ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?

ಖಾಕಿ ಪಡೆಯಲ್ಲೂ ಇನ್ನಿಲ್ಲದ ಎತ್ತುವಳಿ ಶೂರರಿದ್ದಾರೆ, ಅವ್ರಿಂದ ಹುಶಾರಾಗಿರಿ ಅಂತಾ ಉತ್ತರ ಕನ್ನಡ ಎಸ್ಪಿ ಪ್ರಕಾಶ ದೇವರಾಜು ಇತ್ತಿಚೇಗಷ್ಟೇ ಖಡಕ್ಕಾಗಿ ಹೇಳಿದ್ರು‌. ಅಲ್ದೇ ಹಿರಿಯ ಅಧಿಕಾರಿಗಳ ಹೆಸ್ರಲ್ಲಿ ದುಡ್ಡು ಪೀಕೊ ಕೆಲ ಪೊಲೀಸರು, ವಂಚಕರು ದಂಧೆಗೆ ಇಳಿದಿದ್ದಾರೆ. ಅಂತವರಿಗೆ ಯಾರೂ ಬಿಡಿಗಾಸೂ ಕೊಡಬೇಡಿ, ಹಾಗೇನಾದ್ರೂ ಕೇಳಿದ್ರೆ ನೇರವಾಗಿ ನಂಗೆ ಕಂಪ್ಲೇಂಟ್ ಕೊಡಿ ಅಂತಾ ಖಡಕ್ಕಾದ ಮಾತು ಹೇಳಿದ್ರು. ಹಾಗಾದ್ರೆ, ಅವ್ರು ಇಂತವರನ್ನ ನೋಡಿಯೇ ಹೇಳಿದ್ರಾ..? ಗೊತ್ತಿಲ್ಲ. ಹಾಗಾದ್ರೆ, ಎಸ್ಪಿ ಸಾಹೇಬ್ರು ಹೇಳಿದ್ದಾದ್ರೂ ಏನು ಒಮ್ಮೆ ಕೇಳಿ, ಆಮೇಲೆ ಮುಂದಿನ ವಿಷಯಕ್ಕೆ ಬರೋಣ..

ಇಲ್ಲಿ ಇದನ್ಯಾಕಪ್ಪಾ ಹೇಳ್ತಿದಿನಿ ಅಂದ್ರೆ, ಇಲ್ಲೊಬ್ಬ ಖತರ್ನಾಕ ಮಾಜಿ ಪೊಲೀಸಪ್ಪ ಮಾಡಬಾರದ ಕೆಲಸ ಮಾಡಿ ನಾಪತ್ತೆಯಾಗಿದ್ದಾನೆ ಅನ್ನೊ ಆರೋಪ ಕೇಳಿ ಬಂದಿದೆ. ಅದೇಂತದ್ದೋ ಹೈ ಲೇವೆಲ್ ಕಾಂಟ್ಯಾಕ್ಟ್ ಹೆಸ್ರಲ್ಲಿ ಹಲವು ಜನರ ಜೀವ ಹಿಂಡಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸ್ತಿನಿ ಅಂತಾ ಬರೋಬ್ಬರಿ 12 ಜನ ಅಭ್ಯರ್ಥಿಗಳಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಒಬ್ಬೊಬ್ಬರಿಂದ 2 ಲಕ್ಷ ಹಣ ಪಡೆದು ಎಸ್ಕೇಪ್ ಆಗಿದ್ದಾನೆ. ಪಾಪ, ಆತನ ಖಾಕಿ ಪವರ್ ನಂಬಿ ಕೆಲಸ ಸಿಗತ್ತೆ ಅನ್ನೋ ಭರವಸೆಯಲ್ಲಿ ಆ ಹನ್ನೇರಡೂ ಜನ ಈಗ ವಿಲ ವಿಲ ಒದ್ದಾಡ್ತಿದಾರೆ.

ಅಂದಹಾಗೆ, ಪೊಲೀಸನ ವಂಚನೆ ಬಗ್ಗೆ ಮುಂಡಗೋಡ ಪಟ್ಟಣದ ನಿವಾಸಿ ಗುರುರಾಯ ರಾಯ್ಕರ ಎಂಬುವವರು ಮುಂಡಗೋಡ ಠಾಣೆಯಲ್ಲಿ ಆತನ ವಿರುದ್ಧ ಮಾರುದ್ದ ದೂರು ನೀಡಿದ್ದಾರೆ‌. ಹೀಗಾಗಿ, ಎಲ್ಲಿವರೆಗೆ ಮೋಸ ಹೋಗೋರು ಇರ್ತಾರೋ, ಅಲ್ಲಿವರೆಗೆ ಮೋಸ ಮಾಡೋರು ಇದ್ದೆ ಇರ್ತಾರೆ ಅನ್ನೋ ಮಾತು ಮತ್ತೊಮ್ಮೆ ಅಕ್ಷರಶಃ ಸಾಭೀತಾಗಿದೆ‌.

