ಕೊರೋನಾ 3 ನೇ ಅಲೆ ಅನ್ನೋದೇ ಶುದ್ಧ ಸುಳ್ಳು; ಅದು ಮಿಸ್ಸಿ ರೋಗ: ಸಚಿವ ಈಶ್ವರಪ್ಪ

ಶಿರಸಿ: ಕೊರೊನಾ 3 ನೇ ಅಲೆ ಬರುತ್ತೆ ಅನ್ನೋದು ಶುದ್ಧ ಸುಳ್ಳು. ಕೊರೊನಾ 3 ನೇ ಅಲೆ ಅಲ್ಲ ಅದು. ಅದೊಂದು ಮಿಸ್ಸಿ ಅನ್ನೋ ಕಾಯಿಲೆ. ಇದು ಉಸಿರಾಟ ಅಥವಾ ಸ್ಪರ್ಶದಿಂದಾಗಿ ಒಬ್ಬರಿಂದ ಒಬ್ಬರಿಗೆ ಹರಡೋದಿಲ್ಲ ಅಂತ ಶಿರಸಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ, ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮಕ್ಕಳಿಗೆ 3 ನೇ ಅಲೆಯಿಂದ ತೊಂದರೆಯಾಗುತ್ತೆ, 3 ನೇ ಅಲೆ ಭೀಕರವಾಗಿರಲಿದೆ ಅನ್ನೋದೆಲ್ಲ ಊಹಾಪೋಹ. ಇದು ಮಿಸ್ಸಿ ಅನ್ನೋ ಖಾಯಿಲೆ. ಇದು ಹರಡೋದಿಲ್ಲ. ಇದಕ್ಕೆ ಮಾಸ್ಕ್, ಸಾಮಾಜಿಕ ಅಂತರ ಇವ್ಯಾವುದರ ಅವಶ್ಯಕತೆಯೂ ಇಲ್ಲ.

ಮಗು ಹತ್ರ ತಾಯಿ ಹೋಗಿ ಆರೈಕೆ ಮಾಡ್ಬಹುದು. ಇದು ಟೆಸ್ಟ್ ಮಾಡುವಾಗಲೇ ವಾಸಿ ಆದ್ರೂ ಆಗ್ಬಹುದು. ಇದು ಮುಂದುವರಿದ್ರೆ ಒಂದು ಬದಿಯಲ್ಲಿ ಕಣ್ಣು ಕೆಂಪು ಆಗ್ಬಹುದು. ಬೆರಳುಗಳು ಬಿಳುಚಿಕೊಳ್ಳುತ್ತೆ. ಬಾಯಿಯಲ್ಲಿ ಹುಣ್ಣಾಗುತ್ತೆ. ಇದನ್ನ 5-6 ದಿನದಲ್ಲಿ ಗುರ್ತಿಸಿ ಅದಕ್ಕೆ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ. ತಾತ್ಕಾಲಿಕವಾಗಿ 2 ಕಂಪೆನಿಗಳಲ್ಲಿ ಲಭ್ಯವಿದ್ದು, ತರಿಸುತ್ತಿದ್ದಾರೆ. ಪರಿಹಾರ ಆಗುತ್ತೆ ಅಂತಾ ಈಶ್ವರಪ್ಪ ಹೇಳಿದ್ದಾರೆ.

 

error: Content is protected !!