್ತೆ. ನಿಜ ಅಂದ್ರೆ, ಇಲ್ಲಿ ಕೇವಲ ನೊಂದವರ ಕಣ್ಣೀರು ಒರೆಸುವ ಇರಾದೆಯಷ್ಟೇ ಇರತ್ತೆ. ಅಲ್ಲಿ, ನೊಂದವರು ಅದ್ಯಾವ ಪಕ್ಷ, ಯಾವ ಪಾರ್ಟಿ ಏನೂ ಇರಲ್ಲ. ಬಿಜೆಪಿಯವರೇ ಆಗಲಿ, ಕಾಂಗ್ರೆಸ್ಸಿನವರೇ ಆಗಲಿ ಅವ್ರು ನೋವಲ್ಲಿ ಇದ್ದಾರೆಂದ್ರೆ ಹೆಬ್ಬಾರ್ ಅಲ್ಲಿ ಹಾಜರಾಗಿರ್ತಾರೆ.

ಅವ್ರಿಗಷ್ಟೇ ಸಾಧ್ಯ..!
ಒಮ್ಮೆ ಯೋಚಿಸಿ, ಹೆಬ್ಬಾರ್ ಅಂದ್ರೆ ಯಲ್ಲಾಪುರ ಕ್ಷೇತ್ರಕ್ಕಷ್ಟೇ ಸೀಮಿತವಾಗಿರೋ ಸಚಿವರಲ್ಲ. ಇಡೀ ರಾಜ್ಯದ ಸಚಿವರು, ಮೈತುಂಬ ಕೆಲಸಗಳಿರತ್ತೆ. ಕ್ಷಣ ಕ್ಷಣವೂ ಅಮೂಲ್ಯವಾಗಿರತ್ತೆ. ಆದ್ರೂ ಇದೇಲ್ಲದರ ನಡುವೆ ತನ್ನ ಕ್ಷೇತ್ರದ ಜನರ ಕಣ್ಣೀರಿಗೆ ಮನೆ ಮಗನಂತೆ ಸ್ಪಂಧಿಸೋ ರೀತಿ ಇದೆಯಲ್ಲ, ಅದು ನಿಜಕ್ಕೂ ಅವ್ರಿಗಷ್ಟೇ ಸಾಧ್ಯ..!

ಈ ಕಾರಣಕ್ಕಾಗಿ, ಬಹುತೇಕ ಚುನಾವಣೆ ವರ್ಷದಲ್ಲಿ ಹೆಬ್ಬಾರ್ ಸಾಹೇಬ್ರಿಗೆ, ಕ್ಷೇತ್ರದ ಕಟ್ಟಕಡೆಯ ಮತದಾರ ಅಪ್ಪಿಕೊಳ್ಳುವ ಸಾಧ್ಯತೆ ಇದೆ. ಇನ್ನು ಅದರಾಚೆಗೆ, ಪಕ್ಷದೊಳಗಿನ ಆಂತರಿಕ ಕಚ್ಚಾಟಗಳ ಕಡೆ ಒಂದಿಷ್ಟು ಗಮನ ಹರಿಸಿದ್ರೆ ಯಲ್ಲಾಪುರ ಕ್ಷೇತ್ರದಲ್ಲಿ ಮತ್ತದೇ ಹಳೆಯ “ವಿಜಯೋತ್ಸವ”ದ ಪಟಾಕಿಗಳ ಸದ್ದು ರಿಂಗಣಿಸುವುದರಲ್ಲಿ ಎರಡು ಮಾತಿಲ್ಲ.

error: Content is protected !!