ಹಳ್ಳಿ ಹಳ್ಳಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ, ಕಾತೂರಿನಲ್ಲಿ ಸಿಡಿದೆದ್ದ ಮಹಿಳೆಯರು, ಅಬಕಾರಿಗಳೇ ಎಲ್ಲಿದ್ದಿರಿ..?

ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಹಿಳೆಯರು ಸಿಡಿದೆದ್ದಿದ್ದಾರೆ. ತಾಲೂಕಿನಲ್ಲಿ ಅಕ್ರಮವಾಗಿ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರೋ ದಂಧೆಗೆ ಕಡಿವಾಣ ಹಾಕಿ ನಮ್ಮನ್ನ ರಕ್ಷಿಸಿ ಅಂತಾ ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದಾರೆ‌.

ಕಿರಾಣಿ ಅಂಗಡಿಯಲ್ಲೂ ಮದ್ಯ..?
ನಿಜ, ಮುಂಡಗೋಡ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅದೇಷ್ಟರ ಮಟ್ಟಿಗೆ ತನ್ನ ಕಬಂದಬಾಹು ಚಾಚಿಕೊಂಡಿದೆ ಅಂದ್ರೆ, ತಾಲೂಕಿನ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗತ್ತೆ. ಅಧಿಕೃತವಾಗಿ ಮಾರಾಟ ಮಾಡೋ ಕೆಲವೇ ಕೆಲವು ಅಂಗಡಿಗಳು ತಮ್ಮ ವೈನ್ ಶಾಪ್ ಗಳಲ್ಲಿ ಕುಳಿತು ಅಧಿಕೃತವಾಗಿ ಮದ್ಯ ಮಾರುವುದು ಅದೇಷ್ಟೋ ಗೊತ್ತಿಲ್ಲ. ಆದ್ರೆ ಹಳ್ಳಿಗಳಲ್ಲಿ ಹೀಗೆ ಮದ್ಯ ಮಾರಾಟಕ್ಕಾಗಿನೇ ಹುಟ್ಟಿಕೊಂಡಿರೋ ಗೂಡಂಗಡಿಗಳು ಇಡೀ ತಾಲೂಕಿನ ಕಾನೂನು ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.

ಅಬಕಾರಿಗಳು ಮಂತ್ಲಿಗಷ್ಟೇ ಸೀಮಿತ..?
ಇನ್ನು, ಹೀಗೆ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರೋ ಸಂಗತಿ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನಿಲ್ಲ.. ಪೊಲೀಸರಿಗೂ ಗೊತ್ತಿದೆ. ಅಬಕಾರಿಗಳಿಗೂ ಗೊತ್ತಿದೆ. ಆದ್ರೆ, ಅಬಕಾರಿಗಳು ಮಾತ್ರ ಪ್ರತೀ ತಿಂಗಳ ಮೊದಲ ವಾರದಲ್ಲಿ ಬಂದು ಸೂಟಕೇಸ್ ಭರ್ತಿ ಮಾಡಿಕೊಂಡು ಹೋಗುವದನ್ನಷ್ಟೇ ತಮ್ಮ ಕಾಯಕ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ‌. ಹೀಗಾಗಿನೆ ತಾಲೂಕಿನ ಪ್ರತೀ ಹಳ್ಳಿಗಳಲ್ಲಿ ಇವತ್ತು ಕುಡಿಯೋಕೆ ಪರಿಶುದ್ಧ ನೀರು ಸಿಗತ್ತೋ ಇಲ್ವೊ ಗೊತ್ತಿಲ್ಲ‌. ಆದ್ರೆ ಮದ್ಯವಂತೂ ಖಂಡಿತ ಸಿಕ್ಕೇ ಸಿಗತ್ತೆ‌.

ಎಸ್ಪಿ ಮೇಡಂ ಮೇಲಿನ ನಿರೀಕ್ಷೆ ಹುಸಿ..?
ಅಂದಹಾಗೆ, ಉತ್ತರ ಕನ್ನಡಕ್ಕೆ ಎಸ್ಪಿಯಾಗಿ ಡಾ.ಸುಮನ್ ಪನ್ನೇಕರ್ ಮೇಡಂ ಎಂಟ್ರಿಯಾಗುತ್ತಲೇ ಅಕ್ರಮಿಗಳೇಲ್ಲ ಬಿಲ ಸೇರಿಕೊಳ್ಳಬಹುದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ಮುಂಡಗೋಡ ತಾಲೂಕಿನ ಮಟ್ಟಿಗೆ ಅದೇಲ್ಲ ನೂರಕ್ಕೆ ನೂರು ಸುಳ್ಳು ಅನ್ನುವಂತಾಗಿದೆ. ಯಾಕಂದ್ರೆ, ಇಲ್ಲಿನ ಅಕ್ರಮವಾಗಿ ಮದ್ಯ‌ಮಾರಾಟ ಮಾಡುವ ದಂಧೆಕೋರರಿಗೆ ಲಂಗು ಲಗಾಮಿಲ್ಲದೇ ಇರೋದು ಇಲ್ಲಿನ ಮಹಿಳೆಯರ ಶಾಪಕ್ಕೆ ಗುರಿಯಾಗ್ತಿದೆ.

ಇವತ್ತು ಆಗಿದ್ದು ಇಷ್ಟು..!
ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ಮಹಿಳೆಯರು ಉಗ್ರ ಪ್ರತಿಭಟನೆ ಕೈಗೊಂಡಿದ್ದಾರೆ. ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ಕೈಗೊಂಡಿದ್ದಾರೆ. ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರೋ ಮದ್ಯದಂಗಡಿ ಪರವಾನಗಿ ನೀಡಿರೋದನ್ನ ಉಗ್ರವಾಗಿ ಖಂಡಿಸಿದ್ದಾರೆ.

error: Content is protected !!