ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು ಜಾರಿಯಲ್ಲಿವೆ. ಬಿಜೆಪಿಯ ಒಳ ಮಸಲತ್ತುಗಳ ಕುರಿತಾಗಿ ಎದ್ದಿರುವ ಸಾಲು ಸಾಲು ಗುಲ್ಲುಗಳು, ಒಂದರ್ಥದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಇನ್ನಿಲ್ಲದ ತಳಮಳಕ್ಕೆ ಕಾರಣವಾಗಿದೆ. ಬಹುತೇಕ ಯುವ ಪಡೆ ಒಳಗೊಳಗೇ ಕುದಿಯುತ್ತಿದೆ ಅನ್ನೋ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಬ್ಬಾರ್ ಪಡೆ ಅಲರ್ಟ್ ಆಗಿದೆ. ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ದಾರಿತಪ್ಪಿದ್ದ ಪಕ್ಷದ ಸಂಘಟನೆಯನ್ನು ಮತ್ತೆ ಟ್ರ್ಯಾಕ್ ಗೆ ತರಲು ಮತ್ತದೇ ಯುವ ನಾಯಕ ಫಿಲ್ಡಿಗೆ ಇಳಿದಿದ್ದಾರೆ.
“ವಿವೇಕ” ದಿಂದ ಕೆಲಸ..!
ಯಸ್, ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಇಡೀ ಕ್ಷೇತ್ರದಲ್ಲಿ ಪಕ್ಷದಲ್ಲಿನ ಯುವ ಪಡೆಗೆ ಆಕ್ಸಿಜನ್ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಕೆಲವೊಂದು ಮನಸ್ತಾಪಗಳು ಸ್ಥಳೀಯ ಮಟ್ಟದಲ್ಲಿ ಇರೋದು ಸಹಜ ಅಂತಲೇ ಫಿಲ್ಡಿಗೆ ಇಳಿದಿರೋ ವಿವೇಕ್, ಎಲ್ಲೆಲ್ಲಿ ಅಸಮಾಧಾನದ ಗಾಳಿ ಗರಮ್ಮಾಗಿದೆಯೋ ಅಲ್ಲಲ್ಲಿ, ಒಂದಿಷ್ಟು ವಿಶೇಷ ಕಾಳಜಿಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಗೆ ಡೋಂಟ್ ಕೇರ್..!
ಕ್ಷೇತ್ರದಲ್ಲಿ, ಬಹುತೇಕ ಸೋರಗಿ ಹೋಗಿದ್ದ ಕಾಂಗ್ರೆಸ್ ಗೆ ಜೀವ ತುಂಬಿ, ಹಳ್ಳಿ ಹಳ್ಳಿಗಳಲ್ಲೂ ಒಂದಿಷ್ಟು ಕಾರ್ಯಪಡೆ ರೂಪಿಸ್ತಿರೋ ಪ್ರಶಾಂತ್ ದೇಶಪಾಂಡೆಗೆ ಸೆಡ್ಡು ಹೊಡೆಯಲು ವಿವೇಕ್ ಹೆಬ್ಬಾರ್ ತನ್ನದೇ ಆದ ಗಟ್ಟಿ ಪಡೆಯೊಂದಿಗೆ ಅಖಾಡಕ್ಕೆ ಧುಮುಕಿದ್ದಾರೆ. ಹೀಗಾಗಿ, ಅಂತಹದ್ದೊಂದು ಭರವಸೆಯೊಂದಿಗೆ ವಿವೇಕ್ ಹೆಬ್ಬಾರ್ ಹೇಳಿದ್ದು ಹೀಗೆ..!
