ಮುಂಡಗೋಡ; ಬಾಚಣಕಿ ಜಲಾಶಯದಲ್ಲಿ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಕೊನೆಗೂ ಪತ್ತೆಯಾಗಿದೆ. ಇಂದೂ ಕೂಡ ಬೆಳಿಗ್ಗೆಯಿಂದ ಶೋಧ ಕಾರ್ಯ ಜಾರಿಯಲ್ಲಿತ್ತು. ಆದ್ರೆ ಈಗಷ್ಟೇ ಶವ ಪತ್ತೆಯಾಗಿದೆ. ಇದ್ರೊಂದಿಗೆ ಮೂರು ವರ್ಷಗಳ ಪ್ರೀತಿ ಬಾಚಣಕಿ ಜಲಾಶಯದಲ್ಲಿ ನೀರು ಪಾಲಾಗಿದೆ.
ಸೋಮವಾರ ಇದೇ ಬಾಚಣಕಿ ಡ್ಯಾಂ ಅಂಗಳದಲ್ಲಿ ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಪಿಯೂ ಎರಡನೇ ವರ್ಷದಲ್ಲಿ ಓದುತ್ತಿದ್ದ ಕಲಕೇರಿ ಗ್ರಾಮದ ತನುಜಾ ಎನ್ನುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಅಲ್ಲದೇ, ಆಕೆಯ ಜೊತೆಗೆ ಬಂದಿದ್ದ ಅಂತಾ ಹೇಳಲಾಗಿದ್ದ ಮಹೇಶ್ ಎಂಬುವ ಪ್ರಿಯಕರನ ಪಾದರಕ್ಷೆಗಳು ಜಲಾಶಯದ ದಡದಲ್ಲಿ ದೊರೆತಿದ್ದವು. ಹೀಗಾಗಿ, ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿತ್ತು. ಆದ್ರೆ, ಇವತ್ತು ಶವ ದೊರೆತ ಹಿನ್ನೆಲೆಯಲ್ಲಿ ಪ್ರೇಮಿಗಳ ಆತ್ಮಹತ್ಯೆ ಖಾತ್ರಿಯಾದಂತಾಗಿದೆ. ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.