ಅಬ್ಬಾ..! ತಾಲೂಕಿನಲ್ಲಿ ಇಂದು ಕೇವಲ 09 ಪಾಸಿಟಿವ್..!  26 ಸೋಂಕಿತರು ಗುಣಮುಖ, ಮಹಾಮಾರಿ ಇಳಿಮುಖ..!

ಮುಂಡಗೋಡ- ಸದ್ಯ ಮುಂಡಗೋಡಿಗರು ನಿಟ್ಟುಸಿರು ಬಿಡುವ ಸುದ್ದಿ ಹೊರಬಿದ್ದಿದೆ.
ತಾಲೂಕಿನಲ್ಲಿ ಇಂದು ಕೇವಲ 9 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಬಹುಬೇಗ ಕೊರೋನಾ ಮುಕ್ತ ತಾಲೂಕು ಅಂತಾ ಘೋಷಣೆಯಾಗೊ ದಿನ ದೂರವಿಲ್ಲವೆನೋ..!

ಅಂದಹಾಗೆ, ಇಂದು ತಾಲೂಕಿನಲ್ಲಿ ಹೊಸತಾಗಿ ದೃಢ ಪಟ್ಟ 09 ಪಾಸಿಟಿವ್ ಪ್ರಕರಣಗಳು ಸೇರಿ, ತಾಲೂಕಿನಲ್ಲಿ ಒಟ್ಟೂ 116 ಸಕ್ರೀಯ ಪ್ರಕರಣಗಳು ಉಳಿದಂತಾಗಿದೆ.
ಇನ್ನು ಇದ್ರಲ್ಲಿ 29 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 87 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಬಹುಮುಖ್ಯ ಅಂದ್ರೆ ಇಂದು 26 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಇಂದು ಯಾವುದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮಾಹಿತಿ ನೀಡಿದ್ದಾರೆ.

error: Content is protected !!