ಇನ್ನು ಯಾವಾಗ, ಯಲ್ಲಾಪುರ ಕ್ಷೇತ್ರದಲ್ಲಿ ದೇಶಪಾಂಡೆ “ಕೈ” ಬಲಗೊಳ್ಳುವ ಲಕ್ಷಣಗಳು ಗೋಚರಿಸತೊಡಗಿದ್ವೋ ಆವಾಗ್ಲೇ, ಹೆಬ್ಬಾರ ಅಂಗಳದಲ್ಲಿ ಅದಕ್ಕೊಂದು ಠಕ್ಕರ್ ಕೊಡೊಕೆ ಇನ್ನಿಲ್ಲದ ಪೀಕಲಾಟಗಳು ಶುರುವಾಗಿದ್ವು, ಅದ್ರಲ್ಲೂ ಪ್ರಶಾಂತ್ ದೇಶಪಾಂಡೆಯವರೇ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಅಂತಾ ಯಾವಾಗ ಘೋಷಣೆ ಆಯ್ತೋ, ಅವಾಗ್ಲೇ ವಿವೇಕ್ ಹೆಬ್ಬಾರ್ ಮೈ ಕೊಡವಿ ಎದ್ದಿದ್ದಾರೆ. ನೇರವಾಗಿ ತಮ್ಮ ಕಾರ್ಯಕರ್ತರಿಗೆ, ಅದ್ರಲ್ಲೂ ಕ್ಷೇತ್ರದಲ್ಲಿನ ಯುವ ಕಾರ್ಯಕರ್ತರಿಗೆ ಬಲಗೊಳಿಸಲು ತಯಾರಾಗಿದ್ದಾರೆ. ಪ್ರತೀ ದಿನ ಅದೇಲ್ಲೇಲ್ಲಿ “ಹೊಗೆ” ಆಡ್ತಿದೆಯೋ ಅಲ್ಲಲ್ಲಿ ಬೆಂಕಿನಂದಿಸಲು ಡ್ರಮ್ಮುಗಟ್ಟಲೇ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ.
ಹೇಳ್ರಪ್ಪಾ ಏನ್ ಸಮಸ್ಯೆ..?
ಈ ಕಾರಣಕ್ಕಾಗೇ, ಎಲ್ಲೇಲ್ಲಿ, ಯಾರ್ಯಾರು, ಅಸಮಾಧಾನಗೊಂಡು ಮುಖ ಊದಿಸಿಕೊಂಡಿದ್ದರೋ ಅಂತವರಿಗೇಲ್ಲ ಯಲ್ಲಾಪುರಕ್ಕೆ ಕರೆದು ಏನಪ್ಪಾ ನಿಮ್ಮ ಸಮಸ್ಯೆ ಅಂತಾ, ಮೈದಡವುತ್ತಿದ್ದಾರೆ. ಹಕೀಕತ್ತುಗಳನ್ನೇಲ್ಲ ಕೇಳಿ, ಅದಕ್ಕೊಂದು ಪರಿಹಾರ ಸೂಚಿಸ್ತಿದಾರೆ, ಕೆಲವು ಮುಖಂಡರುಗಳ ನಡುವಿನ ವೈಮನಸ್ಸುಗಳನ್ನು ಕೆಣಕಿ, ಎದುರು ಬದುರು ಕೂರಿಸಿ, ಕೈ ಕೈ ಸೇರಿಸಿ ಕೋಪ ಶಮನಿಸುವ ಕಾರ್ಯ ಮಾಡ್ತಿದಾರೆ. ಹೀಗಾಗಿ, ಒಂದಿಷ್ಟು ಒಳಗುದಿ ತಹಬದಿಗೆ ಬಂದಿದೆಯಂತೆ. ಕಾರ್ಯಕರ್ತರು ಮತ್ತೆ ಹುರುಪಾಗಿದ್ದಾರಂತೆ.
ಅಷ್ಟಕ್ಕೂ ಇರೋ ಸತ್ಯವೇನು ಗೊತ್ತಾ..?
