ಮುಂಡಗೋಡ : ತಾಲೂಕಿನ ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಸದ್ಯ ನಡೆಯುತ್ತಿರೋ ವಿದ್ಯಮಾನಗಳು ಬಹುಶಃ ಇಡೀ ತಾಲೂಕಿನಲ್ಲಿ ಕಿಚ್ಚು ಹೊತ್ತಿಸಿದೆ. ಮಠದ ಅಂಗಳದಲ್ಲಿ ಎರಡು ಗುಂಪುಗಳ ನಡುವೆ ಉತ್ತರಾಧಿಕಾರಿಯ ಕಿಚ್ಚು ನಿಗಿ ನಿಗಿಸುತ್ತಿದೆ. ತಾಲೂಕಾ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘದವರು ಸದಸ್ಯರು ಕೂಡ ಈಗ ತಗಾದೆ ತೆಗೆದಿದ್ದಾರೆ.
ಏನಿದು ತಗಾದೆ..?
ಅಂದಹಾಗೆ, ಈಗಾಗಲೇ, ಕಳೆದ ರಾತ್ರಿ ಒಂದು ಗುಂಪು ಗಂಗಾಧರಯ್ಯ ಹಿರೇಮಠ ಎಂಬುವವರನ್ನು ಹನುಮಾಪುರ ಶ್ರೀಕಾಳಿಕಾಮಠದ ಉತ್ತರಾಧಿಕಾರಿ ಅಂತಾ ಘೋಷಣೆ ಮಾಡಿ, ಪಟ್ಟಾಧಿಕಾರದ ವಿಧಿವಿಧಾನಗಳನ್ನೂ ಮಾಡಿ ಆಗಿದೆ. ಆದ್ರೆ, ಇದಕ್ಕೊಪ್ಪದ ಮತ್ತೊಂದು ಬಣ, ಕಳೆದ ಹಲವು ದಿನಗಳಿಂದ ಉತ್ತರಾಧಿಕಾರಕ್ಕಾಗಿ ಅಲೆದಾಡುತ್ತಿರು ಸೋಮಶೇಖರ ಸ್ವಾಮೀಜಿಯವರನ್ನು ತಂದು ಪಟ್ಟಕ್ಕೇರಿಸಲು ಮುಹೂರ್ತ ಫಿಕ್ಸ್ ಮಾಡಿದೆ. ಇವತ್ತು ಮತ್ತು ನಾಳೆ ಅಂದ್ರೆ ಫೆ.9 ಮತ್ತು 10 ರಂದು ಪಟ್ಟಾಧಿಕಾರದ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಮಲ್ಲಿಕಾರ್ಜುನ ಶಾಸ್ತ್ರಿ ವಿರುದ್ದ ಕಿಡಿ..!
ಈ ಕಾರ್ಯಕ್ರಮ ಬಹುತೇಕ ರಂಬಾಪುರಿ ಪೀಠದ ಜಗದ್ಗುರುಗಳ ಸಾನಿಧ್ಯದಲ್ಲೇ ನಡೆಯತ್ತೆ ಅನ್ನೋ ಮಾತುಗಳಿವೆ. ಹೀಗಾಗಿ, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಗಣ್ಯಾತಿಗಣ್ಯರಿಗೆ ಆಮಂತ್ರಣ ನೀಡಿ ಪತ್ರಿಕೆಯಲ್ಲಿ ಹೆಸರು ಹಾಕಲಾಗಿದೆ. ಅದ್ರ ಜೊತೆಗೆ ತಾಲೂಕಾ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘದ ಆಧ್ಯಕ್ಷರು ಅಂತಾ ಮಲ್ಲಿಕಾರ್ಜುನ ಶಾಸ್ತ್ರಿ ಎಂಬುವವರ ಹೆಸರು ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಹೀಗಾಗಿ, ಇದಕ್ಕೆ ತೀವ್ರವಾಗಿ ಖಂಡಿಸಿರೋ ಸಂಘದ ಸದಸ್ಯರು, ಮಲ್ಲಿಕಾರ್ಜುನ ಶಾಸ್ತ್ರೀ ನಮ್ಮಸಂಘದ ಅಧ್ಯಕ್ಷರೇ ಅಲ್ಲ ಅಂತಾ ಕಿಡಿ ಕಾರಿದ್ದಾರೆ.
ಅವ್ರು ಅಧ್ಯಕ್ಷರೇ ಅಲ್ಲ..!
ಒಂದು ವರ್ಷದ ಅವದಿಯಲ್ಲಿ ಅವ್ರು ಅಧ್ಯಕ್ಷರಾಗಿದ್ರು. ಆದ್ರೆ ಅನಾರೋಗ್ಯ ಹಿನ್ನೆಲೆಯಲ್ಲಿ ಆರು ತಿಂಗಳಿಗೇ ಅವರು ಅದ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಅವ್ರು ಈಗ ನಮ್ಮ ಸಂಘದ ಅಧ್ಯಕ್ಷರಾಗಿಲ್ಲ. ಹೀಗಾಗಿ ಅವ್ರು ನಮ್ಮ ಜೊತೆ ಚರ್ಚಿಸದೇ ತಮ್ಮ ಸ್ವಹಿತಾಸಕ್ತಿಗೆ ಒಳಪಟ್ಟು ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಿನ ಜೊತೆ ನಮ್ಮ ಸಂಘದ ಹೆಸರನ್ನು ಬಳಸಿಕೊಂಡಿದ್ದಾರೆ. ಹೀಗಾಗಿ, ಅವ್ರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು, ಈಗಿನ ನೂತನ ಉತ್ತರಾಧಿಕಾರಿಯ ನೇಮಕದ ವಿಚಾರವಾಗಿ ನಾವು ಸಹಮತರಾಗಿಲ್ಲ. ಹೀಗಾಗಿ ಸೋಮಶೇಖರ ಸ್ವಾಮಿ ಉತ್ತರಾಧಿಕಾರಿ ಆಗುವುದಕ್ಕೆ ನಮ್ಮ ಬೆಂಬಲಿವಿಲ್ಲ. ಈಗಾಗಲೇ ಪೀಠಾಧಿಕಾರಿ ನೇಮಕವಾಗಿದೆ. ಮತ್ತೆ ಬೇರೆ ಯಾಕೆ ಬೇಕು ಅಂತಾ ಸಂಘದ ಸದಸ್ಯರುಗಳು ಪ್ರಶ್ನಿಸಿದ್ದಾರೆ.
ಮಾನನಷ್ಟ ಮೊಕದ್ದಮೆ ಹೂಡ್ತಿವಿ..!
ನಮ್ಮ ಗಮನಕ್ಕೆ ತಾರದೇ ನಮ್ಮ ಸಂಘದ ಹೆಸರು ಬಳಸಿಕೊಂಡಿರೋ ಮಲ್ಲಿಕಾರ್ಜುನ ಶಾಸ್ತ್ರೀ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ನಾವು ಅವ್ರ ವಿರುದ್ಧ ಮಾನನಷ್ಟ ಮೊಕದ್ದಮೆ ಹೋಡುತ್ತೇವೆ ಅಂತಾ ಎಚ್ಚರಿಸಿದ್ದಾರೆ. ಹೀಗಾಗಿ, ಸದ್ಯ ಮಠದ ಉತ್ತರಾಧಿಕಾರಿ ನೇಮಕ ಗೊಂದಲ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.