ಮುಂಡಗೋಡ: ತಾಲೂಕಿನ ಗಡಿಭಾಗದ ವಡಗಟ್ಟಾ ಚೆಕ್ ಪೊಸ್ಟ್ ಅಂದ್ರೆ ಅರಣ್ಯ ಉತ್ಪನ್ನ ತನಿಖಾ ಠಾಣೆ ಅನ್ನೋದು ನಾಮಕೆವಾಸ್ತೆ ಅನ್ನುವಂತಾಗಿದೆ. ಉತ್ತರ ಕನ್ನಡದ ಅದ್ರಲ್ಲೂ ಮುಂಡಗೋಡ ತಾಲೂಕಿನ ಅಮೂಲ್ಯ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿಷ್ಟಾಪಿಸಲ್ಪಟ್ಟಿರೋ ವಡಗಟ್ಟಾ ಅರಣ್ಯ ಉತ್ಪನ್ನಗಳ ತನಿಖಾ ಠಾಣೆ ಚೆಕ್ ಪೊಸ್ಟ್ ನಲ್ಲಿ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಗಳೇ ಎತ್ತುವಳಿಗೆ ನಿಂತಿದ್ದಾರಾ..? ಈ ದೃಷ್ಯ ನೋಡಿದ್ರೆ ಹಾಗೆ ಅನ್ನಿಸತ್ತೆ.

ದೃಷ್ಯ ನಂಬರ್ 1.

ದಂಧೆ ಮಾಡಿಕೊಂಡ್ರಾ..?
ಇದು ವಡಗಟ್ಟಾ ಅರಣ್ಯ ಚೆಕ್‌ಪೋಸ್ಟ್ ನಲ್ಲಿ ನಿತ್ಯವೂ ನಡೆಯುವ ಎತ್ತುವಳಿ ದಂಧೆಯಂತೆ. ಪ್ರಿಯ ಓದುಗರೇ, ನೀವಂದುಕೊಂಡಂತೆ ಅರಣ್ಯ ಉತ್ಪನ್ನಗಳ ತಪಾಸಣೆಗಾಗೇ ಇರೋ ವಡಗಟ್ಟಾ ಚೆಕ್‌ ಪೊಸ್ಟ್ ನಲ್ಲಿ ಯಾವ ಉತ್ಪನ್ನಗಳ ತಪಾಸಣೆಯೂ ನಡಿಯಲ್ಲ. ಇಲ್ಲಿನ ಸಿಬ್ಬಂದಿಗಳು ನಿತ್ಯವೂ ಚಾಚೂ ತಪ್ಪದೇ ಕೆಲಸ ನಿರ್ವಹಿಸ್ತಾರೆ ನಿಜ, ಆದ್ರೆ, ಇವ್ರ ಕೆಲಸವೇ ಬೇರೆ, ಇವರ ಕೆಲಸದ ಸ್ಟೈಲೇ ಬೇರೆ. ಯಾಕಂದ್ರೆ ಇಲ್ಲಿ ನಿತ್ಯವೂ ಗರಿ ಗರಿ ನೋಟುಗಳು ಕುಣಿದಾಡುತ್ತವೆ.. ಅದೇಂತದ್ದೇ ವಾಹನ ಬರಲಿ, ಆ ವಾಹನದಲ್ಲಿ ಅದೇನೇ ತುಂಬಿಕೊಂಡಿರಲಿ ಅದನ್ನ ಯಾವುದನ್ನೂ ಇಲ್ಲಿನ ಸಿಬ್ಬಂದಿಗಳು ಬಿಲ್ ಕುಲ್ ನೋಡೋದೇ ಇಲ್ಲ‌. ಯಾಕಂದ್ರೆ, ಇವ್ರು ಕೈ ಎತ್ತಿ ಒಂದು ಸಿಗ್ನಲ್ ಕೊಟ್ಟು ವಾಹನ ಚಾಲಕರ ಎದುರು ಕೈಯೊಡ್ಡಿ ನಿ‌ಂತು ಬಿಟ್ರೆ ಮುಗೀತು. ಹಾಗೆ ಕೈಯೊಡ್ಡಿದಾಗ ವಾಹನ ಚಾಲಕ ಇವರ ಕೈಗೆ ನೂರು ನೂರು ರೂಪಾಯಿ ಬೀಸಾಕಿದ್ರೆ ಮುಗಿತು. ಯಾವುದೇ ತಪಾಸಣೆ ಇಲ್ಲ, ತಪಾಸಣೆ ಹೋಗಲಿ ಆ ವಾಹನದ ಪೂರ್ವಾಪರವನ್ನೂ ತಿಳಿದುಕೊಳ್ಳಲ್ಲ, ಬದಲಾಗಿ, ಒಂದು ಸೆಲ್ಯೂಟ್ ಹೊಡೆದು ಬಿಟ್ಟು ಕಳಿಸ್ತಾರೆ. ಇದು ಇಲ್ಲಿನ ನಾಚಿಗ್ಗೇಡು. ಹೀಗಾದಾಗ ಅರಣ್ಯ ಸಂಪತ್ತಿನ ರಕ್ಷಣೆ ಮಾಡೋರಾದ್ರೂ ಯಾರು..?