ಅಸಲು, ಮುಂಡಗೋಡ ಬಿಜೆಪಿಯಲ್ಲಿ ಇಷ್ಟೇಲ್ಲ ಹೊಗೆಯಾಡಿಸಲು ಕಾರಣವಾಗಿದ್ದೇ ಮತ್ತದೇ ಮೂಲ, ವಲಸಿಗರ ನಡುವಿನ ತಿಕ್ಕಾಟ. ಇತ್ತೀಚೆಗೆ ತಾಲೂಕಿನಲ್ಲಿ ಪ್ರತೀ ಗ್ರಾಮ ಪಂಚಾಯತ ಮಟ್ಟದಲ್ಲಿ ಶಕ್ತಿ ಕೇಂದ್ರಗಳನ್ನ ರಚನೆ ಮಾಡಲಾಗಿದೆಯಂತೆ, ಹಾಗೆ ರಚನೆಯಾದ ಶಕ್ತಿಕೇಂದ್ರಗಳಲ್ಲಿ ಬಹುತೇಕ ವಲಸಿಗರೇ ಹಾಸು ಹೊಕ್ಕಾಗಿದ್ದಾರೆ ಅಂತಾ ಮೂಲ ಕುಳಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.
“ನಾವು ದಶಕಗಳಿಂದಲೂ ಈ ಬಿಜೆಪಿಗಾಗಿ ಏನೇಲ್ಲ ಮಾಡಿ ಅರಬಿ ಹರ್ಕೊಂಡಿದಿವಿ, ಆದ್ರ ನಮಗ ಯಾರೂ ಕ್ಯಾರೆ ಅನ್ನಂಗಿಲ್ಲ” ಅಂತಾ ತಮ್ಮ ಹೊಟ್ಟೆಯೊಳಗಿನ ಅಷ್ಟೂ ಸಿಟ್ಟು ಹೊರಹಾಕಿ ಎಲ್ಲೆಂದರಲ್ಲಿ ಒದರಾಡಿಕೊಳ್ತಿದಾರೆ “ಮೂಲ” ಬಿಜೆಪಿಗರು. ಅಷ್ಟಕ್ಕೂ ಇದೇಲ್ಲ ಖುದ್ದು ಹೆಬ್ಬಾರ್ ಸಾಹೇಬ್ರ ಎದುರೇ ಖುಲ್ಲಂ ಖುಲ್ಲಾ ಜಟಾಪಟಿ ಆಗಿದೆ. ಆದ್ರೆ, ಇದಕ್ಕೊಂದು ಮುಲಾಮು ಹಚ್ಚಿ, ವಾಸಿ ಮಾಡುವ ಕಾರ್ಯ ಮಾತ್ರ ಆಗ್ತಿಲ್ಲವಾ..? ಅನ್ನೋ ಪ್ರಶ್ನೆ ಎದುರಾಗಿದೆ.
ಇವತ್ತು, ಗಿರ್”ಮೀಟ್”..!
