ಮುಂಡಗೋಡ: ತಾಲೂಕಿನಲ್ಲಿಂದು 58 ಪಾಸಿಟಿವ್ ದೃಢ, 87 ಗುಣಮುಖ, ಒಂದು ಸಾವು..!

ಮುಂಡಗೋಡ-ತಾಲೂಕಿನಲ್ಲಿ ಇಂದು 58 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಓರ್ವ ಸಾವನ್ನಿಪ್ಪಿದ್ದಾನೆ. ಇನ್ನು 87 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ತಾಲೂಕಿನಲ್ಲಿ ಒಟ್ಟೂ 384 ಸಕ್ರೀಯ ಪ್ರಕರಣಗಳಿದ್ದು, 114 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 227 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 43 ಜನ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ.

ಇನ್ನು ತಾಲೂಕಿನ ಇಂದಿರಾನಗರದ 76 ವರ್ಷದ ವೃದ್ದ ಕೊರೋನಾಗೆ ಇಂದು ಬಲಿಯಾಗಿದ್ದು, ಇದುವರೆಗೂ ತಾಲೂಕಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ.

ಅಂದಹಾಗೆ, ಇದುವರೆಗೂ ತಾಲೂಕಿನಲ್ಲಿ 3616 ಪ್ರಕರಣಗಳು ಪತ್ತೆಯಾಗಿದ್ದು ಅದ್ರಲ್ಲಿ,3174 ಸೋಂಕಿತರು ಗುಣಮುಖರಾಗಿದ್ದಾರೆ.