108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!

ಮುಂಡಗೋಡ : ತಾಲೂಕಿನ ಇಂದೂರಿನ ಗ್ರಾಮದ ಗರ್ಭಿಣಿಯೊಬ್ಬಳಿಗೆ 108 ಆಂಬ್ಯುಲೆನ್ಸನಲ್ಲಿ ಹೆರಿಗೆಯಾದ ಘಟನೆ ನಡೆದಿದೆ. 19 ವರ್ಷ ವಯಸ್ಸಿನ ದಾವಲಬಿ ಮಾಬೂಷಾ ಹನಕನಹಳ್ಳಿ ಎಂಬುವ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮುಂಡಗೋಡ ತಾಲೂಕಾ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಗರ್ಭಿಣಿಗೆ ಮೊದಲ ಹೆರಿಗೆ ಆಗಿರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿತ್ತು. ಆಂಬ್ಯುಲೆನ್ಸನಲ್ಲಿ ಕರೆ ತರುತ್ತಿರುವಾಗ ವರೂರು ಬಳಿ ಮಹಿಳೆಗೆ ಹೆರಿಗೆ ನೋವು ಕಾಣಿಸಿತು. ಆಗ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಅದರಲ್ಲಿದ್ದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರು, ಚಾಲಕ ಕೆಂಚೇಶ್ ಅವರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದು, ಕಿಮ್ಸ್ ಗೆ ದಾಖಲಿಸಲಾಗಿದೆ.

error: Content is protected !!