ಇದು ದೂರು..!
ಆತನ ಹೆಸ್ರು, ಸಂತೋಷ ತಿಪ್ಪಣ್ಣ ಗುದಗಿ, ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವನು. ಈತ ಹಾವೇರಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಸೇರಿ ಒಟ್ಟೂ ಹನ್ನೆರಡು ಜನ ಅಭ್ಯರ್ಥಿಗಳಿಂದ ಹಣ ಪೀಕಿದ್ದಾನೆ‌. ಇದು ಅಧಿಕೃತ.. ಆದ್ರೆ ಹೊರಗೆ ಬರದೇ ಮನೆಯಲ್ಲೆ ತಲೆದಿಂಬಿಗೆ ತಲೆ ಕೊಟ್ಟು ಕಣ್ಣೀರು ಹಾಕ್ತಿರೋರು ಅದೇಷ್ಟು ಜನವೋ ಗೊತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸ್ಥಳಗಳಿಗೆ ವಿಶೇಷ ಕೋಟಾದಡಿ ನೇರ ನೇಮಕಾತಿ ಮೂಲಕ ನೌಕರಿ ಕೊಡಿಸುವುದಾಗಿ ಸುಳ್ಳು ಹೇಳಿ ಒಬ್ಬೊಬ್ಬರಿಂದ ತಲಾ 2 ಲಕ್ಷ ಅಡ್ವಾನ್ಸ್ ಅಂತಾ ಹಣ ಲಪಟಾಯಿಸಿದ್ದಾನೆ. ವಿಶೇಷ ಅಂದ್ರೆ ಇದೇಲ್ಲ ಹಣ ಪಡೆದಿದ್ದು ಬ್ಯಾಂಕ್ ಅಕೌಂಟ್ ಮೂಲಕವೇ. ಮೇಲಾಗಿ ಬಾಂಡ್ ಪೇಪರ್ ನಲ್ಲಿ ಬರೆದುಕೊಟ್ಟಿದ್ದಾನೆ.

ನಕಲಿ ಸಾರ್ ನಕಲಿ..!
ಅಲ್ಲದೆ, ಈ ಸಂತೋಷ ಗದಗಿ ಅನ್ನೋ ಮಾಜಿ ಪೊಲೀಸಪ್ಪ, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಕೊಟ್ಟಿಯಾಗಿ ತಯಾರಿಸಿ ಕೊಟ್ಟಿದ್ದಾನೆ ಅಂತಾ ಆರೋಪಿಸಿ ಅಭ್ಯರ್ಥಿಗಳು ಬಾಯಿ ಬಾಯಿ ಬಡಕೊತಿದಾರೆ. ಹೀಗಾಗಿ, ಇತ್ತ ಹಣವೂ ಹೋಯ್ತು, ಸಮಯವೂ ಹೋಯ್ತು ಅಂತಾ ಹಣಕಳೆದುಕೊಂಡವರು ಗೋಳಾಡುತ್ತಿದ್ದಾರೆ.