ಅಂದಹಾಗೆ, ಇವತ್ತು ಅಂದ್ರೆ ಬುಧವಾರ ಸಚಿವ ಹೆಬ್ಬಾರ್ ಸಾಹೇಬ್ರು ಮುಂಡಗೋಡ ತಾಲೂಕಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದ್ರಲ್ಲಿ ನಂದಿಕಟ್ಟಾ ಗ್ರಾಮಕ್ಕೂ ಸಾಯಂಕಾಲ ಕಾರ್ಯಕರ್ತರ ಜೊತೆ ಕುಶಲೋಪರಿ ಕಾರ್ಯಕ್ರಮವೂ ಇದೆ. ಈ ವೇಳೆ ಸುಮಾರು 40 ಕ್ಕೂ ಹೆಚ್ಚು ಮೂಲ ಬಿಜೆಪಿಗರು ಹೆಬ್ಬಾರ್ ಸಾಹೇಬ್ರ ಆಮನಾ ಸಾಮನಾ ಅಗೋ ಚಾನ್ಸ್ ಇದೆ. ನಿಜ ಅಂದ್ರೆ ಈ ಮೂಲಕುಳಗಳ ಅಸಲೀ ನೋವೂ ಅದೇ. ಶಕ್ತಿಕೇಂದ್ರದಲ್ಲಿ ನಮ್ಮ ಶಕ್ತಿಗಳನ್ನ ಕಡೆಗಣಿಸಲಾಗಿದೆ ಅನ್ನೋದು. ಅದಕ್ಕಾಗೇ ಅವ್ರೇಲ್ಲ ಇನ್ನೇನು ಪ್ರಶಾಂತಣ್ಣನ ಜೊತೆ “ಮಾತುಕತೆ” ಗಾಗಿ ಶಿರಸಿ ಸಮೀಪದ ಆ ಜಂಗಲ್ ರೆಸಾರ್ಟ್ ಗೆ ಹೆಜ್ಜೆ ಇಟ್ಟಾಗಿತ್ತು. ಆದ್ರೆ, “ಸಿದ್ದ”ನ ಸಿಂಪಲ್ ಟ್ರಿಕ್ಸ್ ನಲ್ಲಿ ಒಂದಿಷ್ಟು ತೀರ್ಮಾನ ಬದಲಿಸೋ ಮಟ್ಟಿಗೆ ಬಂದಿದೆ. ಆಯ್ತಪ್ಪಾ ಸಾಹೇಬ್ರ ಹತ್ರ ನಮ್ಮ ನೋವು ಹೇಳಿಕೊಳ್ತೇವೆ, ಅದೇನಾಗತ್ತೋ ನೋಡೋಣ ಅಂದು ಸಂಜೆಗಾಗಿ ಕಾಯ್ತಿದಾರಂತೆ. ಹೀಗಾಗಿ, ಇವತ್ತು, ಆ ಎಲ್ಲಾ ನಲವತ್ತೂ ಜನ ಹೆಬ್ಬಾರ್ ಸಾಹೇಬ್ರ ಜೊತೆ “ಗಿರ್ಮಿಟ್” ತಿಂದು, ಅದರ ಜೊತೆ ತಮ್ಮ ನೋವೂ ಹಂಚಿಕೊಳ್ಳಲಿದ್ದಾರಂತೆ. ಆದ್ರೆ ಹೆಬ್ಬಾರ್ ಸಾಹೇಬ್ರು ಅವ್ರಿಗೇಲ್ಲ ಅದೇನು ಭರವಸೆ ನೀಡ್ತಾರೋ ಗೊತ್ತಿಲ್ಲ.
ಒಟ್ನಲ್ಲಿ, ಇಂತಹ ಮೂಲಕುಳಗಳ ನೋವಿನ ಕತೆಗಳಿಗೆ ಖುದ್ದು ಶಿವರಾಮ್ ಹೆಬ್ಬಾರ್ ಸಾಹೇಬ್ರೇ ಒಂದಿಷ್ಟು ಮುಲಾಮು ಹಚ್ಚೊ ಕೆಲಸ ಮಾಡಬೇಕಿದೆ. ಇತ್ತ, ವಿವೇಕ್ ಹೆಬ್ಬಾರರೂ ತಾಲೂಕಾದ್ಯಂತ ಮುನಿಸಿಕೊಂಡವರ ಮೈದಡವಿ ಮಾತನಾಡೋಕೆ ಇಳಿದು ಆಗಿದೆ. ಇನ್ನೇನಿದ್ರೂ “ಹಮ್ಕೊ ಸಿರ್ಫ್ ತುಮ್ಸೇ ಪ್ಯಾರ್ ಹೈ” ಅನ್ನೋ ಹಾಡು ಕೇಳೋದಷ್ಟೇ ಬಾಕಿಯಂತೆ. ಏನಾಗತ್ತೋ ಗೊತ್ತಿಲ್ಲ, ಕಾಯೋಣ..!