ಬೆಳಗಾವಿ: ಇಂದು ಕನ್ನಡಪರ ಸಂಘಟನೆಗಳ ಬೃಹತ್ ಹೋರಾಟ ಹಿನ್ನೆಲೆಯಲ್ಲಿ, ನಾಡದ್ರೊಹಿ ಎಂಇಎಸ್ ಕಾರ್ಯಕರ್ತರ ಪುಂಡಾಟ ಖಂಡಿಸಿ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದ ಕನ್ನಡಪರ ಹೋರಾಟಗಾರರನ್ನು ತಡೆಯಲಾಗಿದೆ.
ಹಿರೇಬಾಗೇವಾಡಿ ಟೊಲ್ ಗೇಟ್ ಬಳಿ ಹೋರಾಟಗಾರರನ್ನ ತಡೆದಿರೊ ಪೊಲೀಸರು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಕನ್ನಡಪರ ಹೋರಾಟಗಾರ ವಶಕ್ಕೆ ಪಡೆದಿದ್ದಾರೆ.
ಪ್ರವಿಣ ಶೆಟ್ಟಿ ಬಣದ ಕಾರ್ಯಕರ್ತರನ್ನು ನೂರಾರು ಕಾರ್ಯಕರ್ತರನ್ನು ವಶಕ್ಕೆ ವಶಕ್ಕೆ ಪಡೆಯಲಾಗಿದೆ.. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.