ಇದು ಇವನ ಅಸಲೀ ಕತೆ..?
ಅಂದಹಾಗೆ, ಇವನದ್ದು ಇದೇನು ಹೊಸ ಕೇಸ್ ಅಲ್ಲ. ಅದು 2016 ರ ಆಸುಪಾಸು, ಹಾವೇರಿ ಜಿಲ್ಲೆಯ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸಕ್ಕೆ ಜಾಯಿನ್ ಆಗಿರ್ತಾನೆ. ಅಲ್ಲಿ ಅವತ್ತು ಈತನ ಮೆಲೆ ಸಾಕಷ್ಟು ಆರೋಪಗಳು ಇದ್ವು ಅಂತಾ ಅಲ್ಲಿನ ಜನ ಇವತ್ತಿಗೂ ಮಾತಾಡಿಕೊಳ್ತಿದಾರೆ. ಮಟ್ಕಾ ಆಡಿಸೋದು, ಇಸ್ಪೀಟು ಅಡ್ಡೆಗಳಿಗೆ ಬೆಂಗಾವಲಾಗಿ ನಿಂತು ಹಣ ಮಾಡಿಕೊಳ್ತಿದ್ದ ಅಂತಾ ಆತನ ಹತ್ತಿರದವರೇ ಹೇಳಿಕೊಳ್ತಾರೆ. ಆದ್ರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಆನಂತರದಲ್ಲಿ ಈತ ಹಾವೇರಿಯ ಪೊಲೀಸ್ ಠಾಣೆಗೆ ವರ್ಗವಾಗಿ ಬಂದಿರ್ತಾನೆ. ಅಲ್ಲಿಯೂ ಅದ್ಯಾವುದೋ ಓರ್ವ ಮಹಿಳೆಗೆ ಲಕ್ಷಾಂತರ ಹಣ ಪಂಗನಾಮ ಹಾಕಿದ್ದ ಅನ್ನೋ ಆರೋಪದಲ್ಲಿ ಈತನ ಮೇಲೆ ಇಲಾಖೆ ಹದ್ದಿನ ಕಣ್ಣಿಡತ್ತೆ. ಅವತ್ತು ಹಾವೇರಿಗೆ ಎಸ್ಪಿಯಾಗಿದ್ದವರು ಶಶಿಕುಮಾರ್. ಅಂದಹಾಗೆ, ಆ ಮಹಿಳೆಯ ಕೇಸ್ ನಿಂದ ಹಾಗೋ ಹೀಗೋ ರಾಜಿ ಮಾಡಿಕೊಂಡು ಬಚಾವ್ ಅಗಿದ್ದ ಈ ಅಸಾಮಿ, ಹೇಗಾದ್ರೂ ಸರಿ ಇಲ್ಲಿಂದ ಟ್ರಾನ್ಸಪರ್ ಆಗಬೇಕು ಅಂತಾ ತೀರ್ಮಾನಿಸಿದ್ದ. ಹೀಗಾಗಿ, ಯಾರ್ಯಾರದ್ದೋ ರೆಕಮೆಂಡ್ ತಂದು ಅಲ್ಕಿಂದ ನೇರವಾಗಿ ಬೆಂಗಳೂರಿಗೆ ವರ್ಗವಾಗ್ತಾನೆ.

ಬೆಂಗಳೂರಲ್ಲೂ ಮಹಾನ್ ವಂಚನೆ..!
ಅಂದಹಾಗೆ, ಹಾಗೇ ಹಾವೇರಿಯಿಂದ ಬೆಂಗಳೂರಿಗೆ ಹಾರಿದ್ದ ಪೊಲೀಸಪ್ಪ ತನ್ನ ಹಳೆ ಚಾಳಿ ಬಿಡಲೇ ಇಲ್ಲ‌. ಬದಲಾಗಿ ಅಲ್ಲಿಯೂ ದಗಲ್ಬಾಜಿ ಮಾಡಿಕೊಂಡು, ನೇಮಕಾತಿಗಳ ಲೆಕ್ಕದಲ್ಲೇ ಹಣ ವಸೂಲಿ ಮಾಡಿಕೊಂಡಿದ್ದನಂತೆ, ಆ ಕೇಸಲ್ಲಿ ಜೈಲಿಗೂ ಹೋಗಿ ಬಂದಿದ್ದನಂತೆ. ಹೀಗಾಗಿ ಆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಆತನ ಮೈಮೇಲಿದ್ದ ಯೂನಿಫಾರ್ಮ ಶಾಶ್ವತವಾಗೇ ಕಳಚಿ ಇಡಿಸಿ, ಮನೆಗೆ ಕಳಿಸಿತ್ತು. ಇದಿಷ್ಟು ಆರೋಪಿ ಸಂತೋಷನ ಹಳೆಯ ಹಕೀಕತ್ತು.

