ಹಾವೇರಿ: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ(ರಿ) ಬೆಂಗಳೂರು, ಇದರ ಮೂರು ವರ್ಷದ ಅವಧಿಗಾಗಿ ಸಿದ್ದಪ್ಪ ಹಡಪದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಸಿದ್ದಪ್ಪ ಹಡಪದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದ ಯುವ ನಾಯಕರಾಗಿದ್ದಾರೆ. ಹೀಗಾಗಿ, ಹಾವೇರಿಯ ಗುರುಭವನದಲ್ಲಿ ಇಂದು ನಡೆದ ಚಿನಾವಣೆಯಲ್ಲಿ ಈ ನೂತನ ಅಧ್ಯಕ್ಷರು ಹಾಗೂ ಇನ್ನುಳಿದ ಪದಾಧಿಕಾರಿಗಳ ಆಯ್ಕೆಯಾಗಿದೆ.
ಇನ್ನುಳಿದಂತೆ, ರಾಜ್ಯ ಉಪಾಧ್ಯಕ್ಷರಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲದ, ಸಂತೋಷ ಹಡಪದ. ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ಬಸರಕೋಡದ, ಚಿದಾನಂದ ಹಡಪದ. ಖಜಾಂಚಿಯಾಗಿ ಕೊಪ್ಪಳದ ಮಂಹಪ್ಪ ಹಡಪದ, ಕಾನೂನು ಸಲಹೆಗಾರರಾಗಿ ಹಾವೇರಿಯ ನಾಗರಾಜ ಕಾಯಕದ್ ಆಯ್ಕೆಯಾಗಿದ್ದಾರೆ.
ಇವತ್ತು ಹಾವೇರಿಯ ಗುರುಭವನದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ತಂಗಡಗಿಯ ಅನ್ನದಾನಿ ಅಪ್ಪಣ್ಣ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಮಾಜದ ಅಧ್ಯಕ್ಷರು ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.