ಆಕಾಶದಲ್ಲಿ ಸಾಲು ಸಾಲು ಚುಕ್ಕಿಗಳು, ಇದೇನಿದು ನಭದಲ್ಲಿ ಬೆಳಕಿನ ಚಿತ್ತಾರ..? ಅಸಲು ಏನ್ ಗೊತ್ತಾ..?

ಮುಂಡಗೋಡ: ನಭದಲ್ಲಿ ಕಾಣಿಸಿಕೊಂಡ ಸಾಲುಸಾಲು ತಾರೆಗಳು.. ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳು.. ಆಗಸದಲ್ಲಿ ನಡೆದ ಈ ವಿಸ್ಮಯವನ್ನು ಕಂಡು ಬೆರಗಾಗಿರುವ ತಾಲೂಕಿನ ಜನತೆ..

ಹೌದು, ಮುಂಡಗೋಡ ತಾಲೂಕಿನಲ್ಲಿ ರಾತ್ರಿ ಆಕಾಶದಲ್ಲಿ ವಿಸ್ಮಯ ನಡೆದಿದೆ. ಮುಂಡಗೋಡ ತಾಲೂಕಿನಾದ್ಯಂತ ಆಗಸದಲ್ಲಿ ಚುಕ್ಕಿಗಳ ಸಾಲು ಸಾಲು ಚಿತ್ತಾರಗಳು, ಬೆಳಕಿನ ಆಟಗಳು ನಡೆದಿದೆ. ಆದ್ರೆ ಇದು ಕೃತಕ ಉಪಗ್ರಹಗಳ ಚಲನೆ ಅಂತಾ ಖಗೋಳತಜ್ಞರು ಸ್ಪಷ್ಟಪಡಿಸಿದ್ದಾರೆ.

ಅಸಲು ಏನ್ ಗೊತ್ತಾ..?
ನಿಜ ಅಂದ್ರೆ, ಹಾಗೆ ನಮಗೇಲ್ಲ ಕಂಡ ಚುಕ್ಕಿಗಳ ಸಾಲುಗಳು ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ಸ್ಟಾರ್ ಲಿಂಕ್ ಎಂಬ ಯೋಜನೆಯಡಿ 1,800ಕ್ಕೂ ಹೆಚ್ಚು ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ.

ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯ‌ಲ್ಲಿ ಭೂಮಿಯನ್ನು ಸುತ್ತುತ್ತಿವೆ. 2018ರ ಫೆ.22ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿದ್ದುದು ಜಿಲ್ಲೆಯ ಕರಾವಳಿ ಭಾಗದ ಆಗಸದಲ್ಲಿ ಗೋಚರಿಸಿದೆ.

ಮಂಗಳೂರು ಭಾಗಕ್ಕೆ ನಾಳೆ..!
ಸರಣಿ ಉಪಗ್ರಹಗಳು ನಾಳೆ ಉಡುಪಿ ಹಾಗೂ ಮಂಗಳೂರಿನಲ್ಲಿ ಸಂಜೆ 7.11-7.15 ರ ನಡುವೆ ಕಾಣಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

ಉಪಗ್ರಹಗಳ ಕಕ್ಷೆ ಹೇಗಿದೆ ಗೊತ್ತಾ..? ಈ ಚಿತ್ರ ನೋಡಿ..

error: Content is protected !!