ಅಷ್ಟಕ್ಕೂ ವಂಚನೆ ಹೇಗಾಯ್ತು..?
ಅಸಲು, ಸಂತೋಷ ಗುದಗಿ ಅನ್ನೋ ವಂಚನೆಯ ಆರೋಪಿ, ಯಾವಾಗ ಬೆಂಗಳೂರಿನಿಂದ ಕೆಲಸ ಕಳಕೊಂಡು ಮನೆಗೆ ಸೇರಿಕೊಂಡ್ನೊ ಅವತ್ತಿಂದಲೇ ಇನ್ನಿಲ್ಲದ ವಂಚನೆಯ ಜಾಲ ಬೀಸೋಕೆ ರೆಡಿಯಾಗಿದ್ದ. ಅಂದಹಾಗೆ, ಲಕ್ಷ ಲಕ್ಷ ಹಣವನ್ನು ಈತ ಹೀಗೇಲ್ಲ ವಂಚಿಸಿ ಆ ದುಡ್ಡಲ್ಲೇ ಇಸ್ಪೀಟು, ಮೋಜು ಮಸ್ತಿ ಮಾಡ್ತಿದ್ದ ಅನ್ನೋ ಮಾತುಗಳಿವೆ. ಯಾವಾಗ, ಜೇಬಲ್ಲಿ ಹಣ ಖಾಲಿಯಾಯ್ತೋ ಅವತ್ತೇ ಈತನ ತಲೆಯಲ್ಲಿ ಹೊಸದೊಂದು ವಂಚನೆಯ ಐಡಿಯಾ ಹುಟ್ಟಿಕೊಂಡಿರತ್ತೆ.

ಆಕೆ ಮಾಯಾಂಗನೆ..!
ಇನ್ನು, ಈ ಮಾಜಿ ಪೊಲೀಸಪ್ಪ ಹುಬ್ಬಳ್ಳಿಯಲ್ಲಿರೋ ಆ ಮಾಯಾಂಗನೆಯೊಬ್ಬಳ ಸ್ನೇಹ ಮಾಡಿದ್ದ. ಅವತ್ತು, ಈತ ಜೇಬಲ್ಲಿರೋ ದುಡ್ಡೇಲ್ಲ ಖಾಲಿಯಾಗಿದ್ದಾಗ, ಏನಾದ್ರೂ ಒಂದು ಹೊಸ ಯೋಚನೆ ಮಾಡಿ ಹಣ ಮಾಡಬೇಕು ಯಾರನ್ನಾದ್ರೂ ಪರಿಚಯಿಸಿಕೊಡು ಅಂತಾ ಆ ಮಾಯಾಂಗನೆ ಎದುರು ಹೇಳಿಕೊಳ್ತಾನೆ. ಅವಾಗ್ಲೆ ನೋಡಿ ಮುಂಡಗೋಡಿನವರೆಗೂ ವಂಚನೆಯ ಜಾಲ ಬೀಸಿ ಬರತ್ತೆ. ಆಕೆಯ ಸಂಬಂಧಿ ದರ್ಶನ್ ಅನ್ನೋನ ಮೂಲಕ ಮುಂಡಗೋಡಿನ ಗುರುರಾಯ ರಾಯ್ಕರ್ ಗೆ ಒಂದು ಕಾಲ್ ಬರತ್ತೆ. ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿಗಳಿವೆ ಯಾರಾದ್ರೂ ಇದ್ರೆ ಹೇಳು ಇಲ್ಲೊಬ್ಬರು ಒಳ್ಳೆ ಪ್ರಭಾವಿ ಇದ್ದಾರೆ. ಕೆಲಸ ಮಾಡಿಕೊಡ್ತಾರೆ ಅಂತಾ ಗುರುರಾಯ್ ಗೆ ಹೇಳಿಸಲಾಗತ್ತೆ. ಪಾಪ, ಗುರುರಾಯರು ಅದನ್ನ ನಂಬ್ತಾರೆ.

