ಮುಂಡಗೋಡ : ತಾಲೂಕಿನಲ್ಲಿ ಗುರುವಾರ 64 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮಳಗಿ ಪಂಚವಟಿಯ ಜವಾಹರ ನವೋದಯ ಶಾಲೆಯ 18 ವಿದ್ಯಾರ್ಥಿಗಳಿಗೆ ಮತ್ತೆ ಸೋಂಕು ದೃಢ ಪಟ್ಟಿದೆ. ಹೀಗಾಗಿ ಮತ್ತೆ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ.
Video Player
00:00
00:00
ಅದ್ರಂತೆ, ತಾಲೂಕಿನ ಬಹುತೇಕ ಶಾಲಾ ಕಾಲೇಜುಗಳಲ್ಲೂ ಕೊರೊನಾ ಆತಂಕ ಶುರುವಾಗಿದೆ. ಬಡ್ಡಿಗೇರಿ ಸರಕಾರಿ ಶಾಲೆ, ಲೊಯೋಲಾ ಪಿ.ಯು. ಕಾಲೇಜು, ಕಾತೂರ ಸರಕಾರಿ ಶಾಲೆ, ಲೊಯೋಲಾ ಕೇಂದ್ರೀಯ ವಿದ್ಯಾಲಯ, ಮುರಾರ್ಜಿ ವಸತಿ ಶಾಲೆ ಪಾಳಾ ಉರ್ದು ಹೈಸ್ಕೂಲು ಸೇರಿ ಹಲವು ಶಾಲೆಗಳಲ್ಲಿ ಕೋವಿಡ್ ಸೋಂಕು ಅಟ್ಟಹಾಸ ಮೆರೆದಿದೆ.