ಮುಂಡಗೋಡ: ಉತ್ತರ ಕರ್ನಾಟಕದ ಯುವಕರ ಪಾಲಿನ ರಣರೋಚಕ ಹೋರಿ ಹಬ್ಬಕ್ಕೆ ಮುಂಡಗೋಡ ತಾಲೂಕಿನಲ್ಲಿ ಭಾರೀ ಹಿನ್ನಡೆಯಾಗಿದೆ. ಕೋಡಂಬಿಯಲ್ಲಿ ನಿನ್ನೆ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಬರೋಬ್ಬರಿ 17 ಜನರ ಮೇಲೆ ಕೇಸು ಜಡೆದಿದ್ದಾರೆ. ಅದ್ರಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ 13 ಜನ ಪರಾರಿಯಾಗಿದ್ದಾರೆ.
ಅನುಮತಿ ಪಡೆದಿರಲಿಲ್ಲವಾ..?
ಕೋಡಂಬಿಯಲ್ಲಿ ನಿನ್ನೆ ಮಂಗಳವಾರ ನಡೆದ “ಹೋರಿ ಬೆದರಿಸುವ ಸ್ಪರ್ಧೆ” ಅಯೋಜಕರಿಗೆ ಸಂಕಷ್ಟ ತಂದೊಡ್ಡಿದೆ. ಕೊರೋನಾ ಸಂಕಷ್ಟದ ನಡುವೆ ಸರ್ಕಾರದ ಯಾವುದೇ ಅನುಮತಿ ಪಡೆಯದೇ, ಸಾಮಾಜಿಕ ಅಂತರ ಪಾಲಿಸದೇ, ಕೊರೋನಾ ನಿಯಮ ಗಾಳಿಗೆ ತೂರಿ ಸ್ಪರ್ಧೆ ಏರ್ಪಡಿಸಿದ್ದಾರೆ ಅಂತಾ ಕೇಸು ದಾಖಲಾಗಿದೆ. ಹಾಗಿದ್ರೆ ಕೋಡಂಬಿ ಹೋರಿ ಸ್ಪರ್ಧೆಯ ಆಯೋಜಕರು ಸ್ಪರ್ಧೆಗೆ ಅನುಮತಿ ಪಡೆದಿರಲಿಲ್ಲವಾ..? ಸಂಕಷ್ಟದ ಸಮಯದಲ್ಲಿ ಯಾಕೆ ಬೇಕಿತ್ತು ಈ ಹುಂಬತನ ಅನ್ನೋ ಪ್ರಶ್ನೆ ಎದುರಾಗಿದೆ.
ಯಾರ್ಯಾರ ಮೇಲೆ ಕೇಸ್..?
ಕೋಡಂಬಿಯ ಹೋರಿ ಬೆದರಿಸೋ ಸ್ಪರ್ಧೆಯ ರೂವಾರಿಗಳು ಅಂತಾ, ಹಾಲಪ್ಪ ಕೋಡಣ್ಣನವರ್, ಬಸವಂತಪ್ಪ ಪೂಜಾರ್, ಹನ್ಮಂತಪ್ಪ ಪೂಜಾರ್, ಕೃಷ್ಣ ಕ್ಯಾರಕಟ್ಟಿ, ತುಕಾರಾಮ್ ಸಾಳೂಂಕೆ, ಗಜೇಂದ್ರ ತಿಮ್ಮಾಪುರ, ನಾಗಪ್ಪ ವಡ್ಡರ, ಯಲ್ಲಪ್ಪ ಬಡಣ್ಣವರ್, ಬಸವರಾಜ್ ಸತ್ಯಪ್ಪನವರ್, ದತ್ತಪ್ಪ ಕ್ಯಾರಕಟ್ಟಿ, ಫಕೀರಪ್ಪ ಗುಡಗುಡಿ, ಮಂಜುನಾಥ್ ದೊಡ್ಮನಿ, ಪರಶುರಾಮ್ ಬಾತಿ, ಪ್ರದೀಪ್ ಕ್ಯಾರಕಟ್ಟಿ, ಬಸವರಾಜ್ ಬಡಿಗೇರ್, ಪ್ರಕಾಶ ಕೂಸಕಟ್ಟಿ, ತುಕಾರಾಮ ಕ್ಯಾರಕಟ್ಟಿ ಎಂಬುವವರ ಮೇಲೆ ಕೇಸು ದಾಖಲಿಸಲಾಗಿದೆ.
ಬಂಧಿತರು..!
ಈ ಪೈಕಿ ಹನ್ಮಂತಪ್ಪ ಪೂಜಾರ್, ತುಕಾರಾಮ್ ಸಾಳೂಂಕೆ, ಮಂಜುನಾಥ್ ದೊಡ್ಮನಿ ಹಾಗೂ ಪ್ರದೀಪ್ ಕ್ಯಾರಕಟ್ಟಿ ಎಂಬುವವರನ್ನು ಬಂಧಿಸಲಾಗಿದ್ದು ಇನ್ನುಳಿದ 13 ಜನರು ಪರಾರಿಯಾಗಿದ್ದಾರೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.