ಮುಂಡಗೋಡ: ಕೊರೋನಾ ಅನ್ನೋದು ಈಗ ಇಡೀ ದೇಶದ ಜನರ ಜೀವ ಹಿಂಡ್ತಿದೆ. ಅದ್ರಲ್ಲೂ ಕೊರೋನಾ ಸೋಂಕು ದೃಢಪಟ್ಟರೆ ಮುಗಿತು ಎಷ್ಟೊ ಸೋಂಕಿತರು ಭಯದಿಂದಲೇ ಪ್ರಾಣ ಕಳೆದುಕೊಳ್ತಿದಾರೆ.
ಆದ್ರೆ ಇಲ್ಲೊಬ್ಬ ಸೋಂಕಿತ ಯುವಕ ಕೋವಿಡ್ ಕೇರ್ ಸೆಂಟರ್ ನಲ್ಲೇ ಕುಣಿದು ಕುಪ್ಪಳಿಸ್ತಿದಾನೆ. ಕೋವಿಡ್ ಅಂದ್ರೆ ಭಯ ಪಡೋ ಜನ್ರಿಗೆ ಧೈರ್ಯ ತುಂಬಿದ್ದಾನೆ.
ತನ್ನ ಜೊತೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಅಡ್ಮಿಟ್ ಆಗಿದ್ದ ಇನ್ನಿತರ ರೋಗಿಗಳಿಗೂ ಆತ್ಮ ಸ್ಥೈರ್ಯ ತುಂಬಿದ್ದಾನೆ. ನಕ್ಕು ನಲಿಸಿದ್ದಾನೆ. ಕೊರೋನಾ ಅಂದ್ರೆ ಯಾರೂ ಭಯ ಪಡಬೇಡಿ ಅಂತಾ ಎಲ್ರಿಗೂ ತಿಳಿ ಹೇಳಿದ್ದಾನೆ..
ಅಂದಹಾಗೆ, ಈತನ ಹೆಸ್ರು ಮಹೇಂದ್ರ ಬಾಬು ಪಾಟೀಲ್ ಅಂತಾ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದವನು.. ಕಳೆದ ನಾಲ್ಕು ದಿನದ ಹಿಂದೆ ಕೊರೋನಾ ಸೋಂಕು ಪೀಡಿತನಾಗಿ ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದಾನೆ..
ಆದ್ರೆ ಈತ ಇಲ್ಲಿ ಅಡ್ಮಿಟ್ ಆದ ನಂತರ ಇಲ್ಲಿನ ಇನ್ನಿತರ ಸೋಂಕಿತರಿಗೂ ಮನರಂಜನೆ ನೀಡ್ತಿದಾನೆ. ನಕ್ಕು ನಗಿಸ್ತಿದಾನೆ. ಈ ಮೂಲಕ ಸೋಂಕಿತರ ಪ್ರೀತಿಗೆ ಪಾತ್ರವಾಗಿದ್ದಾನೆ.. ಜೊತೆಗೆ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದ್ದಾನೆ.
ಪಬ್ಲಿಕ್ ಫಸ್ಟ್ ನ್ಯೂಸ್ ವೆಬ್ ಡೆಸ್ಕ್