ಶಿಗ್ಗಾವಿ : ತಾಲೂಕಿನ ಕಬನೂರ ಪಂಚಾಯತಿಯ ನೂತನ ಅದ್ಯಕ್ಷರು ಮತ್ತು ಪಿಡಿಓ ಸೇರಿದಂತೆ ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ವಿರುದ್ದ ಪಂಚಾಯತಿಯ ಕೆಲ ಸದಸ್ಯರುಗಳು ಸಿಡಿದೆದ್ದಿದ್ದಾರೆ.
ಯಾರವರು..?
ಗ್ರಾಮ ಪಂಚಾಯತಿ ಸದಸ್ಯರಾದ ಕೋಟೆಪ್ಪ ಕಮ್ಮಾರ್, ಅನ್ನಪೂರ್ಣ ಓಲೇಕಾರ, ಹಲೀಮಾ ಕಾಳಂಗಿ ಅವರುಗಳು ತಮ್ಮದೇ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಓರವರ ಮೇಲೆ ಆರೋಪ ಮಾಡ್ತಿದಾರೆ. ಹೌದು, ಶಿಗ್ಗಾವಿ ಪಟ್ಟಣದ ಪತ್ರಕರ್ತರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆ ಗೈದಿದಾರೆ.
ಏನದು ಆರೋಪ..?
15 ನೇ ಹಣಕಾಸಿನ ಯೋಜನೆಯಲ್ಲಿ ಎಸ್,ಟಿ ಸಮುದಾಯದವರಿಗೆ ಅನ್ಯಾಯವಾಗಿದೆಯಂತೆ. ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡ್ತಿದಾರಂತ, ಸದಸ್ಯರ ಕಡೆಗಣನೆ ಮಾಡಿದ್ದಾರೆ ಅಂತಾ ಅರೋಪಿಸಿದ್ದಾರೆ. ಇನ್ನು, ಇನ್ನುಳಿದ ಸದಸ್ಯರ ಮಧ್ಯ ಸಾಮರಸ್ಯದ ಕೊರತೆ ಇದೆ, ಗ್ರಾಪಂ ಅಧ್ಯಕ್ಷರಿಂದ ಜಾತಿ ನಿಂದನೆ ಮಾತುಗಳು ಕೇಳ್ತಿವೆ. ಗ್ರಾಮ ಪಂಚಾಯತಿಯಲ್ಲಿ ಖರ್ಚಿನ ಲೆಕ್ಕ ಕೇಳಿದರೆ ಜಗಳಕ್ಕೆ ಅಧಿಕಾರಿಗಳು ಜಗಳಕ್ಕೇ ಬರ್ತಾರಂತೆ, 6 ಸದಸ್ಯರು ಸೇರಿ ಅಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ, ಇದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲಿ ಭಾರಿ ಹಗರಣವಾಗಿದೆಯಂತೆ.
ಅಧ್ಯಕ್ಷರನ್ನು ಕೇಳಿದರೆ ಗುತ್ತಿಗೆದಾರರ ಕಡೆ ಕೈ ತೋರಿಸುವುದು, ಸಭೆಯಲ್ಲಿ ಚರ್ಚಿಸುವ ವಿಷಯಗಳೇ ಬೇರೆ ಆಗುವ ಕಾಮಗಾರಿಗಳೇ ಬೇರೆ, ಕೇವಲ ಲೆಕ್ಕಕ್ಕೆ ಮಾತ್ರ ಸೀಮಿತವಾದ ಕಾಮಗಾರಿಗಳು, ಸದಸ್ಯರ ಗಮನಕ್ಕೆ ತರದೆ ಬಿಲ್ ಪಾಸು ಮಾಡುವುದು, ಒಂದೇ ಕುಟುಂಬಕ್ಕೆ ಸೀಮಿತವಾದ ಅನುಧಾನ, ಗ್ರಾಪಂ ವ್ಯಾಪ್ತಿ ಮೀರಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ ಅಲ್ಲದೇ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಭೆ ನಡೆದಾಗ ಸಭೆಯ ಮದ್ಯಯೇ ಎದ್ದು ಹೋಗುವುದು ಸೇರಿದಂತೆ ಹಲವು ಆರೋಪಗಳನ್ನು ಕಬನೂರ ಪಂಚಾಯತಿ ಕೆಲ ಸದಸ್ಯರು ಮಾಡಿದ್ದಾರೆ.
ಅವ್ಯವಹಾರ ಆರೋಪ..
ಇದೇ ಪಂಚಾಯತಿಯಲ್ಲಿ ಕೆಲ ತಿಂಗಳುಗಳ ಹಿಂದೆ ಅವ್ಯವಹಾರದ ಆರೋಪ ಕೇಳಿ ಬಂದಿತ್ತು ಈಗ ಮತ್ತೆ ನೂತನ ಸದಸ್ಯರ, ಅದ್ಯಕ್ಷ ಆಯ್ಕೆಯಾಗಿದ್ದು, ಹೊಸ ಕಮೀಟಿಯಲ್ಲಿಯೂ ಸಾಮರಸ್ಯದ ಕೊರತೆ ಮತ್ತು ಅದ್ಯಕ್ಷರ ಅಧಿಕಾರದ ಕಾರ್ಯವೈಖರಿಗೆ ನೂತನ ಕೆಲ ಸದಸ್ಯರೇ ಆರೋಪ ಮಾಡುತ್ತಿರುವುದು ಪಂಚಾಯತಿಯ ಅಭಿವೃದ್ದಿ ದೃಷ್ಟಿಯಿಂದ ಎಷ್ಟು ಸರಿ ? ಎಂದು ಗ್ರಾಮದ ಪ್ರಜ್ಞಾವಂತರು ಕೇಳುವಂತಾಗಿದೆ.
ಒಟ್ಟಾರೆ ಈ ಸಮಸ್ಯೆ ಪದೇ ಪದೇ ಮರುಕಳಿಸದಂತೆ ತಾಲೂಕಾ ಪಂಚಾಯತ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿಯವರು ಖಾಳಜೀ ವಹಿಸಿ ಆಡಳಿತ ಕುರಿತು ಮಾಹಿತಿ ಪಡೆದು ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ.