ಮುಂಡಗೋಡ; ಬಾಚಣಕಿ ಜಲಾಶಯದಲ್ಲಿ ನಿನ್ನೆ ನಾಪತ್ತೆಯಾಗಿರೋ ವಿದ್ಯಾರ್ಥಿಗಾಗಿ ಇಂದೂ ಕೂಡ ಶೋಧ ಕಾರ್ಯ ಜಾರಿಯಲ್ಲಿತ್ತು. ಆದ್ರೆ ಇದುವರೆಗೂ ವಿದ್ಯಾರ್ಥಿ ಪತ್ತೆಯಾಗಿಲ್ಲ.

ನಿನ್ನೆ ಇದೇ ಬಾಚಣಕಿ ಡ್ಯಾಂ ಅಂಗಳದಲ್ಲಿ ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ ಪಿಯೂ ಓದುತ್ತಿದ್ದ ಕಲಕೇರಿ ಗ್ರಾಮದ ತನುಜಾ ಎನ್ನುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಅಲ್ಲದೇ, ಆಕೆಯ ಜೊತೆಗೆ ಬಂದಿದ್ದ ಅಂತಾ ಹೇಳಲಾಗಿರೊ ವಿದ್ಯಾರ್ಥಿಯ ಪಾದರಕ್ಷೆಗಳು ಜಲಾಶಯದ ದಡದಲ್ಲಿ ದೊರೆತಿದ್ದವು. ಹೀಗಾಗಿ, ವಿದ್ಯಾರ್ಥಿ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ವಿದ್ಯಾರ್ಥಿಯ ಶವಕ್ಕಾಗಿ ಶೋಧ ನಡೆಸಲಾಗಿತ್ತು. ನಿನ್ನೆಯಿಂದಲೂ ವಿದ್ಯಾರ್ಥಿಯ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದ್ರೆ ಇದುವರೆಗೂ ಆ ವಿದ್ಯಾರ್ಥಿ ಏನಾದ ಅನ್ನೊ ಯಾವುದೇ ಸುಳಿವು ಇನ್ನೂ ಪತ್ತೆಯಾಗಿಲ್ಲ.

error: Content is protected !!