15 ವಾರ್ಡಿನ ಜನರ ನೀರಿನ ಬವಣೆ ನೀಗಿಸಿದ ಪ ಪಂ ಅಧ್ಯಕ್ಷೆ..!

ದೇವರಹಿಪ್ಪರಗಿ: ಕಳೆದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಾರ್ಡ್ ನಂ-15 ಮತದಾರರಿಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದೆ ಇಂದು ಅವರ ನೀರಿನ ಬವಣೆ ನೀಗಿಸಿ ಋಣ ತೀರಿಸಿ ದಂತಾಗಿದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷರ ಪ್ರತಿನಿಧಿಯಾದ ಮುನೀರ ಅಹ್ಮದ್ ಮಳಖೇಡ ಹೇಳಿದರು.

ಪಟ್ಟಣದಲ್ಲಿ ಬುಧವಾರದಂದು ಪ ಪಂ 15ನೇ ಹಣಕಾಸಿನ ಯೋಜನೆಯಲ್ಲಿ ವಾರ್ಡ ನಂ-15 ರ ಕುಡಿಯುವ ನೀರಿನ ಪೈಪ್ ಲೈನ್ ಸುಮಾರು 4 ಲಕ್ಷ ರೂ ವೆಚ್ಚದ ಕಾಮಗಾರಿ ಆರಂಭಿಸಿ ಮಾತನಾಡಿದ ಅವರು ನಮ್ಮ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಮುಕ್ತವಾಗಿ ನೆರವೇರಿಸಿದ್ದು ಸಂತೋಷವಾಗಿದೆ. ಕಳೆದ ತಿಂಗಳ ಬೋರ್ವೆಲ್ ಹಾಕಿಸಿದ್ದು ಹಾಗೂ ಶೀಘ್ರದಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ಮನೆಮನೆಗೆ ನಲ್ಲಿ ಮಾಡಿಸುವ ಕಾರ್ ವಾರ್ಡ್ ನಂಬರ್ 15,16 ರಲ್ಲಿ ಆರಂಭಿಸಲಾಗುವುದು.

ಇದರಿಂದ ಸಂಪೂರ್ಣ ವಾರ್ಡಿನ ಜನರ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ, ನಮ್ಮ ವಾರ್ಡ್ನಲ್ಲಿ ಹಲವಾರು ರಸ್ತೆಗಳನ್ನು ಸಿ ಸಿ ರಸ್ತೆಯನ್ನಾಗಿ ಮಾಡಿದ್ದು ಇನ್ನೂ ಹಲವು ಸಮಸ್ಯೆಗಳಿಂದ ಸಿ ಸಿ ರಸ್ತೆ ಮಾಡದೆ ಹಾಗೆ ಉಳಿದಿರುತ್ತವೆ ಮುಂಬರುವ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಕಾರ್ಯ ಹಾಗೂ ಅನುದಾನದ ಸಮಸ್ಯೆಯು ಕೊರತೆ ನೀಗಿಸುವ ಮುಖ್ಯ ಉದ್ದೇಶವಾಗಿದೆ ವಾರ್ಡಿನ ಜನರು ಸಾರ್ವಜನಿಕರು ಇಲ್ಲಿಯವರೆಗೆ ಸಹಕರಿಸಿದ್ದಕ್ಕೆ ಪಟ್ಟಣದ ಅಭಿವೃದ್ಧಿಗೆ ಉಪಾಧ್ಯಕ್ಷರು, ಮುಖ್ಯಾಧಿಕಾರಿಗಳು,ಸದಸ್ಯರು ಹಾಗೂ ಎಲ್ಲಾ ಜನರ ಸಹಕಾರದಿಂದ ಶ್ರಮಿಸಿದ್ದೇವೆ, ಅಧಿಕಾರ ಶಾಶ್ವತವಲ್ಲ ಅಧಿಕಾರದಲ್ಲಿ ಇದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು

ಇದೇ ಸಂದರ್ಭದಲ್ಲಿ ಮೌಲಾಲಿ ಕರ್ಜಗಿ, ಮೆಹಬೂಬ ನದಾಫ್, ರಫೀಕ್ ಕರ್ನಾಚಿ, ಅಕ್ಬರ್ ಬೇಪಾರಿ, ಗುತ್ತಿಗೆದಾರರಾದ ಆಬೀದ್ ಹಳ್ಳಿ ಹಾಗೂ ವಾರ್ಡಿನ ಜನರು ಉಪಸ್ಥಿತರಿದ್ದರು.

error: Content is protected !!