ಮಹಾನ್ ಸುಳ್ಳು..!
ನಿಮಗೆ ಗೊತ್ತಿರಲಿ, ಈ ಅಸಾಮಿ ಅದೇಷ್ಟು ಚಾಣಾಕ್ಷ ಅಂದ್ರೆ ಈತನ ಜೊತೆ ಮಾತಾನಾಡಿದ್ರೆ ಎಂತವರೂ ಮರಳಾಗ್ತಾರೆ. ಅಂತಹ ಮೋಡಿ ಈತನ ಮಾತಿನಲ್ಲಿರತ್ತೆ‌. ಅದಿರಲಿ, ಹಾಗೆ ಹುಬ್ಬಳ್ಳಿಯ ದರ್ಶನ ಮೂಲಕ ಪರಿಚಯವಾದ ಸಂತೋಷಣ್ಣ ಗುರುರಾಯರಿಗೆ ಸರಿಯಾಗೇ ತೀಡುತ್ತಾನೆ. ನಾಮ ಹಾಕಲು ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ತಾನೆ. ನನ್ನ ಕೆಲಸ ಎಲ್ಲವೂ ಕನ್ನಡಿಯಂತೆ ಇರತ್ತೆ‌. ಎಲ್ಲವೂ ಬ್ಯಾಂಕ್ ಅಕೌಂಟ್ ಮೂಲಕವೇ ವ್ಯವಹಾರ, ನಂಗೆ ಎಲ್ಲಾ ಎಸ್ಪಿಗಳೂ ಗೊತ್ತು. ಅವ್ರ ಜೊತೆ ನಾನು ಮಾತಾಡ್ತಿನಿ. ನೀವು ಹಣ ಸಂದಾಯ ಮಾಡಿದ 45 ದಿನಗಳಲ್ಲೇ ನಿಮ್ಮ ಕೆಲಸ ಆಗತ್ತೆ, ಅದಕ್ಕಿಂತ ಹೆಚ್ಚು ದಿನ ಆದ್ರೆ ನಾನು ಚೆಕ್ ಕೊಡ್ತಿನಿ, ಅಲ್ಲದೇ ಬಾಂಡ್ ನಲ್ಲಿ ಬರೆದು ಕೊಡ್ತಿನಿ ಅಂತಾ ಹಣ ಪೀಕಲು ಏನೇಲ್ಲ ನಂಬಿಸಬೇಕೊ ಹಾಗೆ ನಂಬಿಸಿದ್ದಾನೆ. ಅಲ್ದೇ ಅದ್ಯಾವುದೋ OTP ನಂಬರ್ ತೋರಿಸಿ ನಿಮ್ಮ ಕೆಲಸ ಆಯ್ತು ನೋಡಿ ಅಂತಾ ಗುಂಗು ಹಚ್ಚಿದ್ದಾನೆ. ಹಾಗೇ ಆತನ ಮರಳು ಮಾತಿಗೆ ಅಕ್ಷರಶಃ ತಲೆ ಆಡಿಸಿ ನಂಬಿದ ಗುರುರಾಯರು, ಯುವಕರಿಗೆ ಕೆಲಸ ಸಿಗತ್ತೆ ಅಂತಾ ಯಾಮಾರಿ ಬಿಟ್ಟಿದ್ದಾರೆ. ಮುಗೀತು ಅಷ್ಟೆ.

ಜಾಲಕ್ಕೆ ಬಿದ್ದವರು 12 ಜನ..!
ಹೀಗೆ, ಸಂತೋಷನ ಸುಳ್ಳುಗಳ ಸರಮಾಲೆಯನ್ನು ನಂಬಿ, ಗುರುರಾಯರು ತನ್ನ ಜೊತೆಗೆ ಸಂಪರ್ಕದಲ್ಲಿದ್ದ, ಪೊಲೀಸನಾಗೋ ಕನಸಿಗೆ ಬೆನ್ನತ್ತಿದ್ದ ಬರೋಬ್ಬರಿ 12 ಯುವಕರಿಂದ ಅಡ್ವಾನ್ಸ್ ಆಗಿ ತಲಾ 2 ಲಕ್ಷ ಹಣ ಅಕೌಂಟ್ ಮೂಲಕ ಹಾಕಿಬಿಟ್ಟಿದ್ದಾರೆ.

ಇದು ನಕಲಿ ಆದೇಶ ಪ್ರತಿ..!
ದಿನಾಂಕ 01.08.2021 ರಿಂದ 21.08.2021 ರ ಒಳಗಾಗಿ ಬೆಳಗಾವಿ ಎಸ್ಪಿ ಎದುರು ಹಾಜರಾಗಿ ತಮ್ಮ ಪೊಲೀಸ್ ಅಯ್ಕೆ ನೇಮಕಾತಿಯನ್ನು ದೃಢಪಡಿಸಿಕೊಳ್ಳಿ ಅಂತಾ ಒಂದು ಫೇಕ್ ನೇಮಕಾತಿ ಆದೇಶ ಪತ್ರ ರೆಡಿ ಮಾಡಿ ನೀಡ್ತಾನೆ. ಆದ್ರೆ, ಹೀಗಿರೋ ಆದೇಶ ಪ್ರತಿಯನ್ನ 8 ನೇ ತಾರೀಖಿಗೆ ಆ ಯುವಕರಿಗೆ ಆತನೇ ಪೊಸ್ಟ ಮಾಡ್ತಾನೆ‌. ಅವಾಗ್ಲೆ ಆ ಯುವಕರಿಗೆ ಸಣ್ಣದೊಂದು ಅನುಮಾನ ಶುರುವಾಗತ್ತೆ. ಹಾಗೇ ಬಂದಿರೋ ಆದೇಶ ಪ್ರತಿಗಳನ್ನ ಕೆಲವು ಅನುಭವಿಗಳ ಹತ್ರ ತೋರಿಸಿದಾಗ ಅದು ಫೇಕು ಅಂತಾ ದೃಢಪಟ್ಟಿದೆ. ಹೀಗಾಗಿ, ಆ ಯುವಕರೇಲ್ಲ ಗುರುರಾಯ ರಾಯ್ಕರ್ ಗೆ ಇದೇಲ್ಲ ಫೇಕು, ನಮಗೆ ಕೆಲಸ ಬೇಡ ನಮ್ಮ ಹಣ ನಮಗೆ ವಾಪಸ್ ಕೊಡಿಸಿ ಬಿಡಿ ಅಂತಾ ಬೆನ್ನು ಬೀಳ್ತಾರೆ. ಅವಾಗ್ಲೆ, ನೋಡಿ ಗುರುರಾಯ ರಾಯ್ಕರ್ ಸೀದಾ ಬಂದು ನಿಂತಿದ್ದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಸಿಡೆನೂರು ರಸ್ತೆಯಲ್ಲಿರೋ ಮೇಲಗಿರಿ ಪ್ಲಾಟ್ ಗೆ..

