ಹುಬ್ಬಳ್ಳಿ: ಇದು ಅಕ್ಷರಶಃ ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಾನೂನನ್ನು ರಕ್ಷಣೆ ಮಾಡಬೇಕಿದ್ದವರೆ ಇಲ್ಲಿ ಕಾನೂನನ್ನೇ ಮರೆತಂತೆ ಕಾಣುತ್ತೆ.. ಗಾಂಜಾ ಗಮ್ಮತ್ತು ಇದೀಗ ಎಲ್ಲೆಡೆ ಜೋರಾಗಿದ್ದು ಅದನ್ನ ತಡೆಹಿಡಿಯಬೇಕಾದವರೆ ಇದೀಗ ಅವರೇ ಮಾರಾಟ ಮಾಡಿ ತಗಲಾಕ್ಕೊಂಡಿದಾರೆ. ಸಸ್ಪೆಂಡ್ ಆಗಿ ಆಗಿದ್ದಾರೆ.
ಹೌದು ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಸಿಬ್ಬಂದಿ ಸೇರಿದಂತೆ ಗೋಕುಲ ರಸ್ತೆಯ ಠಾಣೆಯ ಸಿಬ್ಬಂದಿ ಗಾಂಜಾ ಮಾರಾಟಕ್ಕೆ ಇಳಿದಿದ್ದು ಅವರೆಲ್ಲರನ್ನ ಸಸ್ಪೆಂಡ್ ಮಾಡುವ ಮೂಲಕ ಖಡಕ್ ಎಚ್ಚರಿಕೆಯನ್ನ ನಗರ ಪೊಲೀಸ್ ಕಮಿಷನರ್ ಕೊಟ್ಟಿದ್ದಾರೆ. ಗಾಂಜಾ ಮಾರಾಟ ಗಾರರನ್ನ ಬಂಧಿಸಿ ಅವರಿಂದಲೇ ಹಣ ಪಡೆದು ಬಿಟ್ಟ ಆರೋಪ ಕೇಳಿ ಬಂದ ಬೆನ್ನಲ್ಲೇ ಕಮಿಷನರ್ ರಿಂದ ಅಮಾನತ್ತು ಆದೇಶ ಹೊರಡಿಸಿದ್ದಾರೆ.
ಅಂದಹಾಗೆ, ಗಾಂಜಾ ಗಮ್ಮತ್ತು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜೋರಾಗಿತ್ತು..ಈ ಹಿನ್ನೆಲೆ ಪೊಲೀಸ್ ಕಮಿಷನರ್ ಸಹ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಚನೆ ಸಹ ನೀಡಿದ್ರು ಅದರಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟವನ್ನ ಭೇದಿಸಿದ್ದ ಪೊಲೀಸರು ಪ್ರಶಂಸೆಗೆ ಪಾತ್ರವಾಗಿದ್ರು.. ಆದ್ರೆ ಸೀಜ್ ಮಾಡಿದ್ದ ಗಾಂಜಾವನ್ನೇ ಮಾರಾಟ ಮಾಡುವ ಮೂಲಕ ನವನಗರ ಸಿಪಿಐ ವಿಶ್ವನಾಥ್ ಚೌಗಲೆ, ಎಎಸ್ ಐ ಕರಿಯಪ್ಪಗೌಡರ, ಹೆಡ್ ಕಾನ್ಸ್ಟೇಬಲ್ ನಾಗರಾಜ ಗುಡಿಮನಿ, ವಿಕ್ರಂ ಪಾಟೀಲ ಸೇರಿದಂತೆ ಶಿವಕುಮಾರ್ ಮೇತ್ರಿ ಮತ್ತು ಗೋಕುಲ ಠಾಣೆಯ ಹೆಡ್ ಕಾನ್ಸ್ಟೇಬಲ್ ದಿಲ್ಶಾದ್ ಎಂ ಸಿ ಹೊನ್ನಪ್ಪನವರರನ್ನ ಕಮಿಷನರ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ..
ಒಟ್ಟಾರೆ ಗಾಂಜಾ ದಂಧೆಯನ್ನ ಮಟ್ಟ ಹಾಕಬೇಕು, ಯುವಕರನ್ನ ಸರಿ ದಾರಿಗೆ ತರಬೇಕು, ಹುಬ್ಬಳ್ಳಿ ನಗರವನ್ನ ಗಾಂಜಾ ಮುಕ್ತ ನಗರವನ್ನ ಮಾಡಬೇಕು ಅಂತ ಫಿಲ್ಡಿಗೆ ಇಳಿಯಬೇಕಿದ್ದ ಪೊಲೀಸರೇ ಗಾಂಜಾ ಮಾರಾಟಕ್ಕೆ ಮುಂದಾಗಿದ್ದು ಕಾನೂನು ವ್ಯವಸ್ಥೆ ರಾಜ್ಯದಲ್ಲಿ ಅದ್ಯಾವ ಮಟ್ಟಿಗೆ ಇದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.