ಸನವಳ್ಳಿಯಲ್ಲಿ ಹಲವು ಮನೆಯೊಳಗೆ ಹೊಕ್ಕ‌ ಮಳೆ ನೀರು: ರಾತ್ರಿಯಿಡೀ ಪರದಾಟ..!

ಮುಂಡಗೋಡ-ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಮಳೆಯ ಕಾರಣಕ್ಕೆ ಕೆಲವು ಗ್ರಾಮಸ್ಥರು ರಾತ್ರಿಯಿಡಿ ನಿದ್ದೆಗೆಡುವಂತಾಯಿತು.

ಸನವಳ್ಳಿ ಗ್ರಾಮದಲ್ಲಿ ವ್ಯವಸ್ಥಿತವಾದ ಗಟಾರಗಳು ಇಲ್ಲದ ಕಾರಣ, ಗ್ರಾಮದ ಹಲವು ಮನೆಗಳಿಗೆ ಮಳೆಯ ನೀರು ಒಳಗೆ ನುಗ್ಗಿತ್ತು. ಹೀಗಾಗಿ, ಮನೆ ಮಂದಿಯೆಲ್ಲ ಮಳೆ ನೀರು ಹೊರಹಾಕಲು ಹರಸಾಹಸ ಪಡಬೇಕಾಯ್ತು.

ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ ಮನೆಯ ಮಂದಿಯೆಲ್ಲ ಮಳೆ ನೀರು ಹೊರ ಹಾಕುವಲ್ಲಿ ನಿರತರಾಗಿದ್ರು. ಇನ್ನು ಮಳೆ ನೀರು ಮನೆಯ ಒಳಗೆ ಹೊಕ್ಕ ಕಾರಣ ಮನೆಯಲ್ಲಿನ ಹಲವು ವಸ್ತುಗಳು ಮಳೆಯ ನೀರಲ್ಲಿ ನೆನೆದು ಹಾಳಾಗಿವೆ. ಹೀಗಾಗಿ ಸಮರ್ಪಕ ಗಟಾರು ವ್ಯವಸ್ಥೆ ಮಾಡದ ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ.

error: Content is protected !!