ಹಾನಗಲ್: ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಹಿರಿಯ ಶಾಸಕ ಸಿ. ಎಂ. ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಇಂದು ಹುಟ್ಟೂರು ಹಾನಗಲ್ ಗೆ ಪಾರ್ಥಿವ ಶರೀರ ಬರಲಿದೆ.
ನಂತರ ಹಾನಗಲ್ ಗೆ 12 ಗಂಟೆಗೆ ಪಾರ್ಥಿವ ಶರೀರ ಆಗಮಿಸೋ ಸಾಧ್ಯತೆಯಿದ್ದು, ಮದ್ಯಾಹ್ನ 1 ಗಂಟೆಗೆ ಸ್ವಗೃಹಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿ, ಕುಟುಂಬಸ್ಥರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮದ್ಯಾಹ್ನ 2 ಗಂಟೆ ನಂತರ ಕುಮಾರೇಶ್ವರ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾನಗಲ್ ಪಟ್ಟಣದಲ್ಲಿ ಕೇವಲ ಒಂದು ಗಂಟೆ ಮಾತ್ರ ಕೋವಿಡ್ ನಿಯಮಗಳ ಪ್ರಕಾರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಅಂತಾ ಆಪ್ತ ಮೂಲಗಳು ತಿಳಿಸಿವೆ.
***************
ಬೆಳೆಸಾಲಕ್ಕಾಗಿ ಮುಂಡಗೋಡ ರೈತರ ಪರದಾಟ ಎಂಥಾದ್ದು..? ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ, ಬೆಂಬಲಿಸಿ