ಗೋಕರ್ಣ: ಸಮುದ್ರದ ನೀರಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಲಾಗಿದೆ. ಕುಮಟಾದ ಗೋಕರ್ಣ ಕಡಲತೀರದಲ್ಲಿ ಘಟನೆ ನಡೆದಿದ್ದು,ರೋಹಿತ್ ಪಾಟೀಲ್(21) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದಾನೆ.
ಐವರು ಸ್ನೇಹಿತರು ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈಜಲು ಸಮುದ್ರಕ್ಕೆ ಇಳಿದಿದ್ದ ವೇಳೆ ರೋಹಿತ್ ಅಲೆಗಳಿಗೆ ಸಿಲುಕಿದ್ದ. ಈ ವೇಳೆ ಇನ್ನೇನು ಸಮುದ್ರ ಪಾಲಾಗುತ್ತಿದ್ದ ರೋಹಿತ್ ನನ್ನು ಸ್ಥಳೀಯರು, ಜೀವರಕ್ಷಕ ಸಿಬ್ಬಂದಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಬದುಕುಳಿದು ಬಂದ ಯುವಕ ಪ್ರಾಥಮಿಕ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾನೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.