VRDM ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸೆಪ್ಟಿ ಕಿಟ್ ವಿತರಣೆ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ದೇಶಪಾಂಡೆ ರೂಡ್ ಸೆಟಿ ವತಿಯಿಂದ ಇಂದು ಮೆಡಿಕಲ್ ಸೆಪ್ಟಿ ಕಿಟ್ ವಿತರಿಸಲಾಯಿತು.

ತಾಲೂಕಿನ ಹುನಗುಂದ ಗ್ರಾಮದ ವಿರಕ್ತ ಮಠದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್ ಉದ್ಘಾಟಿಸಿ ಮಾತನಾಡಿದ್ರು.

ಹುನಗುಂದ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಕುನ್ನೂರ್, ಉಪಾಧ್ಯಕ್ಷ ತುಕಾರಾಮ್ ಹೊನ್ನಳ್ಳಿ, ಕಾಂಗ್ರೆಸ್ ಯುವ ಮುಖಂಡ ಧರ್ಮರಾಜ್ ನಡಗೇರಿ, ಗ್ರಾಪಂ ಸದಸ್ಯರಾದ ಈಶ್ವರಗೌಡ ಅರಳಿಹೊಂಡ ಸೇರಿ ದೇಶಪಾಂಡೆ ರೂಡಸೆಟಿಯ ಸಂಚಾಲಕರು ಉಪಸ್ತಿತರಿದ್ದರು.