ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಇಂದು ಕೊರೋನಾ ಮಹಾ ಸ್ಪೋಟಗೊಂಡಿದೆ. ತಾಲೂಕಿನಲ್ಲಿ ಇಂದು 53 ಜನರಿಗೆ ಸೋಂಕು ದೃಢಪಟ್ಟಿದೆ. ಈ ಬಾರಿ ಬಹುತೇಕ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಪ್ರಮಾಣ ಗಣನೀಯವಾಗಿ ಏರಿದೆ. ಅದ್ರಲ್ಲೂ ಲೊಯೊಲಾ ಶಿಕ್ಷಣ ಕೇಂದ್ರದ ಪ್ರೌಢಶಾಲೆ, ಕಾಲೇಜು ವಿಭಾಗದ ಬರೋಬ್ಬರಿ 16 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ ಪಟ್ಟಿದೆ.
ಯಾವ್ಯಾವ ಶಾಲೆ, ಎಷ್ಟು ವಿದ್ಯಾರ್ಥಿಗಳು?
ತಾಲೂಕಿನ ಬಡ್ಡಿಗೇರಿ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ, ಮಳಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಐವರು, ಪಾಳಾ ಉರ್ದು ಶಾಲೆಯ ಇಬ್ಬರು, ಕಲಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಹಾಗೂ ಇಂದೂರಿನ ಓರ್ವ ವಿದ್ಯಾರ್ಥಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಅಂತಾ ಮಾಹಿತಿ ಲಭ್ಯವಾಗಿದೆ.
ಪುಟ್ಟ ಮಕ್ಕಳಿಗೂ ಸೋಂಕು..!
ಇನ್ನು, ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 4 ವರ್ಷದ ಓರ್ವ ಬಾಲಕ, ಚಿಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 6 ವರ್ಷದ ಮತ್ತೋರ್ವ ಬಾಲಕನಿಗೂ ಸೋಂಕು ದೃಢ ಪಟ್ಟಿದೆ. ಅಲ್ಲದೇ, ಕಲಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 7 ವರ್ಷ ವಯಸ್ಸಿನ ಮೂವರು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.