ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಮಳೆಯ ಅರ್ಭಟ..!

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಅರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಮಲೆನಾಡು ಭಾಗಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರ, ದಾಂಡೇಲಿ ಗಳಲ್ಲಿ ನಿನ್ನೆಯಿಂದ ಗಾಳಿ, ಮಳೆಯ ಅರ್ಭಟ ಜೋರಾಗಿದ್ದು, ಎಡೆಬಿಡದೇ ಮಳೆ ಸುರಿಯುತ್ತಿದೆ.

ಭರ್ಜರಿ ಮಳೆಗೆ ಮಲೆನಾಡು ಭಾಗದ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನು ಭಾರೀ ಮಳೆಯಿಂದ ಗದ್ದೆಗಳು ಜಲಾವೃತವಾಗಿದ್ದು ಅನ್ನದಾತನಿಗೆ ಸಂಕಷ್ಟ ಎದುರಾಗಿದೆ.

error: Content is protected !!