ದೇಶಪಾಂಡೆಯವರೇ, ನಾನು ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ಆದ್ರೆ ತಮ್ಮ ಮೂವತ್ತು ವರ್ಷದ ಸಾಧನೆ ಏನು ಅಂತಾ ಜನ್ರಿಗೆ ಗೊತ್ತಿದೆ, ಕ್ಷೇತ್ರದಲ್ಲಿ ಸೊರಗಿ ಹೋದ ಕೆರೆ, ಕಟ್ಟೆಗಳೇಲ್ಲ ನಿಮ್ಮ ಸಾಧನೆಯ ಕತೆ ಹೇಳ್ತಿವೆ ಅಂತಾ ಬಿಜೆಪಿ ಯುವ ನಾಯಕ ವಿವೇಕ್ ಹೆಬ್ಬಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆಯವ್ರಿಗೆ ನಾಜೂಕಿನಿಂದ್ಲೇ ಹರಿತ ಬಾಣ ಬಿಟ್ಟಿದ್ದಾರೆ.

ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ವಿವೇಕ್ ಹೆಬ್ಬಾರ್, ಕಾಂಗ್ರೆಸ್ ಅನ್ನೋ ಪಕ್ಷ ಸದ್ಯ ಶೂನ್ಯಕ್ಕೆ ಜಾರಿದೆ. ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ನೆಲೆಯೇ ಇಲ್ಲವಾಗಿದೆ. ಹೀಗಾಗಿ, ಬಿಜೆಪಿ ಕಾರ್ಯಕರ್ತರಿಗೆ ಏನೆನೋ ಹೇಳಕೊಂಡು ಪಕ್ಷದ ಶಾಲು ಹಾಕಿ ಪಕ್ಷ ಸೇರ್ಪಡೆ ಅಂತಾ ಬೊಬ್ಬೆ ಹೊಡಿತಿದಾರೆ ಅಂತಾ ವಿವೇಕ್ ಹೆಬ್ಬಾರ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅನ್ನೋದು ಬಹುದೊಡ್ಡ ಪಕ್ಷ, ಇಲ್ಲಿ ಎಲ್ಲರೂ ಸಮರ್ಥ ಮುಖಂಡರೇ ಇದ್ದಾರೆ. ಸಹಜವಾಗೇ ಒಂದಿಷ್ಟು ಭಿನ್ನಾಭಿಪ್ರಾಯ ಇದೆ. ಅದನ್ನ ನಾವು ಹೇಗೆ ಬಗೆಹರಿಸಿಕೊಳ್ಳಬೇಕೊ ಬಗೆಹರಿಸಿಕೊಳ್ತಿವಿ ಅಂತಾ ವಿವೇಕ್ ಹೆಬ್ಬಾರ್ ತಿಳಿಸಿದ್ರು.

ಯುವಕರು ಸಮರ್ಥರಿದ್ದಾರೆ..!
ಇನ್ನು, ಪ್ರಶಾಂತ್ ದೇಶಪಾಂಡೆ, ಯಲ್ಲಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ, ಇಲ್ಲಿನ ಕೆಲವು ಯುವಕರಿಗೆ ಭೇಟಿ ಮಾಡ್ತಾ, ಏನೇನೋ ಗಿಮಿಕ್ ಮಾಡ್ತಿದಾರೆ. ಆದ್ರೆ, ನಮ್ಮ ಯುವಕರು ಸಮರ್ಥರಿದ್ದಾರೆ. ನಮ್ಮ ಯುವಕರನ್ನ ಟಚ್ ಮಾಡಲು ಯಾರಿಗೂ ಆಗಲ್ಲ ಅಂತಾ ವಿವೇಕ್ ಹೆಬ್ಬಾರ್ ಭರವಸೆಯ ಮಾತು ಹೇಳಿದ್ರು‌.

error: Content is protected !!