ಯಲ್ಲಾಪುರ: ಮಳೆಯಿಂದಾಗಿ ಹಾನಿಗೊಳಗಾಗಿ ಭೂಕುಸಿತವಾಗಿದ್ದ ಯಲ್ಲಾಪುರ ತಾಲೂಕಿನ ಕಳಚೆ, ಗುಳ್ಳಾಪುರ ಭಾಗಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಸಚಿವರು ಭೇಟಿ ನೀಡಿದಾಗ ಗ್ರಾಮಸ್ಥರು ಗ್ರಾಮವನ್ನೇ ಸ್ಥಳಾಂತರ ಮಾಡುವಂತೆ ಮನವಿ ನೀಡಿದರು. ಗುಳ್ಳಾಪುರದಲ್ಲಿ ಪ್ರವಾಹದಿಂದಾಗಿ ಕೊಚ್ಚಿಹೋಗಿರುವ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಈ ಪ್ರದೇಶದಲ್ಲಿ ಹಾನಿಯಾಗಿರುವ ಬಗ್ಗೆ ಸಿ ಎಂ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಕಳೆದ 60-65 ವರ್ಷದ ನಂತರ ಈ ರೀತಿಯ ಭಾರೀ ಮಳೆ ಸುರಿದಿದೆ. ನಾನು ಕೂಡ ಭೂಕುಸಿತ ಹಾಗೂ ರಸ್ತೆ ಕುಸಿತ ನೋಡಿ ಮೂಕ ವಿಸ್ಮಿತನಾಗೋ ಸಂದರ್ಭ. ಅಪಾರವಾದ ಹಾನಿಯಾಗಿದೆ. ಈಗಾಗ್ಲೇ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಹಾರವನ್ನ ಕೂಡ ಬಿಡುಗಡೆ ಮಾಡಿದ್ದಾರೆ. 200 ಕೋಟಿ ರೂಪಾಯಿಗಳ ಪರಿಹಾರ ನೀಡಿರೋದು ಸಂತಸವಿದೆ. ಪ್ರಾರಂಭಿಕ ಹಂತದ ಕಾಮಗಾರಿಗಳು ಉಸ್ತುವಾರಿ ಸಚಿವರ ಶ್ರಮದಿಂದ ಪ್ರಾರಂಭವಾಗಿದೆ. ಇಲ್ಲಿಯ ಚಿತ್ರಣವನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿ ಪುನರ್ವಸತಿಗೆ ಪ್ರಯತ್ನ ಮಾಡುತ್ತೇನೆ. ಲೋಕೋಪಯೋಗಿ ಇಲಾಖೆಯ ಎಲ್ಲಾ ಅಧಿಕಾರಿಗಳನ್ನ ಕರೆದುಕೊಂಡು ಬಂದಿದ್ದೇನೆ. ಬೆಂಗಳೂರಿನಲ್ಲಿ ಕುಳಿತು ಪ್ರವಾಹದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರೆ ಜಿಲ್ಲೆಗೆ ಅನ್ಯಾಯವಾಗುತ್ತಿತ್ತು ಅಂತ ಮನವರಿಕೆಯಾಗಿದೆ. ಸ್ವತಃ ಭೇಟಿ ನೀಡಿದ್ದರಿಂದ ಹಾನಿಯ ಪ್ರಮಾಣ ಗೊತ್ತಾಗಿದೆ ಅಂದ್ರು..

error: Content is protected !!