ಮುಂಡಗೋಡ-ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಇಂದಿರಾನಗರದಲ್ಲಿ ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚಿದೆ.

ಅಂದಹಾಗೆ, ಇದುವರೆಗೂ ಒಂದೇ ಒಂದು ಪಾಸಿಟಿವ್ ಪ್ರಕರಣ ದಾಖಲಾಗದೇ ಸುರಕ್ಷಿತವಾಗಿದ್ದ ಹಳ್ಳಿಯಲ್ಲಿ ಈಗ ಕೊರೋನಾದಿಂದಲೇ ಒಂದು ಸಾವು ಸಂಭವಿಸಿದೆ.

ನಿನ್ನೆ ಈ ಹಳ್ಳಿಯ 76 ವರ್ಷ ವಯಸ್ಸಿನ ವೃದ್ದ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವದ್ದನನ್ನು ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ದ ಮೃತಪಟ್ಟಿದ್ದಾನೆ. ಹೀಗಾಗಿ, ಸೋಂಕಿತ ವೃದ್ಧನ ಅಂತಿಮ ಸಂಸ್ಕಾರ ಕೋವಿಡ್ ನಿಯಮಾನುಸಾರ, ಇಂದಿರಾನಗರದಲ್ಲಿ ನೆರವೇರಿಸಲಾಯಿತು. ಪಿಪಿಇ ಕಿಟ್ ಧರಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.