ಅವತ್ತೇ ಸಿಕ್ಕಿಬಿದ್ದ..!
ಅವತ್ತು, ಅಗಷ್ಟ 20, 2021 ರ ಶುಕ್ರವಾರ, ವಂಚಕ ಆರೋಪಿ ಸಂತೋಷನನ್ನು ಹುಡುಕಿಕೊಂಡು ಬ್ಯಾಡಗಿಯ ಸಿಡೇನೂರು ರಸ್ತೆಯಲ್ಲಿರೋ ಮೇಲಗಿರಿ ಪ್ಲಾಟ್ ಗೆ ಬಂದು ನಿಂತಾಗ, ಏಕಾಏಕಿ ತಗಲಾಕಿಕೊಂಡಿದ್ದ ಆತ. ಹಾಗೇ, ನೇರವಾಗಿ ಆತನನ್ನು ಬ್ಯಾಡಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದ ಗುರುರಾಯ್ ರಾಯ್ಕರ್ ಹಾಗೂ ಯುವಕರ ತಂಡ ಬ್ಯಾಡಗಿ ಠಾಣೆಯ ಪಿಎಸ್ಐ ಹತ್ತಿರ ತಂದು ನಿಲ್ಲಿಸಿದ್ದರು. ಪಿಎಸ್ಐ ಸಾಹೇಬ್ರು ಅವತ್ತು ವಿಚಾರಣೆಗೆ ಕುಳಿತಾಗ, ವಂಚನೆಗೊಳಪಟ್ಟ ಯುವಕರು ಹಾಗೂ ಗುರುರಾಯರು ಆಗಿರೋ ಸಂಪೂರ್ಣ ಕಹಾನಿ ಬಿಚ್ಚಿಟ್ಟಿದ್ದಾರೆ.

ಬಚಾವಾದ ಅಸಾಮಿ..!
ಹಾಗೇ, ಅವತ್ತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಗುರುರಾಯ್ ರಾಯ್ಕರ್ ಹಾಗೂ ಮತ್ತವರ ಟೀಂ ಮಾಡಿದ ಎಲ್ಲಾ ಆರೋಪಗಳಿಗೂ ಹು ಅಂತಾ ತಲೆ ಆಡಿಸಿದ್ದ ಆರೋಪಿ, ಬೀಸೋ ದೊಣ್ಣೆಯಿಂದ ನಾಜೂಕಾಗಿ ತಪ್ಪಿಸಿಕೊಂಡಿದ್ದ. ಎರಡು ದಿನ ಬಿಟ್ಟು ಸೋಮವಾರ ಅಂದ್ರೆ, ದಿನಾಂಕ 23.08.21 ರಂದು ಎಲ್ಲಾ ಹಣ ವಾಪಸ್ ಕೊಡ್ತಿನಿ ಅಂತಾ ಮಾತು ಕೊಟ್ಟ. ವಂಚಕನ ಆ ಮಾತಿಗೆ ಗುರುರಾಯ ರಾಯ್ಕರ್ ಹಾಗೂ ಯುವಕರು ಒಪ್ಪಿಕೊಂಡಿದ್ದರು. ನಿಜ ಅಂದ್ರೆ ಅವತ್ತು ಬ್ಯಾಡಗಿ ಪಿಎಸ್ಐ ದೂರು ಕೊಟ್ಟು ಬಿಡಿ ಅಂತಾ ಎಷ್ಟೇ ಕೇಳಿಕೊಂಡ್ರೂ ಗುರುರಾಯರು ಒಪ್ಪಲಿಲ್ಲ. ದೂರು ಹಣ ವಾಪಸ್ ಬರಲ್ಲ ಅನ್ನೋ ಭಯದಲ್ಲಿ ದೂರು ಕೊಡಲೇ ಇಲ್ಲ. ಮತ್ತೂ ಅದೇ ಸಂತೋಷನ ಮೇಲೆ ನಂಬಿಕೆ ಇಟ್ಟು ವಾಪಸ್ ಬಂದು ಬಿಟ್ರು.