ದೃಷ್ಯ ನಂಬರ್ 2.

ಅವನೊಬ್ಬ ಅರಣ್ಯ ರಕ್ಷಕ..!
ಅಂದಹಾಗೆ, ಈ ಚೆಕ್ ಪೊಸ್ಟ್ ನ ಕೆಲವು ಆಸೆಬುರುಕ ಸಿಬ್ಬಂದಿಗಳು ಹಾಗೂ ಅವನೊಬ್ಬ “ರಕ್ಷಕ” ಅಕ್ಷರಶಃ ಎತ್ತುವಳಿಗೆ ನಿಂತು ಬಿಟ್ಟಿದ್ದಾರಂತೆ. ಇಲ್ಲಿ ಬೆಳಿಗ್ಗೆ ಡ್ಯೂಟಿಗೆ ಬಂದು ಕೂತರೆ ಮುಗೀತು, ಗರಿ ಗರಿ ನೋಟುಗಳಿಂದ ಜೇಬು ಭರ್ತಿ ಮಾಡಿಕೊಳ್ತಿದಾರೆ ಅನ್ನೋ ಆರೋಪಗಳಿವೆ. ಹೀಗಾಗಿ, ಈ ಚೆಕ್ ಪೊಸ್ಟ್ ನಿಂದ ಅರಣ್ಯ ಸಂಪತ್ತು ಬೇಕಾಬಿಟ್ಟಿ ಕಳ್ಳರ ಪಾಲಾಗ್ತಿದೆ.

ಹಾವೇರಿ ಜಿಲ್ಲೆಯಿಂದ…
ಹಾವೇರಿ ಜಿಲ್ಲೆಯ ಗಡಿಭಾಗದ ಅರಣ್ಯಗಳ್ಳರು ಇದೇ ಮಾರ್ಗವಾಗಿ ನಿತ್ಯವೂ ಅರಣ್ಯ ಲೂಟಿ ಮಾಡ್ತಾರೆ ಅನ್ನೋ ಆರೋಪಗಳಿವೆ. ಅಲ್ದೇ, ಜಿಲ್ಲೆಯ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ವಡಗಟ್ಟಾ ಚೆಕ್ ಪೊಸ್ಟ್ ನಿರ್ಮಿಸಲಾಗಿದೆ‌. ಅಂತಹ ಕಳ್ಳರ ಹೆಡೆಮುರಿ ಕಟ್ಟೊಕಾಗಿಯೇ ಇಂತಹ ಚೆಕ್ ಪೊಸ್ಟ್ ಗಳನ್ನು ಇಲಾಖೆ ತೆರದಿದೆ. ಆದ್ರೆ, ಅದೇಲ್ಲ ಒಂಥರಾ ನಾಮಕೆ ವಾಸ್ತೆ ಅನ್ನುವಂತಾಗಿದ್ದು, ಚೆಕ್ ಪೊಸ್ಟ್ ಅನ್ನೊದಕ್ಕಿಂತ ಇದೇಲ್ಲ ವಸೂಲಿ ಕುಳಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಹಾಗಾದ್ರೆ, ಇದೇಲ್ಲ ಇಲ್ಲಿನ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ವಾ..? ಇದೆ ಈಗಿನ ಪ್ರಜ್ಞಾವಂತರ ಪ್ರಶ್ನೆ.

error: Content is protected !!