ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಜನ ಕಂಗಾಲಾಗಿದ್ದಾರೆ. ನಿತ್ಯವೂ ಇಲ್ಲಿನ ಜನ್ರು ಕತ್ತಲೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಮನೆಯಲ್ಲೇ ಕುಳಿತು ಆನ್ ಲೈನ್ ಕ್ಲಾಸ್ ಗಾಗಿ ಕಾಯ್ತಿರೊ ಮಕ್ಕಳ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಕರೇಂಟೇ ಇರಲ್ಲ.
ಕಣ್ಣಾ ಮುಚ್ಚಾಲೆ..!
ನಿಜ, ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದೇನು ಸಮಸ್ಯೆಯೋ ಗೊತ್ತಿಲ್ಲ. ಇಲ್ಲಿ ವಿದ್ಯುತ್ ಬಹುತೇಕ ಇರೋದೇ ಇಲ್ಲ. ಐದು ನಿಮಿಷ ಬಂದ್ರೆ, ಮತ್ತೆ ಒಂದು ಗಂಟೆ ಕರೇಂಟು ಕೈ ಕೊಡುತ್ತದೆ. ಪ್ರತೀ ಕ್ಷಣವೂ ಕಣ್ಣಾಮುಚ್ಚಾಲೆ ಆಟ ಅಡತ್ತೆ ಇಲ್ಲಿನ ಕರೆಂಟು..
ವಿದ್ಯಾರ್ಥಿಗಳ ಪರದಾಟ..
ಗ್ರಾಮದಲ್ಲಿ ಕರೆಂಟು ಕಣ್ಣಾ ಮುಚ್ಚಾಲೆಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಕಿರಿಕಿರಿ ಶುರುವಾಗಿದೆ. ಯಾಕಂದ್ರೆ ಈಗ ಕೊರೋನಾ ಸಂಕಷ್ಟದ ಮದ್ಯೆ ಶಾಲೆಗೆ ಹೋಗಲಾಗದೆ ಮನೆಯಲ್ಲೇ ಕುಳಿತು, ಆನ ಲೈನ್ ಪಾಠ ಕೇಳುತ್ತಿರೋ ಮಕ್ಕಳಿಗೆ ಕರೆಂಟು ಕಣ್ಣಾಮುಚ್ಚಾಲೆ ಇನ್ನಿಲ್ಲದ ಕಿರಿಕಿರಿ ತಂದಿದೆ. ಇನ್ಮೇಲೆ ದೂರದರ್ಶನದ ಮೂಲಕವೂ ಮಕ್ಕಳಿಗೆ ಪಾಠ ಹೇಳಿಕೊಡುವ ವ್ಯವಸ್ಥೆ ಜಾತಿಯಾಗುತ್ತಿದೆ. ಹೀಗಾಗಿ, ವಿದ್ಯುತ್ ಇಲ್ಲದೇ ಟಿವಿ ಶುರು ಮಾಡೋದಾದ್ರೂ ಹೇಗೆ..? ಇದು ವಿದ್ಯಾರ್ಥಿಗಳ ಅಳಲು.
ಮಹಿಳೆಯರದ್ದೂ ಗೋಳು..!
ಇನ್ನು, ವಿದ್ಯುತ್ ಕಣ್ಣಾ ಮುಚ್ಚಾಲೆ ಆಟದಿಂದ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳೆಯರು ಕಿರಿಕಿರಿ ಅನಿಭವಿಸ್ತಿದಾರೆ. ಇಲ್ಲಿನ ಮನೆಗಳಲ್ಲಿ ಈಗ ಮಿಕ್ಸಿ, ಗ್ರೈಂಡರ್ ತಿರುಗುತ್ತಿಲ್ಲ. ಹೀಗಾಗಿ, ಮಹಿಳೆಯರೂ ಹೆಸ್ಕಾಂ ವಿರುದ್ದ ಮನಸಲ್ಲೇ ಶಪಿಸುತ್ತ ಅಡುಗೆ ಮಾಡ್ತಿದಾರೆ.
ರೈತರಿಗೂ ಕರೆಂಟು ಪ್ರಾಬ್ಲೆಂ..
ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೂ ಕರೆಂಟು ಅನ್ನೋದು ಕಂಡಾಗ ಕಾರ ಹುಣ್ಣವಿ, ಬಂದಾಗ ಭಾರಾತ್ ಹುಣ್ಣಿವಿ ಅನ್ನೋ ಹಾಗಾಗಿದೆ. ಗದ್ದೆಯಲ್ಲಿ ಬೆಳೆದಿರೋ ಬೆಳೆಗಳಿಗೆ ಬೋರವೆಲ್ ಮೂಲಕ ನೀರು ಉಣಿಸಲು ವಿದ್ಯುತ್ ಅವಶ್ಯವಾಗಿರತ್ತೆ.. ಆದ್ರೆ ವಿದ್ಯುತ್ ಕೊರತೆಯಿಂದ ರೈತರಿಗೂ ಇನ್ನಿಲ್ಲದ ಕಿರಿಕಿರಿಯಾಗ್ತಿದೆ.
ಏನು ಸಮಸ್ಯೆ..?
ಮಳೆಗಾಲ ಬಂತು ಅಂದ್ರೆ ಈ ಭಾಗಗಳಲ್ಲಿ ಒಂದಿಷ್ಟು ವಿದ್ಯುತ್ ಸಮಸ್ಯೆ ಇದ್ದೇ ಇರತ್ತೆ. ಆದ್ರೆ, ನಂದಿಕಟ್ಟಾ ಭಾಗದಲ್ಲಿ ಈ ಸಮಸ್ಯೆ ಬೇರೆ ಭಾಗಗಳಿಗಿಂತ ತುಸು ಜಾಸ್ತಿ ಇದೆ. ಇಲ್ಲಿನ ಸಿಬ್ಬಂದಿಗಳ ಬೇಜವಾಬ್ದಾರಿಯೊ ಅಥವಾ, ಸಿಬ್ಬಂದಿಗಳ ಕೊರತೆಯೋ ಗೊತ್ತಿಲ್ಲ. ಕಾಡುಗಳ ಮದ್ಯೆ ಹಾದು ಬರುವ ಲೈನ್ ಗಳ ಮೇಲೆ ಮರದ ಟೊಂಗೆಗಳು ತಾಗುತ್ತವೆ. ಹೀಗಾಗಿ, ವಿದ್ಯುತ್ ಸಂಪರ್ಕ ಕಡಿತವಾಗತ್ತೆ. ಇದು ಇದ್ದಿದ್ದೆ. ಅಂದಹಾಗೆ ಈ ಸಮಸ್ಯೆ ಹುನಗುಂದ, ಇಂದೂರು ಸೇರಿದಂತೆ ತಾಲೂಕಿನ ಬಹುತೇಕ ಕಡೆಯೂ ಇದೆ. ಆದ್ರೆ ಅಲ್ಲಿ ಹಾಗೆ ಸಮಸ್ಯೆ ಎದುರಾದ ತಕ್ಷಣವೇ ಅಲ್ಲಿನ ಹೆಸ್ಕಾಂ ಸಿಬ್ಬಂದಿಗಳು ಎಚ್ಚೆತ್ತುಕೊಳ್ತಾರೆ. ತಕ್ಷಣವೆ ಸರಿ ಪಡಿಸ್ತಾರೆ.
ಆದ್ರೆ ನಂದಿಕಟ್ಟಾ ಭಾಗದಲ್ಲಿ ಮಾತ್ರ ನಿತ್ಯವೂ ಪರದಾಟವೇ ಆಗತ್ತೆ. ಇದೇಲ್ಲ ಇಲ್ಲಿನ ಸಿಬ್ಬಂದಿಗಳ ಬೇಜವಾಬ್ದಾರಿನಾ..? ಅಥವಾ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷವಾ..? ಯಾರಿಗೂ ಅರ್ಥವಾಗ್ತಿಲ್ಲ.
ತಕ್ಷಣವೇ ಬಗೆಹರಿಸಿ..!
ಸಧ್ಯ, ವಿದ್ಯಾರ್ಥಿಗಳಿಗೆ ಆನಲೈನ್ ತರಗತಿಗಳು ನಡೆಯುತ್ತಿವೆ. ಹೀಗಾಗಿ, ಮುಂಡಗೋಡ ಹೆಸ್ಕಾಂ ನವರು ಒಂದಿಷ್ಟು ಗಮನ ಹರಿಸಲಿ ಅನ್ನೋದು ನಂದಿಕಟ್ಟಾ ಭಾಗದ ಜನರ ಅಳಲು..