ಟಿಬೇಟಿಯನ್ನರ ಲೋಸಾರ್ ಸಂಭ್ರಮದಲ್ಲಿ ಆಟಗಳ ಮೆರಗು.!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಲೋಸಾರ್ ಹಬ್ಬದ ಸಂಭ್ರಮದಲ್ಲಿ ಕ್ಯಾಂಪ್ ನಂಬರ್ 3 ರ ಮೈದಾನದಲ್ಲಿ ವಿಶೇಷ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. ಟಿಬೇಟಿಯನ್ನರ ತಂಡಗಳ ನಡುವೆ ವಿವಿಧ ಸ್ಪರ್ಧೆಗಳು ಏರ್ಪಟ್ಟವು.. ಇಂದು ಟಿಬೇಟಿಯನ್ ಮಹಿಳೆಯರಿಗೆಂದೇ ವಿಶೇಷ ಹಗ್ಗ ಜಗ್ಗಾಟದ ಸ್ಪರ್ದೆ ನಿಜಕ್ಕೂ ರೋಮಾಂಚಕ ಅನುಭವ ನೀಡಿತು.. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಹಗ್ಗಜಗ್ಗಾಟದ ರಣರೋಚಕ ಸ್ಪರ್ಧೆಯನ್ನ ನೋಡಿ ಸಂಭ್ರಮಿಸಿದ್ರು. ಗೆದ್ದ ತಂಡಗಳಿಗೆ ಆಕರ್ಶಕ ಬಹುಮಾನ ವಿತರಿಸಲಾಯಿತು..

error: Content is protected !!