ಮುಂಡಗೋಡ : ತಾಲೂಕಿನ ಆಲಳ್ಳಿ ಗ್ರಾಮದ ಕಾಡಿನಲ್ಲಿ ಅಣಬೆ ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ.
ಇಂದು ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಖಂಡೋಜಿ ಹಾಗೂ ಸಂಗಡಿಗರು ಸೇರಿ ಆಲಳ್ಳಿ ಅರಣ್ಯದಲ್ಲಿ ಅಣಬೆ ಕೀಳಲು ಹೋದಾಗ ಧರ್ಮಣ್ಣನ ಮೇಲೆ ಕರಡಿ ದಾಳಿ ಮಾಡಿದೆ ಅಂತಾ ತಿಳಿದು ಬಂದಿದೆ.
ಅರಣ್ಯದಂಚಿನಲ್ಲಿರುವ ಗೋವಿನಜೋಳ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಕರಡಿ ದಾಳಿ ಮಾಡಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ಜೋರಾಗಿ ಕೂಗಿದ್ದರಿಂದ ಕರಡಿ ಕಾಡಿನಲ್ಲಿ ಓಡಿ ಹೋಗಿದೆ ಅಂತಾ ತಿಳಿದು ಬಂದಿದೆ.

error: Content is protected !!