ಶಿಗ್ಗಾವಿ : ಪಟ್ಟಣದ ಐತಿಹಾಸಿಕ ನಾಗನೂರ ಕೆರೆಯ ಸುತ್ತಮುತ್ತಲೂ ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮತ್ತು ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ಕೈಗೊಂಡರು.
ನಾಗನೂರ ಕೆರೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಮಾತನಾಡಿದ ಪುರಸಭೆ ಅದ್ಯಕ್ಷ ಮತ್ತು ಉಪಾಧ್ಯಕ್ಷರು, ಕೆರೆಯ ದಂಡೆಯಲ್ಲಿ ಗಣೇಶನ ದೇವಸ್ಥಾನವಿದೆ ಈ ಪ್ರದೇಶವು ಪುರಸಭೆಯವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಸಾರ್ವಜನಿಕರ ಜವಾಬ್ದಾರಿ ಸಹ ಅದನ್ನು ಮನಗಂಡು ತಾವು ಕೂಡ ಯಾರೇ ಕಲುಷಿತ ಮಾಡಿದರೂ ಸಹಿತ ನೋಡಿ ಸುಮ್ಮನೇ ಇರಬಾರದು ಅಂತ ವಿಷಯ ಇದ್ದರೆ ಪುರಸಭೆಯ ಸಹಾಯವಾಣಿಗೆ ತಿಳಿಸಿ ಮತ್ತು ಇಲ್ಲಿ ಹುಟ್ಟು ಹಬ್ಬ ಆಚರಿಸುವುದಾಗಲಿ, ಮದ್ಯಪಾನ ಮಾಡುವದಾಗಲಿ ಕಂಡು ಬಂದರೆ ಅವರು ಶಿಕ್ಷೆಗೆ ಗುರಿ ಮಾಡಲಾಗುವುದು ಎಂದರು.
ಜೊತೆಗೆ ಪಟ್ಟಣದ ರಾಚನಕಟ್ಟೆ ಕೆರೆಗೆ ತಡೆಗೋಡೆ ಕಟ್ಟಿಸುವುದು ಅವಶ್ಯವಿದ್ದು ಪಟ್ಟಣದ ಜನರು ಕುಡಿಯಲು ಬಳಸುವ ಗಂಗಾಮಾತೆ ಇದಾಗಿದೆ ಎಂದರು.
ಬೆಳಗ್ಗೆ 6 ಗಂಟೆಗೆ ಆಗಮಿಸಿ ಕೆರೆಯ ದಡದಲ್ಲಿ ಹಾಕಲಾಗಿರುವ ತ್ಯಾಜ್ಯ, ಬಿಯರ್ ಬಾಟಲ್ ಪ್ಲಾಸ್ಟಿಕ್ ಪೂಜಾ ಸಾಮಗ್ರಿಗಳು ಪೂಜೆ ಮಾಡಿದ ತೆಂಗಿನಕಾಯಿ,ವಾಟರ ಬಾಟಲ್ ಚಿಪ್ಸ್ ಪ್ಯಾಕೇಟ್ ಮತ್ತು ಬಟ್ಟೆ ಗಿಡ ಕಂಟೆಗಳನ್ನು ಸೇರಿದಂತೆ ಕೆರೆಯ ಆವರಣದ ಸುತ್ತಲೂ ಬೆಳೆದ ಸಸಿಗಳನ್ನು ತೆಗೆದು ಸಾಗಿಸಿದರು. ಕೆರೆಯ ಸುತ್ತಲೂ ಇರುವ ವಾಕೀಂಗ್ ಪಾಥ್ ಸುತ್ತಲೂ ಎಸೆಯಲಾದ ಗುಟಾಕಾ ಪ್ಯಾಕೇಟ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಸಿಲಾಯಿತು ಅದನ್ನು ಕಸ ವಿಲೇವಾರಿ ಗಾಡಿಗೆ ಹಾಕಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಆರೋಗ್ಯಾಧಿಕಾರಿ ಶಿವಕುಮಾರ ಕಮದೋಡ, ವಿ.ಎಸ್. ಪಾಟೀಲ್, ಶೈಲಜಾ ಪಾಟೀಲ್ ಸೇರಿದಂತೆ ಕಾರ್ಮಿಕರು ಉಸಪಸ್ಥಿತರಿದ್ದರು.