ಸೋಮವಾರ ನಾಪತ್ತೆ..!
ಹಾಗೆ ಸೋಮವಾರ ನಿಮ್ಮ ಹಣವನ್ನೇಲ್ಲ ಸೆಟಲ್ ಮಾಡ್ತಿನಿ ಅಂತಾ ಬ್ಯಾಡಗಿ ಪೊಲೀಸರ ಎದುರೇ ಒಪ್ಪಿಕೊಂಡು ಹೋಗಿದ್ದ ಆರೋಪಿ ಸಂತೋಷ, ಸೋಮವಾರದ ವರೆಗೂ ಅಲ್ಲೇ ಓಡಾಡಿಕೊಂಡಿದ್ದ. ಆದ್ರೆ ಯಾವಾಗ ಸೋಮವಾರದ ಬೆಳಗಿನ ಸೂರ್ಯ ಉದಯವಾದ್ನೋ ಆ ಕ್ಷಣದಿಂದಲೇ ಸಂತೋಷನ ಪತ್ತೆಯೇ ಇಲ್ಲ. ಅಲ್ಲದೇ ಆತನ ಪೋನ್ ಕೂಡ ಸ್ವಿಚ್ಡ್ ಆಫ್ ಆಗಿಬಿಟ್ಟಿತ್ತು. ಅವಾಗ್ಲೇ ನೋಡಿ ಗುರುರಾಯ ರಾಯ್ಕರ್ ಹಾಗೂ ಯುವಕರ ಟೀಂ ಕಂಗಾಲಾಗಿದ್ದು.
ಆ ಹೊತ್ತಿನಲ್ಲೂ ಕೂಡ ಮತ್ತದೇ ಬ್ಯಾಡಗಿ ಪಿಎಸ್ಐ ಅದೇಷ್ಟೇ ಕೇಳಿಕೊಂಡ್ರೂ ದೂರು ಮಾತ್ರ ನೀಡಲೇ ಇಲ್ಲ. ಯಾಕಂದ್ರೆ, ದೂರು ಕೊಟ್ರೆ, ಸುಮ್ನೆ ಕೇಸು ಅದು ಇದು ಅಂತಾ, ಅಭ್ಯರ್ಥಿಗಳ ಭವಿಷ್ಯ ಹಾಳಾಗತ್ತೆ, ಹಾಗೂ ಸಾಲ ಸೋಲ ಮಾಡಿ ಕೊಟ್ಟಿರೋ ಹಣ ವಾಪಸ್ ಬರತ್ತೋ ಇಲ್ವೋ ಅನ್ನೋ ಭಯ ಆ ಯುವಕರಿಗೆ ಕಾಡಿತ್ತು. ಆದ್ರೆ ಯಾವಾಗ, ಸಂತೋಷನ ಅಸಲಿ ವಂಚಕ ಕಹಾನಿಗಳು ಅವ್ರಿಗೇಲ್ಲ ಗೊತ್ತಾಯ್ತೋ ಅವ್ರು ನೇರವಾಗಿ ಬಂದಿದ್ದು ಮುಂಡಗೋಡ ಪೊಲಿಸ್ ಠಾಣೆಗೆ.

