ಬೆಂಗಳೂರು: ಕೇಸರಿ ಪಡೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು ಕಾರವಾರ ಶಾಸಕಿ ರೂಪಾಲಿ ನಾಯಕ್ ಸೇರಿ 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ.
ಯಾವಾಗ ಭೇಟಿ..?
ನಾಳೆ ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ.
ಯಾರ್ಯಾರು ಆ ಶಾಸಕರು..?
ಹರತಾಳು ಹಾಲಪ್ಪ, ಸಿದ್ದು ಸವದಿ, ರಾಜೇಶ ಗೌಡ, ಅಭಯ ಪಾಟೀಲ, ಕುಮಾರ ಬಂಗಾರಪ್ಪ, ಸಿ.ಪಿ.ಯೋಗೀಶ್ವರ, ರೂಪಾಲಿ ನಾಯಕ, ಸುನೀಲ ಕುಮಾರ, ಪರಪ್ಪ ಮುನವಳ್ಳಿ, ಅಪ್ಪಚ್ಚು ರಂಜನ್, ಉದಯ ಗರುಡಾಚಾರ, ಜ್ಯೋತಿ ಗಣೇಶ, ಪ್ರೀತಂ ಗೌಡ, ಅರವಿಂದ ಬೆಲ್ಲದ್, ಮಹೇಶ ಕುಮಠಳ್ಳಿ, ಸೋಮಶೇಖರ ರೆಡ್ಡಿ, ಸಿದ್ದು ಸವದಿ, ಮಹಾದೇವಪ್ಪ ಯಾದವಾಡ ಸೇರಿದಂತೆ 28 ಜನರು ಅವಕಾಶ ಕೇಳಿದ್ದಾರೆ.
ಸಚಿವ ಉಮೇಶ ಕತ್ತಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ್ ಮತ್ತು ಅನಿಲ ಬೆನಕೆ ಹೆಸರು ಕೂಡ ಕೇಳಿ ಬಂದಿದ್ದು ಖಚಿತವಾಗಿಲ್ಲ.
ಪರವೋ..? ವಿರೋಧವೋ..?
ಆದರೆ ಇದರಲ್ಲಿ ಎಷ್ಟು ಜನರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿದ್ದಾರೆ? ಎಷ್ಟು ಜನರು ಯಡಿಯೂರಪ್ಪ ವಿರುದ್ಧವಾಗಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಅಂದಹಾಗೆ,ಯಡಿಯೂರಪ್ಪ ಪರವಾಗಿರುವವರು ಸೀಕ್ರೆಟ್ ಭೇಟಿ ಮಾಡುವ ಸಾಧ್ಯತೆ ಕಡಿಮೆ ಅನಿಸತ್ತೆ.
ಎಲ್ಲವೂ ಸೀಕ್ರೇಟ್..!!
ಇನ್ನು ಅರುಣ ಸಿಂಗ್ ಶಾಸಕರೊಂದಿಗೆ ಚರ್ಚಿಸುವ ಹೊತ್ತಿನಲ್ಲಿ ಮುಖ್ಯಮಂತ್ರಿಗಳಾಗಲಿ, ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಇರುವುದಿಲ್ಲ ಎಂಬುವುದು ಇಲ್ಲಿ ಗಮನಾರ್ಹ. ಹೀಗಾಗಿ ಇದೇಲ್ಲ ಸೀಕ್ರೇಟ್ ಆಗಿಯೇ ನಡೆಯಲಿದೆ.