ಟಿಬೇಟಿಗರ ಲೋಸಾರ್ ಸಂಭ್ರಮಕ್ಕೆ ಬಗೆ ಬಗೆಯ ಖಾದ್ಯ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಲೋಸಾರ್ ಸಂಭ್ರಮ ಜೋರಾಗಿದೆ. ಇಡೀ ಟಿಬೇಟಿಯನ್ ಕಾಲೋನಿಗಳಲ್ಲಿ ಈಗ ಲೋಸಾರ್ ಹಿನ್ನೆಲೆ ಬಗೆ ಬಗೆಯ ತಿಂಡಿ ತಿನಿಸುಗಳದ್ದೇ ಹಬ್ಬ. ಅದ್ರಲ್ಲೂ ಟಿಬೇಟಿಯನ್ ಬೌದ್ದ ಸನ್ಯಾಸಿಗಳು ಸಾಮೂಹಿಕವಾಗಿ ಮಾಡುವ ವಿವಿಧ ಖಾದ್ಯಗಳ ಘಮ ಘಮ ಇಡೀ ಕಾಲೋನಿಗಳಲ್ಲಿ ಪಸರಿಸಿದೆ. ಸಾಮೂಹಿಕವಾಗಿ ಬಗೆ ಬಗೆಯ ತಿನಿಸುಗಳನ್ನು ತಯಾರಿಸೋ ಸನ್ಯಾಸಿಗಳು ಸಂಭ್ರಮಿಸುತ್ತಾರೆ. ಬಗೆ ಬಗೆ ಖಾದ್ಯಗಳನ್ನು ತಯಾರಿಸಲು ಜೊತೆ ಜೊತೆಯಾಗೇ ಸಾಂಘಿಕವಾಗಿ ಸೇರುವ ಸನ್ಯಾಸಿಗಳು ಖುಶಿಯಿಂದಲೇ ಬಂದು ಭಾಗವಹಿಸೋದು ಅವರ ಸಹಬಾಳ್ವೆಗೆ ಸಾಕ್ಷಿಯಾಗಿದೆ.