ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಪ್ರೌಢಶಾಲೆಯ ಬಳಿ ಮೇವಿನ ಬಣಿವೆಗೆ ಬೆಂಕಿ ತಗುಲಿದೆ. ಮದ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.
Video Player
00:00
00:00
ಬೆಂಕಿ ತಗುಲಿದ ತಕ್ಷಣವೇ ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು. ಇಂದೂರು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ರಾಯ್ಕರ್ ರವರಿಗೆ ಸೇರಿದ ಮೇವಿನ ಬಣವಿ ಇದಾಗಿದ್ದು, ಜಾನುವಾರುಗಳ ಪಾಲನೆಯಲ್ಲಿ ತೊಡಗಿರುವ ನಿವೃತ್ತ ಶಿಕ್ಷಕರಿಗೆ ಭಾರೀ ನಷ್ಟವಾಗಿದೆ. ಮದ್ಯಾಹ್ನದ ಸಮಯದಲ್ಲಿ ಬೆಂಕಿಯು ಕೆನ್ನಾಲಿಗೆ ಚಾಚಿದ್ದು, ಅಕ್ಕಪಕ್ಕದ ಮನೆಗಳಿಗೂ ಹರಡುವ ಸಾಧ್ಯತೆ ಇತ್ತು, ಆದ್ರೆ ಅದೃಷ್ಟವಶಾತ್ ಬೆಂಕಿ ಹತೋಟಿಗೆ ತರುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.