ಅಳ್ನಾವರ- ತಾಲೂಕಿನ ಕಡಬಗಟ್ಟಿ ಗ್ರಾ.ಪಂಚಾಯತ ವ್ಯಾಪ್ತಿಯ ಹುಲಿಕೇರಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಮಾಡಲಾಯಿತು.

 

ಈ ವೇಳೆ ಜನರಿಗೆ ತೊಂದರೆ ಆಗದಂತೆ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮಾವಳಿ ಪಾಲನೆಯನ್ನು ಮಾಡಲಾಯಿತು ಮತ್ತು ಮಾಸ್ಕ ಹಾಕದವರಿಗೆ ಜಾಗೃತಿ ಮೂಡಿಸಿ ನಿಯಮಾವಳಿಗಳನ್ನು ಪಾಲಿಸಲು ಸೂಚನೆ ನೀಡಲಾಯಿತು.

 

ಜನರು ಭಯ ಪಡುವ ಅವಶ್ಯಕತೆ ಇಲ್ಲ ಕೋವಿಡ್ ಗುಣಲಕ್ಷಣಗಳು ಕಂಡು ಬಂದಲ್ಲಿ ಸರಕಾರಿ ಶಾಲೆಯನ್ನು ಕೋವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತನೆ ಮಾಡಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನಿಡಲಾಗುತ್ತದೆ ಅಂತಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಅಭೂಬಕರ ನದಾಪ ತಿಳಿಸಿದರು.

 

ಈ ಸಂಧರ್ಭದಲ್ಲಿ ಗ್ರಾ.ಪಂಚಾಯತ ಸದಸ್ಯರಾದ ಶ್ರೀಮತಿ ಇಮಾಂಬಿ ನದಾಫ, ಗ್ರಾ.ಪಂ ಕಾರ್ಯದರ್ಶಿ ಷಣ್ಮುಖ ಸುಳಗೇಕರ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು , ಬಸವರಾಜ ಇನಾಮದಾರ್, ದಾವಲ್, ತಹಶೀಲ್ದಾರ ಮಲ್ಲಿಕಾರ್ಜುನ ಕಲ್ಲೂರ, ಜಮಾಲ ಮುನವಳ್ಳಿ ಸದ್ದಾಂ ಬೋಗುರ, ಇಸ್ಮಾಯಿಲ್ ಪಠಾಣ್, ಶಕೀಲ್ ಗೌಂಡಿ, ಸಂತೋಷ ಹರಿಜನ, ಶಿಂದಬಹಾದ, ಹುಸೇನ್ ಹಾಜರಿದ್ದರು.

Comments are closed.
error: Content is protected !!