ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಾಟಾ ಎಸ್ ವಾಹನ ಮತ್ತು ಸ್ಕೂಟಿ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಗಾಯಗೊಂಡವನು ಮುಂಡಗೋಡ ತಾಲೂಕಿನ ಕಾತೂರು ಗ್ರಾಮದವನು ಅಂತಾ ತಿಳಿದು ಬಂದಿದೆ. ಕಲಘಟಗಿ ಕಡೆಯಿಂದ ಮುಂಡಗೋಡ ಕಡೆಗೆ ಹೊರಟಿದ್ದ ಟಾಟಾ ಎಸ್ ವಾಹನಕ್ಕೆ, ಮುಂಡಗೋಡ ಕಡೆಯಿಂದ ಕಲಘಟಗಿ ಕಡೆಗೆ ಹೊರಟಿದ್ದ ಸ್ಕೂಟಿ ಡಿಕ್ಕಿಯಾಗಿದೆ‌. ಸದ್ಯ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!