ನಮ್ಮ ಪೊಲೀಸರೆಂದ್ರೆ ಸುಮ್ನೇನಾ..?
ಅಸಲು, ಈ ಪ್ರಕರಣ ಮೊದಲು ನೇರವಾಗಿ ಉತ್ತರ ಕನ್ನಡ ಎಸ್ಪಿ ಪ್ರಕಾಶ ದೇವರಾಜು ಗಮನಕ್ಕೆ ತರಲಾಗಿರತ್ತೆ. ಆಮೇಲೆ ಮುಂಡಗೋಡ ಠಾಣೆಯ ಮೆಟ್ಟಿಲೇರತ್ತೆ. ಯಾವಾಗ, ವಂಚನೆಗೊಳಗಾದ ಯುವಕರು ಹಾಗೂ ಗುರುರಾಯ ರಾಯ್ಕರ್ ಮುಂಡಗೋಡ ಪೊಲೀಸರ ಟೇಬಲ್ಲಿನ ಮೇಲೆ ನಮಗೆ ಹೀಗೆ ಅನ್ಯಾಯ ಆಗಿದೆ ಸಾರ್ ಅಂತಾ ದೂರು ಬರೆದಿಟ್ಟರೋ, ಆ ಕ್ಷಣದಿಂದಲೇ ಪಿಐ ಪ್ರಭುಗೌಡ ಮತ್ತವರ ಟೀಂ ವಂಚಕನ ಜಾಡು ಹಿಡಿದು ಹೊರಟು ನಿಲ್ತಾರೆ.

ಹೇಳಿಕೊಳ್ಳೊಕೆ ಆಗದ ವಿಷಯ..!
ಇನ್ನು, ಹಾಗೆ ಅವರಿಗಾದ ವಂಚನೆ ಬಗ್ಗೆ ಮಾಹಿತಿ ಪಡೆದ ಮುಂಡಗೋಡ ಪೊಲೀಸರು, ವಂಚಕನ ಜಾಡು ಹಿಡಿದು ಬ್ಯಾಡಗಿಗೆ ಬಂದು ನಿಲ್ತಾರೆ. ಅಲ್ಲಿ ಆತನ ಮನೆಗೆ ಬಂದಾಗ, ಆತನ ಪತ್ನಿ ಯಾವ ಗುಟ್ಟೂ ಬಿಟ್ಟು ಕೊಡಲ್ಲ. ಆದ್ರೆ, ಆಕೆಯ ಮಾವ ಅಂದ್ರೆ ವಂಚಕ ಸಂತೋಷನ ತಂದೆಗೆ ಅದೇನೋ ಕಿಡ್ನಿ ಸ್ಟೋನ್ ಸಮಸ್ಯೆಯಾಗಿ ಬೆಳಗಾವಿಯ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಗಿದೆ ಅನ್ನೋ ಸಣ್ಣದೊಂದು ಸುಳಿವು ಸಿಗತ್ತೆ.. ಅಷ್ಟೇ.. ಮುಂಡಗೋಡ ಪೊಲೀಸರು ನೇರವಾಗಿ ಬೆಳಗಾವಿಗೆ ಬಂದು ನಿಲ್ತಾರೆ. ಆದ್ರೆ ಅಲ್ಲಿ ಆತ ಇರೋ ಆಸ್ಪತ್ರೆ ಯಾವುದು ಅಂತಾ ಗೊತ್ತಿಲ್ಲ. ಹೀಗಾಗಿ, ಅದ್ಹೇಗೋ ಗೊತ್ತಿಲ್ಲ. ಬೆಳಗಾವಿಯ KLE ಆಸ್ಪತ್ರೆಯ ಅಂಗಳದಲ್ಲಿ ಆರೋಪಿಗಾಗಿ ತಡಕಾಡುತ್ತಾರೆ.

ಪ್ರಿಯ ಓದುಗರೆ,
ಅಸಲು, ಬೆಳಗಾವಿಯ KLE ಆಸ್ಪತ್ರೆಯ ಹತ್ತಿರದ ಗೆಸ್ಟ್ ಹೌಸ್ ನಲ್ಲಿ ಆಗಿದ್ದೇನು..? ಅದನ್ನೆಲ್ಲ ಇವತ್ತು ಹೇಳೋಕೆ ಸಾಧ್ಯವಿಲ್ಲ. ಯಾಕಂದ್ರೆ ಅದು ಪೊಲೀಸರ ತನಿಖೆಗೆ ಒಂದಿಷ್ಟು ತೊಡರಾಗಬಹುದು.. ಹೀಗಾಗಿ, ಆ ಸ್ಟೋರಿಯನ್ನ ನಾಳೆ ಖಂಡಿತ ನಿಮ್ಮೆದುರು ಇಡುತ್ತೇನೆ. ಯಾಕಂದ್ರೆ, ವಂಚಕ ನಾಳೆ ಸಿಕ್ಕೇ ಸಿಗ್ತಾನೆ.. ನೋಡ್ತಿರಿ..!

error: Content is protected !!